ಫಾ. ಮಹೇಶ್ ಆತ್ಮಹತ್ಯೆ ಪ್ರಕರಣ: ಮಾನಹಾನಿಕರ ಅನಾಮಿಕ ಪತ್ರ ಬರೆದ ಮಾನಗೇಡಿಯನ್ನು ಬಂಧಿಸಬೇಕಿದೆ
ಉಡುಪಿ ಜಿಲ್ಲೆಯ ಶಿರ್ವಾದ ಡೊನ್ ಬೊಸ್ಕೊ ಶಾಲೆಯ ಪ್ರಿನ್ಸಿಪಾಲ್ ಆಗಿದ್ದ ಫಾ. ಮಹೇಶ್ ಡಿಸೋಜಾ ಅವರ ಅಸಹಜ ಸಾವಿನ ಪ್ರಕರಣದ ತನಿಖೆಯನ್ನು ದಕ್ಷತೆಯಿಂದ ನಡೆಸುತ್ತಿರುವ ಪೊಲೀಸರು ಈಗಾಗಲೇ ಒಂದು ತಾರ್ಕಿಕ ಅಂತ್ಯಕ್ಕೆ ಬಂದಿದ್ದು, ಸಾಕ್ಷ್ಯಾಧಾರಗಳ ಆಧಾರದಲ್ಲಿ ಓರ್ವನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ತನಿಖೆ ನಡೆಸುತ್ತಿರುವ ಕಾಪು ಸರ್ಕಲ್ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಓರ್ವ ದಕ್ಷ ಅಧಿಕಾರಿಯೆಂದು ಹೆಸರುವಾಸಿಯಾಗಿದ್ದಾರೆ. ಶಿರ್ವಾದ ಪ್ರಕರಣ ತುಂಬಾ ಕ್ಲಿಷ್ಟಕರವೆಂಬ ಅಭಿಪ್ರಾಯ ಜನರಲ್ಲಿದೆ. ಜನಾನುರಾಗಿಯಾಗಿ ಪ್ರಸಿದ್ಧರಾಗಿದ್ದ ಓರ್ವ ಜನಪ್ರಿಯ ಶಿಕ್ಷಕ ಮತ್ತು ಧರ್ಮಗುರುವಾಗಿದ್ದ ಫಾ. ಮಹೇಶ್ ಅವರ ಸಾವು ಜನರನ್ನು ಕಂಗೆಡಿಸಿತ್ತು. ಇಂದಿಗೂ ಅವರ ಮರಣದ ಆಘಾತದಿಂದ ಜನರು ಹೊರ ಬಂದಿಲ್ಲ. ತನಿಖಾಧಿಕಾರಿಯವರು ಕೂಲಂಕಷವಾಗಿ ತನಿಖೆ ನಡೆಸಿದ್ದಾರೆ ಎಂಬ ಭರವಸೆಯಿದೆ. ಗುರುತರವಾದ ಹೊಣೆಗಾರಿಕೆಯನ್ನು ಅವರು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ.
ಫಾ. ಮಹೇಶ್ ಡಿಸೋಜರ ಸಾವು ಆತ್ಮಹತ್ಯೆಯೆಂದು ಹೇಳಲಾಗಿದ್ದು, ಅದಕ್ಕೆ ಪ್ರಚೋದನೆ ನೀಡಿರುವ ವ್ಯಕ್ತಿಯನ್ನು ಈಗಾಗಲೇ ಬಂಧಿಸಲಾಗಿದೆ. ಆ ವಿಚಾರ ಏನೇ ಆಗಿದ್ದರೂ, ಫಾ. ಮಹೇಶ್ ಅವರು ಆ ಒಂದು ಕಾರಣಕ್ಕಷ್ಟೇ ಆತ್ಮಹತ್ಯೆ ಮಾಡಿರಲಾರರು ಎಂಬುದು ಜನರ ಅನಿಸಿಕೆ. ಯಾಕೆಂದರೆ, ಫಾ. ಮಹೇಶ್ ಅವರಿಗೆ ಬಹಳ ಸಮಯದಿಂದ ಹಲವರಿಂದ ಕಿರುಕುಳ ಇತ್ತೆಂಬುದಾಗಿ ಅವರ ಆತ್ಮೀಯರಿಗೆ ತಿಳಿದಿದೆ. ಅದು ಪೊಲೀಸರಿಗೂ ತಿಳಿದಿದೆ. ಫಾ. ಮಹೇಶ್ ಅವರ ಜನಪ್ರಿಯತೆ ಮತ್ತು ಪ್ರಾಮಾಣಿಕತನದ ಜೊತೆಗೆ ಎಳೆಯ ಪ್ರಾಯದಲ್ಲೇ ಅವರು ಮಹತ್ತರ ಸಾಧನೆ ಮಾಡಿದ್ದನ್ನು ಕಂಡು ಹೊಟ್ಟೆಕಿಚ್ಚಿನಿಂದ ಬಳಲುತ್ತಿದ್ದವರು ಅವರಿಗೆ ಬಹಳಷ್ಟು ಕಿರುಕುಳ ಕೊಟ್ಟಿದ್ದಾರೆಂಬುದು ಮೇಲ್ನೋಟಕ್ಕೆ ತಿಳಿದು ಬರುತ್ತದೆ.
ಫಾ. ಮಹೇಶ್ ಅವರನ್ನು ಗುರಿ ಮಾಡಿ, ಅವರ ಮನೋಸ್ಥೈರ್ಯವನ್ನು ಉಡುಗಿಸುವ ದುರುದ್ದೇಶದೊಂದಿಗೆ ಒಂದು ಅನಾಮಿಕ ಪತ್ರವನ್ನು ಬರೆದು ಹಂಚಲಾಗಿತ್ತು. ಅತ್ಯಂತ ಅವಾಚ್ಯ ಭಾಷೆಯನ್ನು ಬಳಸಿ ಫಾ. ಮಹೇಶ್ ಅವರನ್ನು ಹೀನಾಯವಾಗಿ ನಿಂದಿಸಿದ ಆ ಪತ್ರದ ಉದ್ದೇಶ ಕೇವಲ ಅಪಪ್ರಚಾರ, ಮಾನಹಾನಿ ಮಾಡುವುದಾಗಿರಲಿಲ್ಲ. ಬದಲಾಗಿ ಫಾ. ಮಹೇಶ್ ಅವರನ್ನು ಶತಾಯಗತಾಯ ಶಿರ್ವಾದಿಂದ ‘ಓಡಿಸುವ’ ಗುರಿಯನ್ನು ಹೊಂದಿತ್ತೆಂಬುದನ್ನು ಅದನ್ನು ಓದಿದ ಯಾರಿಗಾದರೂ ತಿಳಿಯುತ್ತದೆ. ಈಗಾಗಲೇ ನಾವು ಫಾ. ಮಹೇಶ್‍ರ ಕುಟುಂಬದವರ ಮತ್ತು ಇತರ ಕೆಲವರ ಜೊತೆಗೆ ಮಾತನಾಡಿದ್ದು, ಅವರೂ ಅದನ್ನೇ ಹೇಳುತ್ತಿದ್ದಾರೆ. ಆ ಪತ್ರದಿಂದಾಗಿ ಫಾ. ಮಹೇಶ್ ಅವರು ಬಹಳಷ್ಟು ನೊಂದಿದ್ದರು ಮಾತ್ರವಲ್ಲ, ಆ ಪತ್ರವನ್ನು ನೋಡಿಕೊಂಡು ವ್ಯಥೆಪಟ್ಟು ಆಗಾಗ ಅಳುತ್ತಿದ್ದರು ಎಂಬುದೂ ಬಹಿರಂಗಗೊಂಡಿದೆ. ಅವರಿಗೆ ಅದರಿಂದ ಬಹಳ ಆಘಾತವಾಗಿತ್ತು. ಅಂತಹ ಪತ್ರದಿಂದ ಯಾರಿಗಾದರೂ ಜಂಘಾಬಲವೇ ಉಡುಗುವ ಸಾಧ್ಯತೆಯಿದೆ.
ಆ ಅನಾಮಿಕ ಪತ್ರದಲ್ಲಿನ ಭಾಷೆ, ಪದ ಪ್ರಯೋಗದಿಂದಲೇ ಅದನ್ನು ಬರೆದವರ ಸಂಸ್ಕಾರವೆಂಥದ್ದೆಂದು ತಿಳಿಯುತ್ತದೆ. ಅಷ್ಟೊಂದು ಕೀಳು ಭಾಷೆಯಲ್ಲಿ ಅದನ್ನು ಬರೆದಿರುವವರಿಗೆ ಫಾ. ಮಹೇಶ್ ಡಿಸೋಜಾರ ಮೇಲೆ ಬಹಳ ಈರ್ಷ್ಯೆಯಿತ್ತು ಎಂದು ಗೊತ್ತಾಗುತ್ತದೆ. ಹೇಗಾದರೂ ಮಾಡಿ ಫಾ. ಮಹೇಶ್‍ರನ್ನು ಅವಮಾನಗೊಳಿಸಬೇಕು, ಅವರ ಆತ್ಮವಿಶ್ವಾಸ ಉಡುಗಿಸಬೇಕು ಮತ್ತು ಅವರ ಹೆಸರನ್ನು ಕೆಡಿಸಿ ಅವರಿಗೆ ಕಷ್ಟ-ನಷ್ಟವನ್ನುಂಟು ಮಾಡುವುದು ಆ ಪತ್ರದ ಸೃಷ್ಟಿಕರ್ತರ ಇರಾದೆಯಾಗಿತ್ತೆನ್ನುವುದು ಸ್ಪಷ್ಟ. ಫಾ. ಮಹೇಶ್ ಅವರನ್ನು ಶೋಷಿಸಬೇಕೆನ್ನುವ ಮತ್ತು ಶಿರ್ವಾದಿಂದ ತೊಲಗಿಸಬೇಕೆನ್ನುವ ಬಹಳ ದೊಡ್ಡ ಸಂಚಿನ ಭಾಗವಾಗಿ ಈ ಪತ್ರವನ್ನು ಬರೆದು ಹಂಚಿರಬೇಕೆಂದು ಕಾಣುತ್ತದೆ.
ಇಂತಹ ಅನಾಗರಿಕ ಮತ್ತು ನೀಚ ಕೃತ್ಯದಿಂದಾಗಿ ಫಾ. ಮಹೇಶ್ ಅವರಿಗೆ ತುಂಬಾ ದುಃಖ ಮತ್ತು ನಿರಾಸೆಯಾಗಿತ್ತು. ಆ ಪತ್ರದಲ್ಲಿ ತಮ್ಮ ಇಚ್ಛೆಯಂತೆ ಫಾ. ಮಹೇಶ್‍ರ ಮೇಲೆ ಬಿಶಪರು ಸೂಕ್ತ ಕ್ರಮ ತೆಗೆದುಕೊಳ್ಳದಿದ್ದಲ್ಲಿ ‘ಮುಂದೆ ಒಂದು ದೊಡ್ಡ ಅನಾಹುತ ನಡೆಯಲಿಕ್ಕಿದೆ’ ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ಅದನ್ನು ನೋಡಿದರೆ, ಕೇವಲ ಅವಮಾನ ಮಾಡುವ ಉದ್ದೇಶ ಮಾತ್ರ ಅದನ್ನು ಬರೆದವರಿಗೆ ಇರಲಿಲ್ಲ, ಬದಲಾಗಿ, ಬೇರೆ ಏನೋ ಮಹತ್ತರ ಉದ್ದೇಶವಿತ್ತು ಎಂಬುದಾಗಿ ಕಂಡುಬರುವುದಿಲ್ಲವೇ? ಶತಾಯಗತಾಯವಾಗಿ ಫಾ. ಮಹೇಶ್‍ರನ್ನು ಶಿರ್ವಾದಿಂದ ಹೊರಕ್ಕೆ ಕಳುಹಿಸುವುದೇ ಅವರ ಗುರಿಯಾಗಿತ್ತೇ? ಅದು ಬೇರೆ ಊರಿಗೋ ಅಥವಾ ಪರಲೋಕಕ್ಕೋ ಎಂಬುದನ್ನು ಪೊಲೀಸರು ತನಿಖೆ ನಡೆಸಿ ಕಂಡುಕೊಳ್ಳಬೇಕು.
ಕೊಂಕಣಿ ಭಯೋತ್ಪಾದಕರಿಂದ ವಿಕೃತಿ!?
ಕೊಂಕಣಿ ಕ್ರೈಸ್ತ ಸಮುದಾಯದಲ್ಲಿಯೂ ಕೆಲ ಖೂಳರು ಇದ್ದಾರೆ! ಕ್ರೈಸ್ತ ಸಮುದಾಯದ ಜನರು ಶಾಂತಿ ಸ್ವಭಾವದವರೂ ಶಿಸ್ತಿನಿಂದಿರುವವರೂ ಎಂದು ಎಲ್ಲರೂ ಬಲ್ಲರು. ಆದರೆ ಇಂತಹ ಸಮಾಜದಲ್ಲಿಯೂ ಕೆಲ ಅನಾಗರಿಕ ದುಷ್ಟ ವ್ಯಕ್ತಿಗಳು ಇದ್ದಾರೆ! ಹೆಸರಿಗೆ ಇವರು ಸುಶಿಕ್ಷಿತರಾಗಿದ್ದರೂ ಇವರು ಮಾಡುವ ಕೆಲಸಗಳು ಮಾತ್ರ ಅತ್ಯಂತ ಹೇಯವಾಗಿವೆ. ಅದರ ಒಂದು ಭಾಗವಾಗಿಯೇ ಈ ಪ್ರಸ್ತುತ ಅನಾಮಿಕ ಪತ್ರ ಉದ್ಭವಿಸಿರಬಹುದು ಎಂದೆನಿಸುತ್ತದೆ.
ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡುವ ಜನರು ಎಲ್ಲೆಡೆ ಇದ್ದಾರೆ. ಇತರರನ್ನು ಅವಮಾನಿಸುವುದೇ ಅವರ ದಿನಚರಿಯಾಗಿದೆ. ಕಂಡ ಕಂಡವರನ್ನು ನಿಂದಿಸುವುದು, ಸುಳ್ಳು ಆರೋಪಗಳನ್ನು ಹೊರಿಸಿ ಅಪಪ್ರಚಾರ ನಡೆಸುವುದು, ಹೀಯಾಳಿಸುವುದು ಮುಂತಾದ ಕೀಳು ಕೆಲಸಗಳಲ್ಲಿ ನಿರತರಾಗಿರುತ್ತಾರೆ. ಇವರಲ್ಲಿ ಕೆಲವರು ಎಷ್ಟೊಂದು ಮುಂದುವರಿದಿದ್ದಾರೆ ಎಂದರೆ, ತಮಗಾಗದವರ ಮೇಲೆ ಉದ್ದೇಶಪೂರ್ವಕವಾಗಿ ಸುಳ್ಳು ದೂರನ್ನು ದಾಖಲಿಸಿ, ನಂತರ ಅದರ ದಾಖಲೆಗಳನ್ನು ಬಳಸಿ ವ್ಯಕ್ತಿತ್ವ ಹರಣ, ಚಾರಿತ್ರ್ಯವಧೆ ಮಾಡುತ್ತಾರೆ. ಇಂತಹದೇ ಮನಸ್ಥಿತಿಯ ವ್ಯಕ್ತಿಗಳಲ್ಲೊಬ್ಬ ಅಥವಾ ಹೆಚ್ಚಿನ ವ್ಯಕ್ತಿಗಳು ಫಾ. ಮಹೇಶ್ ವಿರುದ್ಧ ಮಾನಹಾನಿಕರ ಪತ್ರವನ್ನು ಬರೆದಿರುವ ಸಾಧ್ಯತೆಯಿದೆ ಎಂದು ಜನರಾಡಿಕೊಳ್ಳುತ್ತಿದ್ದಾರೆ.
ಕೆಲವು ಉದಾಹರಣೆಗಳನ್ನು ಕೊಡುವುದಾದರೆ, ಕೆಲ ಸಮಯದ ಹಿಂದೆ, ಈ ವಿಕೃತ ಪುಂಡರ ಪೈಕಿ ಕೆಲವರು, ಒಂದು ಸಿನೆಮಾದ ಬಗ್ಗೆ ಅವಮಾನಕರವಾಗಿ ಫೇಸ್‍ಬುಕ್‍ನಲ್ಲಿ ನಿಂದನೆಗೈದು ಬಹಳಷ್ಟು ಬರೆದಿದ್ದರು. ಸಿನೆಮಾ ತಂಡದವರು ಕೂಡಲೇ ಪೊಲೀಸರಿಗೆ ದೂರು ನೀಡಿದ್ದರು. ಅದರಿಂದಾಗಿ ಈ ಪುಂಡರು ಕ್ಷಮೆ ಯಾಚಿಸಿ ತಮ್ಮ ತಪ್ಪನ್ನು ಒಪ್ಪಿಕೊಂಡು ಮಂಗಳೂರಿನ ಸೈಬರ್ ಪೊಲೀಸರಿಗೆ ಮುಚ್ಚಳಿಕೆ ಬರೆದು ಕೊಟ್ಟಿದ್ದರು ಎಂದು ಸುದ್ದಿಯಾಗಿತ್ತು. ಹೆದರಿಕೊಂಡ ಈ ನಿಂದನಾವೀರರು ಕ್ಷಮೆ ಯಾಚಿಸಿದ ಬಳಿಕ ತಮ್ಮ ಫೇಸ್‍ಬುಕ್ ಪೋಸ್ಟನ್ನು ಮರೆಮಾಚಿದ್ದಾರಂತೆ! ಇದನ್ನು ಆ ಸಿನೆಮಾದ ತಂಡವೇ ಹೇಳಿಕೊಂಡಿದೆ.
ಅದಕ್ಕೂ ಕೆಲ ದಿನಗಳ ಹಿಂದೆ ಇದೇ ವ್ಯಕ್ತಿಗಳು ತುಳು ಸಿನೆಮಾವೊಂದನ್ನು ತೆಗಳಿ, ಓರ್ವ ಹಿರಿಯ ನಟರನ್ನು ಅಸಹ್ಯವಾಗಿ ನಿಂದಿಸಿ ಅವಾಚ್ಯವಾಗಿ ಬರೆದಿದ್ದರು. ಆಗ ಮೂಡುಬಿದ್ರೆ ಕಡೆಯ ಓರ್ವ ನಿರ್ದೇಶಕರು ‘ಟೀಚರ್’ ಪೋಲಿ ವಿದ್ಯಾರ್ಥಿಗಳಿಗೆ ಬೆತ್ತದಿಂದ ಬಾರಿಸಿದಂತೆ ಇವರನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದರು. ಈ ಮತಿಗೇಡಿ ವ್ಯಕ್ತಿಗಳು ತಮಗಾಗದವನ್ನು ನಿಂದಿಸಲು ಸಾಮಾಜಿಕ ಜಾಲತಾಣಗಳಲ್ಲದೆ ಸ್ವಂತ ಬ್ಲಾಗ್‍ಗಳನ್ನು ರಚಿಸುವುದರಲ್ಲಿಯೂ ಸಿದ್ಧಹಸ್ತರು. (ನಿಂದಿಸುವುದಕ್ಕೋಸ್ಕರವೇ ಅಸಹ್ಯ ಬ್ಲಾಗ್‍ಗಳನ್ನು ತನಗಾಗಿ ಮತ್ತು ಇತರರಿಗೆ ರಚಿಸುವುದರಲ್ಲಿ ಪರಿಣತನಾದ ಓರ್ವ ಭಯೋತ್ಪಾದಕನನ್ನು ‘ಬ್ಲಾಗ್ ಬಾಸ್ಟರ್ಡ್’ ಎಂದು ಕರೆಯುತ್ತಾರೆಂದು ಹೇಳಲಾಗಿದೆ. ಆ ಹೆಸರು ಆತನ ಫಟಿಂಗ ಮಿತ್ರ ವಲಯದಲ್ಲಿ ಬ್ಲಾಕ್ ಬಸ್ಟರ್ ಕೂಡಾ ಆಗಿದೆಯಂತೆ!?).
ಕೊಂಕಣಿಯ ಖ್ಯಾತ ಸಾಹಿತಿ, ಹಿರಿಯ ವೈದ್ಯರೋರ್ವರನ್ನು ಹಾಗೂ ಇತರ ಪ್ರಮುಖರನ್ನು ತೆಗಳಿ ಬರೆದ ಲೇಖನಗಳನ್ನೊಳಗೊಂಡ ಕೆಲವು ಬ್ಲಾಗ್‍ಗಳನ್ನು ಇವರು ರಚಿಸಿದ್ದರು. ಅಲ್ಲದೆ, ಖಾಸಗಿ ಬ್ಯಾಂಕ್ ಒಂದರ ಚುನಾವಣೆಯ ಸಂದರ್ಭ ಆಡಳಿತದಲ್ಲಿದ್ದ ಮುಖ್ಯಸ್ಥರ ವಿರುದ್ಧ ಅಪಪ್ರಚಾರ ನಡೆಸಲು ತುಂಬಾ ಕೀಳು ಮಟ್ಟದ ಬರಹಗಳನ್ನು ಪ್ರಕಟಿಸಲು ಒಂದು ಬ್ಲಾಗನ್ನು ಇವರೇ ರಚಿಸಿದ್ದರು. (ಬೇರೆ ರೀತಿಯಲ್ಲಿಯೂ ಅಪಪ್ರಚಾರ ನಡೆಸುವುದರಲ್ಲಿ ಇವರು ಸಿದ್ಧಹಸ್ತರು). ಕೊಂಕಣಿಯ ಸಾಧಕರು ಮತ್ತು ಸಂಘ-ಸಂಸ್ಥೆಗಳ ಹೆಸರನ್ನು ಹಾಳು ಮಾಡುವುದರಲ್ಲಿ ನಿಪುಣರಾದ ಇವರು ನಿರಂತರವಾಗಿ ಸುಳ್ಳನ್ನು ಬರೆಯುತ್ತಾ, ಅಪಪ್ರಚಾರ ಮತ್ತು ವ್ಯಕ್ತಿತ್ವಹರಣದಲ್ಲಿ ಸಕ್ರಿಯರಾಗಿದ್ದಾರೆ. ಅಕ್ಷರದ ಹಾದರ ಮಾಡುವುದೇ ಇವರ ದಿನನಿತ್ಯದ ಕಾಯಕವೆಂಬಂತಾಗಿದೆ.
ಪ್ರಪಂಚದಲ್ಲಿ ಹೇಗೆ ಭಯೋತ್ಪಾದಕರು ವರ್ತಿಸುತ್ತಾರೋ, ಅದೇ ರೀತಿ ಕೊಂಕಣಿಯ ಈ ಅಕ್ಷರ ಭಯೋತ್ಪಾದಕರು ಕಾರ್ಯ ನಿರ್ವಹಿಸುತ್ತಾರೆ. ಕೆಲವರು ಹ್ಯಾಂಡ್ಲರ್‌ಗಳಂತೆ ಮರೆಯಲ್ಲಿದ್ದು, ಇತರರಿಗೆ ಆತ್ಮಹತ್ಯಾ ಬಾಂಬರ್‌ಗಳಂತೆ ಜವಾಬ್ದಾರಿ ವಹಿಸಿದ್ದಾರೆ. ಹ್ಯಾಂಡ್ಲರ್‌ಗಳು ತೆರೆಮರೆಯಲ್ಲುಳಿದು ಸುರಕ್ಷಿತವಾಗಿರಲು ಬಯಸುತ್ತಾರೆ?! ಆದರೆ ಈ ಸೂಸೈಡ್ ಬರಹಗಾರರು ಮಾತ್ರ ಮುಂದೆ ನಿಂತು ಹೋರಾಡುತ್ತಾರೆ! ತಮಗೆ ಹೇಳಿಕೊಟ್ಟಂತೆ ಅಥವಾ ತಮ್ಮ ಮತಿಗೆಟ್ಟ ಕೊಳಕು ಮನಸ್ಸಿಗೆ ಬಂದಂತೆ ವಾಚಾಮಗೋಚರವಾಗಿ ನಿಂದನೆಯ ಬರಹಗಳಿಂದ ಪರರನ್ನು ಅವಮಾನಿಸುತ್ತಾ ಇರುತ್ತಾರೆ.
ಇವರಿಗೆ ದಿನಂಪ್ರತಿ ಯಾರಾದರೊಬ್ಬರನ್ನು ಅವಮಾನಿಸಿ, ಹೀಯಾಳಿಸಿ ಬರೆಯದಿದ್ದರೆ ತಿಂದದ್ದು ಜೀರ್ಣಗೊಳ್ಳುವುದಿಲ್ಲವೆನಿಸುತ್ತದೆ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಸ್ಥಳೀಯ ಜನರ ವರೆಗೆ ಸಿಕ್ಕಸಿಕ್ಕವರನ್ನು ನಿಂದಿಸಿ ವಿಕೃತ ಸುಖ ಅನುಭವಿಸುತ್ತಿರುತ್ತಾರೆ. ಹಾಗೆ ಮಾಡುವುದರಿಂದ ತಾವು ಬಹಳ ದೊಡ್ಡ ಬುದ್ಧಿವಂತರೂ ಸಾಮಾಜಿಕ ಕಳಕಳಿಯುಳ್ಳವರೂ ಎಂದು ತೋರ್ಪಡಿಸುತ್ತಾ, ಹುಚ್ಚು ಭ್ರಮೆಗೊಳಪಟ್ಟು ಮತ್ತಷ್ಟು ಕೀಳುತನಕ್ಕಿಳಿಯುತ್ತಿರುತ್ತಾರೆ!
ಫಾ. ಮಹೇಶ್ ಡಿಸೋಜಾರನ್ನು ತುಂಬಾ ಕಾಡಿದ್ದ ಆ ಅನಾಮಿಕ ಪತ್ರವನ್ನು ಇದೇ ಗ್ಯಾಂಗಿಗೆ ಸೇರಿದವರೇ ಬರೆದಿರಬೇಕೆಂದು ಕೊಂಕಣಿ ಕ್ರೈಸ್ತ ಜನರಿಗೆ ಸಂಶಯವಿದೆ. ತುಂಬಾ ಅವಾಚ್ಯ ಶಬ್ದಗಳಿಂದ ಕೂಡಿದ ಆ ಪತ್ರದ ಭಾಷೆ ನೋಡಿದರೆ, ಸುಸಂಸ್ಕೃತರಾದ ಯಾರೇ ಆದರೂ ಹಾಗೆ ಬರೆಯಲು ಸಾಧ್ಯವಿಲ್ಲ. ಅಷ್ಟೊಂದು ಕೊಳಕು ಮಾತುಗಳು ಅದರಲ್ಲಿವೆ. ಬರೆದವರ ವಿಕೃತಿ, ವಿಘ್ನ ಮನಸ್ಸು ಎಷ್ಟು ಭೀಕರವಾಗಿದೆಯೆಂದು ಅದು ಜಾಹೀರುಪಡಿಸುತ್ತದೆ. ಅಂತಹುದನ್ನು ಬರೆಯುವುದರಲ್ಲಿ ಈ ದುರುಳರು ನಿಷ್ಠಾತರೂ ಅನುಭವಸ್ಥರೂ ಅಲ್ಲವೇ?!
ಫಾ. ಮಹೇಶ್ ಅವರನ್ನು ತೀವ್ರವಾಗಿ ಕಾಡಿದ ಆ ಪತ್ರವನ್ನು ಬರೆದ ದುಷ್ಟರನ್ನು ಪತ್ತೆ ಹಚ್ಚಿ ಶೀಘ್ರವಾಗಿ ಜನರ ಮುಂದಿಡಬೇಕಾಗಿದೆ. ತಮ್ಮನ್ನು ಶತ್ರುಗಳು ನಿರಂತರವಾಗಿ ಕಾಡುತ್ತಿದ್ದುದರಿಂದ ಫಾ. ಮಹೇಶ್ ತೀವ್ರವಾಗಿ ನೊಂದಿದ್ದರು. ಪತ್ರದಲ್ಲಿ ಕಾಣಿಸಿರುವಂತೆ ಆ ಪತ್ರವನ್ನು ಬಹಳಷ್ಟು ಜನರಿಗೆ ರವಾನಿಸಿರಬಹುದು. ಹಾಗೆ ಬಹಿರಂಗವಾಗಿ ತಮ್ಮ ತೇಜೋವಧೆಯಾಗುವುದನ್ನು ಕಂಡಾಗ ಯಾರಾದರೂ ಕುಸಿಯುವುದು ಸ್ವಾಭಾವಿಕವಲ್ಲವೇ?
ಫಾ. ಮಹೇಶ್‍ರ ಕುಟುಂಬದವರಿಗೆ ಈ ಅನಾಮಿಕ ಪತ್ರವನ್ನೋದಿ ತುಂಬಾ ಆಘಾತವಾಗಿದೆ. ಸಾವಿರಾರು ಅನುಯಾಯಿಗಳು ಮತ್ತು ಸರ್ವ ಧರ್ಮ-ಜಾತಿಯ ಜನರಿಂದ ಅಭಿಮಾನ ಗಳಿಸಿದ್ದ ಓರ್ವ ಶಿಕ್ಷಕ ಮತ್ತು ಧರ್ಮಗುರುವೊಬ್ಬರ ಮೇಲೆ ಹೀಗೆ ಮಾನಹಾನಿಗೊಳಿಸಿ ಅತ್ಯಂತ ಕೀಳು ಅಭಿರುಚಿಯ ಪತ್ರವನ್ನು ಬರೆದಿದ್ದನ್ನು ತಿಳಿದು ಜನರು ತುಂಬಾ ಆಕ್ರೋಶಗೊಂಡಿದ್ದಾರೆ. ಅವರೆಲ್ಲರಿಗಾದ ಆಘಾತ, ನೋವು ಮತ್ತು ದುಃಖವನ್ನು ಶಮನ ಮಾಡಲು ಆ ನೀಚ ಪತ್ರದ ಸೃಷ್ಟಿಕರ್ತರನ್ನು ಪತ್ತೆ ಹಚ್ಚಿ ಅವರ ಮೇಲೆ ಕ್ರಮ ಕೈಗೊಳ್ಳಬೇಕಾಗಿದೆ. ತಮ್ಮ ಪ್ರೀತಿಯ ಶಿಕ್ಷಕ, ಪ್ರಾಂಶುಪಾಲರನ್ನು ಕಳೆದುಕೊಂಡು ದುಃಖಿಸುತ್ತಿರುವ ನೂರಾರು ವಿದ್ಯಾರ್ಥಿಗಳಿಗೂ ಫಾ. ಮಹೇಶ್‍ರ ಅಗಲುವಿಕೆಯ ಶೋಕವನ್ನು ಶಮನ ಮಾಡಲು, ಅವರಿಗೆ ಅನ್ಯಾಯ ಮಾಡಿದವರಿಗೆ ತಕ್ಕ ಶಿಕ್ಷೆ ನೀಡಬೇಕು.
ಈ ಪ್ರಸ್ತುತ ಅನಾಮಿಕ ವಿಕೃತ ಪತ್ರವನ್ನು ಬರೆದವರನ್ನು ಪತ್ತೆ ಹಚ್ಚುವುದು ಕಷ್ಟದ ಸಂಗತಿಯೇನಲ್ಲ. ಯಾಕೆಂದರೆ, ಆ ಪತ್ರದಲ್ಲಿ ಕಾಣಿಸಿರುವಂತೆ, ಫಾ. ಮಹೇಶ್, ಡೊನ್ ಬೊಸ್ಕೊ ಶಾಲೆ ಹಾಗೂ ಶಿರ್ವಾ ಚರ್ಚ್‍ನ ವಿಚಾರಗಳನ್ನು ಹತ್ತಿರದಿಂದ ಬಲ್ಲವರೇ ಅದನ್ನು ಸೃಷ್ಟಿಸಿದ್ದಾರೆ. ಅದನ್ನು ಬರೆದ ವ್ಯಕ್ತಿಗೆ ಫಾ. ಮಹೇಶ್ ಅವರ ಮೇಲೆ ತುಂಬಾ ಹಗೆಯಿತ್ತು ಎನ್ನುವುದು ಸ್ಪಷ್ಟ. ಫಾ. ಮಹೇಶ್ ಶಿಸ್ತಿಗೆ ತುಂಬಾ ಪ್ರಾಮುಖ್ಯತೆ ಕೊಡುತ್ತಿದ್ದರು. ನಿಷ್ಠೆಗೆ ಹೆಸರಾಗಿದ್ದರು. ಅಸಭ್ಯ ವರ್ತನೆ ಸಹಿಸುತ್ತಿರಲಿಲ್ಲ. ಬಹುಶಃ ಅವರು ಈ ನಿಟ್ಟಿನಲ್ಲಿ ಯಾರ ಮೇಲಾದರೂ ಕ್ರಮ ಕೈಗೊಂಡಿರಬಹುದು. ಅದರ ಹಗೆ ತೀರಿಸಲು ಅಂತಹ ವ್ಯಕ್ತಿ/ಗಳು ಇಂತಹ ಕೃತ್ಯ ಮಾಡಿರಬೇಕೆಂದು ಶಿರ್ವಾದ ಜನತೆ ಮಾತನಾಡುತ್ತಿದ್ದಾರೆ.
ಪೊಲೀಸರು ಸಮಗ್ರ ತನಿಖೆ ನಡೆಸಿ, ಆ ಅನಾಮಿಕ ಪತ್ರ ಬರೆದು ಷಡ್ಯಂತ್ರ ರಚಿಸಿದವರನ್ನು ಪತ್ತೆ ಹಚ್ಚಬೇಕಾಗಿದೆ. ಅದರಿಂದಾಗಿ ಮುಂದೆ ಇಂತಹ ಅನಾಚಾರಗಳು ನಡೆಯದಂತೆ ತಡೆಯಬೇಕಾಗಿದೆ. ತಪ್ಪಿತಸ್ಥರನ್ನು ಗುರುತಿಸಿ ಫಾ. ಮಹೇಶ್ ಅವರ ಆತ್ಮಕ್ಕೆ ನೆಮ್ಮದಿ ದೊರಕಿಸಲು ಅಧಿಕಾರಿಗಳು ಶ್ರಮಿಸುತ್ತಾರೆಂಬ ನಂಬಿಕೆ ಜನರಿಗಿದೆ.
Absolutely right . The guilty should get maximum punishment.
After reading this letter what is the response from Udupi Bishop???
kindly describe in your news
Now that he has died, people are busy giving judgement? Where were they when the letter was actually written? why were they silent then. If it was really connected to his death then this mishap would have avoided right.
I think Fr.Mahesh could have fought bravely he is answerable only to God by surrendering to unscrupulous people he has not done right thing
Hats off to you… Don’t leave the faith… One day God definitely will bring out the culprit.. We all will see in our own eyes… God will bring the justice in his own time.. An own way. It’s his fight they killed his servant…
First, There is no such below belt/substandard words/sentences in the letter as claimed. Second. Why can’t there is no audit of account is not done? The letter tells there are goolmaals in the financial accounts. So to stop the controversy, carry our audit and show the black and white records to all who poke their nose. Carry out third party auditors. In my opinion
ನಿಮ್ಮ ಲೇಖನ ಓದಿ ನನಗೆ ಶಿರ್ವ ಪರಿಸರದ ಒಬ್ಬ ನಿರೂಪಕ
ಇರಬಹುದು
Any guess ?
Thank you Budkulo for revealing the information to the readers. It is so disheartening and heart wrenching to know about the anonymous letter written against Fr. Mahesh. Because of this torture parents lost their son, diocese lost a most talented priest , school lost the principal cum a leader who influenced many.
Whoever has done this damage will not be spared by God. He may hide and sit but time will come where he has to be answerable to God and he will reap what he has sown. People’s cry and prayers will not go in vain.