ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಬಸ್ರೀಕಟ್ಟೆಯ ಸುಂದರ ಹಿಮಗಿರಿ ಹೋಮ್‍ಸ್ಟೇ
ನಗರ ಪಟ್ಟಣಗಳಲ್ಲಿ ದೈನಂದಿನ ಕೆಲಸದ ಒತ್ತಡದಿಂದ ಜಡ್ಡು ಹಿಡಿದ ಮೈ ಮನಸ್ಸಿಗೆ ಕೇವಲ ವಿಶ್ರಾಂತಿ ಸಾಕಾಗುವುದಿಲ್ಲ. ಹುಮ್ಮಸ್ಸು ಪಡೆಯಲು ಆಹ್ಲಾದಕರ ವಾತಾವರಣದಲ್ಲಿ ಸಮಯ ಕಳೆಯುವುದೇ ಇದಕ್ಕಿರುವ ಪರಿಹಾರ. ದಣಿದ ದೇಹಕ್ಕೆ, ಸ್ಫೂರ್ತಿ ಬಯಸುವ ಮನಸ್ಸಿಗೆ ಉಲ್ಲಾಸ ದೊರಕಿಸಿ ಕೊಡುವ ಚಟುವಟಿಕೆ ಮನುಷ್ಯನಿಗೆ ಅಗತ್ಯ. ಅಂತಹ ಅನುಭವವನ್ನು ನಿಮಗೆ ದೊರಕಿಸಿ ಕೊಡುವ ಹೊಸ ಪ್ರವಾಸಿ ತಾಣವೊಂದು ಪ್ರವಾಸಿಗರನ್ನು ಮತ್ತು ಚಾರಣಿಗರನ್ನು ಕೈ ಬೀಸಿ ಕರೆಯುತ್ತಿದೆ.
ಅದುವೇ ಬಸ್ರೀಕಟ್ಟೆಯ ಬಿಳಾಲುಕೊಪ್ಪದಲ್ಲಿರುವ ಹಿಮಗಿರಿ ಹೋಮ್‍ಸ್ಟೇ.
ಕರ್ನಾಟಕದ ಕಾಶ್ಮೀರವೆಂದು ಕರೆದುಕೊಳ್ಳುವ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿದೆ ಬಸ್ರೀಕಟ್ಟೆ. ಅಲ್ಲಿಂದ ಸ್ವಲ್ಪವೇ ದೂರದಲ್ಲಿದೆ ಬಿಳಾಲುಕೊಪ್ಪ. ಅಲ್ಲಿನ ವಿಶಾಲ ಕಾಫಿ ತೋಟಗಳ ನಡುವೆ ಶೋಭಿಸುತ್ತಿದೆ ರಮಣೀಯ ಹಿಮಗಿರಿ ಎಸ್ಟೇಟ್. ಅದರ ನಡುವೆ ಭವ್ಯವಾಗಿ ತಲೆ ಎತ್ತಿ ನಿಂತಿದೆ ಹಿಮಗಿರಿ ಹೋಮ್‍ಸ್ಟೇ.
ಬಸ್ರೀಕಟ್ಟೆಯಲ್ಲಿ ಶೋಭಿಸುತ್ತಿರುವ ಉನ್ನತ ಪರ್ವತ ಮೆರ್ತಿಗುಡ್ಡದ ಬಗ್ಗೆ ನೀವು ಕೇಳಿಯೇ ಇರುತ್ತೀರಿ. ಮೆರ್ತಿಗುಡ್ಡವು ಪ್ರವಾಸಿಗರನ್ನು, ಚಾರಣಿಗರನ್ನು ಕೈಬೀಸಿ ಕರೆಯುವ, ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಪ್ರವಾಸಿಧಾಮಗಳಲ್ಲಿ ಒಂದು. ಅದರ ಸೌಂದರ್ಯ, ಭವ್ಯತೆಗೆ ಮಾರು ಹೋಗದವರೇ ಇಲ್ಲ. ಈ ಸುಂದರ ಬೆಟ್ಟದ ಎದುರಲ್ಲಿಯೇ ಇದೆ ಹಿಮಗಿರಿ ಹೋಮ್‍ಸ್ಟೇ.
ಹೌದು. ಬಿಳಾಲುಕೊಪ್ಪಕ್ಕೆದುರಾಗಿ ವಿರಾಜಮಾನವಾಗಿದೆ ಮೆರ್ತಿಗುಡ್ಡ. ಹಿಮಗಿರಿ ಹೋಮ್‍ಸ್ಟೇ ಪ್ರದೇಶದಿಂದ ಕಾಣುವ ಅದ್ಭುತ, ರಮಣೀಯ ದೃಶ್ಯಗಳಲ್ಲಿ ಮೆರ್ತಿಗುಡ್ಡವೂ ಒಂದು. ಅದರ ಸೊಬಗನ್ನು ಕಣ್ಣಾರೆ ಕಂಡರಷ್ಟೇ ಸುಖ. ಅಂತಹ ದಿವ್ಯ ಅನುಭೂತಿಯನ್ನು ಪಡೆದುಕೊಳ್ಳಬೇಕಾದರೆ ನೀವು ಹಿಮಗಿರಿ ಹೋಮ್‍ಸ್ಟೇಗೆ ಭೇಟಿ ನೀಡಬೇಕು. ಸುತ್ತಲೂ ಕಂಗೊಳಿಸುವ ಕಾಫಿ ತೋಟಗಳು, ಮುಗಿಲೆತ್ತರದ ಮರಗಳು, ನೀರಿನ ತೊರೆಗಳು ನಿಮ್ಮ ಪ್ರವಾಸವನ್ನು ಮತ್ತಷ್ಟು ರೋಚಕಗೊಳಿಸುತ್ತವೆ. ಅಗಾಧ ಪ್ರಾಕೃತಿಕ ಸಂಪತ್ತು ನಿಮ್ಮ ಮೈನವಿರೇಳಿಸುತ್ತದೆ.
ಹಲವು ಸಿನೆಮಾಗಳು ಇಲ್ಲಿ ಚಿತ್ರೀಕರಣಗೊಂಡಿವೆ. ಒಂದು ಕಾಲದಲ್ಲಿ ಇಲ್ಲಿನ ಪ್ರದೇಶಕ್ಕೆ ಆಡಿನಕೆರೆ, ಹರಸಿನ ಹಾಡ್ಲು ಎಂಬ ಹೆಸರಿದ್ದವು. ಇಲ್ಲಿನ ಹಚ್ಚ ಹಸಿರಿನ ತಾಣವು ತಂಪಾಗಿದ್ದು, ಹಿಮ ಬೀಳುತ್ತಿದ್ದರಿಂದ ಇಲ್ಲಿಗೆ ಹಿಮಗಿರಿ ಎಂಬ ಹೆಸರು ಬಂತು. ಇದೇ ಹಿಮಗಿರಿ ಎಸ್ಟೇಟ್‍ನಲ್ಲಿರುವ ಈ ಹೋಮ್‍ಸ್ಟೇ ಅದೇ ಹೆಸರಿನಿಂದ ಪ್ರಖ್ಯಾತಿಗೊಂಡಿದೆ.
ಚಿಕ್ಕಮಗಳೂರು ಜಿಲ್ಲೆ ಪ್ರಸಿದ್ಧ ದೇವಸ್ಥಾನಗಳಿಗೂ ತವರೂರು. ನೀವು ಹಿಮಗಿರಿಗೆ ಬಂದರೆ, ಇಲ್ಲಿಂದ ನಿಮ್ಮ ನೆಚ್ಚಿನ ಪ್ರವಾಸಿಧಾಮಗಳಿಗೂ ತೆರಳಬಹುದು, ಜೊತೆಗೆ ಪ್ರಮುಖ ದೇವಾಲಯಗಳಿಗೂ ಭೇಟಿ ನೀಡಬಹುದು. ಶೃಂಗೇರಿಯ ಶಾರದಾಂಬಾ ದೇವಸ್ಥಾನ, ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನಗಳಿಗೆ ನೀವು ಇಲ್ಲಿಂದ ತೆರಳಬಹುದು. ಅಕ್ಕಪಕ್ಕದ ಜಿಲ್ಲೆಗಳಲ್ಲಿ ಸುಬ್ರಹ್ಮಣ್ಯ, ಧರ್ಮಸ್ಥಳ, ಉಡುಪಿ, ಕೊಲ್ಲೂರು ಸೇರಿದಂತೆ ಹಲವು ಪುಣ್ಯಕ್ಷೇತ್ರಗಳಿಗೂ ನೀವು ಪ್ರವಾಸ ಕೈಗೊಳ್ಳಬಹುದು.
ಹಿಮಗಿರಿ ಹೋಮ್‍ಸ್ಟೇಗೆ ತೆರಳುವ ದಾರಿ:
ನೀವು ಬೆಂಗಳೂರು, ಮೈಸೂರು ಕಡೆಯಿಂದ ಬರುವುದಾದರೆ, ಚಿಕ್ಕಮಗಳೂರಿನ ಬಾಳೆಹೊನ್ನೂರು ಮೂಲಕ ಬಿಳಾಲುಕೊಪ್ಪ ತಲುಪಬಹುದು. ಶಿವಮೊಗ್ಗ ಕಡೆಯಿಂದ ಬರುವುದಾದರೆ ಕೊಪ್ಪ ಮುಖಾಂತರ ಆಗಮಿಸಬಹುದು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಂದ ಬರುವುದಾದರೆ ಎಸ್.ಕೆ. ಬಾರ್ಡರ್ ಅಥವಾ ಆಗುಂಬೆ ಘಾಟಿ ಮೂಲಕ ಶೃಂಗೇರಿಗೆ ತೆರಳಿ ಅಲ್ಲಿಂದ ಜಯಪುರದಿಂದ 14 ಕಿ.ಮೀ. ಸಾಗಿದರೆ ಬಿಳಾಲುಕೊಪ್ಪ ಸಿಗುತ್ತದೆ. ಬೆಳ್ತಂಗಡಿ, ಧರ್ಮಸ್ಥಳ ಮೂಲಕ ಸಾಗುವುದಾದರೆ ಚಾರ್ಮಾಡಿ ಘಾಟಿ ಮೂಲಕ ಕೊಟ್ಟಿಗೆರೆ-ಬಾಳೆಹೊನ್ನೂರು ರಸ್ತೆಯಲ್ಲಿ ಬರಹುದು.
ಸಂಪರ್ಕ ವಿವರ:
ಹಿಮಗಿರಿ ಹೋಮ್‍ಸ್ಟೇ ನೀವು ಭೇಟಿ ನೀಡಲೇಬೇಕಾದ ಸುಂದರ ಪ್ರವಾಸಿ ತಾಣ. ಅದ್ಭುತ ಅನುಭವ ಗಳಿಸಲು ಇಲ್ಲಿನ ಮತ್ತು ಸುತ್ತಮುತ್ತಲಿನ ನೈಸರ್ಗಿಕ ತಾಣಗಳಲ್ಲಿ ನೀವು ಸಮಯ ಕಳೆಯಬಹುದು. ಗುಡ್ಡ ಬೆಟ್ಟಗಳನ್ನೇರಿ ಖುಷಿ ಪಡಬಹುದು, ನೀರಿನಲ್ಲಿ ಆಟವಾಡಬಹುದು, ಸಾಹಸ ಮೆರೆಯಬಹುದು. ತಂಗಲು ಬೇಕಾದಷ್ಟು ರೂಮುಗಳು ಲಭ್ಯವಿದ್ದು, ಸಕಲ ವ್ಯವಸ್ಥೆಯಿದೆ. ಮುಂಗಡ ಬುಕ್ಕಿಂಗ್ ಮೂಲಕವೇ ನಿಮ್ಮ ಭೇಟಿಯನ್ನು ಖಚಿತಪಡಿಸಿಕೊಳ್ಳಿ. ಬುಕ್ಕಿಂಗ್ ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ವಿವರಗಳನ್ನು ಕೆಳಗೆ ನೀಡಲಾಗಿದೆ.
ಫೋನ್: +91 8088247519, +91 9449471921
ವಿಳಾಸ: Himagiri Home Stay, Bilalukoppa Post 577114, Basrikatte, Koppa Taluk, Chickmagalur Dist, Karnataka.
ಇಮೈಲ್: info@himagirihomestay.in
ವೆಬ್‍ಸೈಟ್: himagirihomestay.in
ಗೂಗಲ್ ಸರ್ಚ್ ಮಾಡಿ: Himagiri Home Stay, Bilalukoppa, Basrikatte