Latest News

ಕೊಲೆಗಡುಕರಿಂದ ಕೊಂಕಣಿಯನ್ನು ರಕ್ಷಿಸಲು ಒಗ್ಗೂಡಿ ಹೋರಾಡೋಣ

ಡೊನಾಲ್ಡ್ ಪಿರೇರಾ

Posted on : October 25, 2016 at 3:15 PM

Dear Readers, we are running a free media with high democratic values. Without subscriptions, advertisements & having no patrons or god fathers, we depend on your support to run this pro people, impartial, unbiased and courageous media. Kindly support us by your generous help.
Our Google Pay & Paytm Number - 8277362399

Our Bank Details:
Name: Donald Pereira
Bank: Canara Bank
A/C No: 0977101022194
Hampankatta Branch, Mangaluru 575 001
IFSC Code: CNRB0000612
MICR Code: 575015009

ಇದು ನಿಜಕ್ಕೂ ಆಘಾತಕಾರಿ ಮತ್ತು ಅವಮಾನಕಾರಕ.

ಎಲ್ಲಾದರೂ ಉಂಟೇ ಹೀಗೆ? ಯಾರಾದರೂ ಗಣ್ಯ ವ್ಯಕ್ತಿಗಳು ಸಮಾಜದ ಮುಂದೆ ಬಂದು ನೀಚ ವ್ಯಕ್ತಿಗಳನ್ನು, ಅಪರಾಧಿಗಳನ್ನು, ಅತ್ಯಾಚಾರಿಗಳನ್ನು, ಕೊಲೆಗಡುಕರನ್ನು ಬಹಿರಂಗವಾಗಿ ಬೆಂಬಲಿಸಿ, ಅವರಿಗೆ ತಾವು ಬೆಂಬಲ ನೀಡುವುದೇ ಅಲ್ಲದೆ ಜನರೂ ಸಹ ಆ ಕೀಳು ಮನುಷ್ಯರನ್ನು, ಅಪರಾಧಿಗಳನ್ನು ಬೆಂಬಲಿಸಬೇಕೆಂದು ಕರೆ ನೀಡುತ್ತಾರೆಯೆ?

ಇಲ್ಲ, ಇಲ್ಲ, ಇಲ್ಲ. ನಿಮ್ಮ ಉತ್ತರ ಇದೇ ಅಲ್ಲವೆ?

ಆದರೆ ಕೊಂಕಣಿಯಲ್ಲಿ ಅದು ಉಲ್ಟಾಪಲ್ಟಾ!

ಮಂಗಳೂರು ಕೇಂದ್ರಿತ ಕೊಂಕಣಿ ಪ್ರಪಂಚದಲ್ಲಿ ಏನು ನಡೆಯುತ್ತಿದೆಯೆಂಬ ಗಾಬರಿಯನ್ನು ಹಲವರು ವ್ಯಕ್ತಪಡಿಸಿದ್ದಾರೆ. ಅವರ ಆತಂಕ, ಕಾಳಜಿ ಸಹಜ, ಶ್ಲಾಘನೀಯ ಕೂಡ. ಈ ಲೇಖನವನ್ನು ಕನ್ನಡದಲ್ಲಿ ಬರೆಯುತ್ತಿರುವುದಕ್ಕೂ ಅದೇ ಕಾರಣ. ಹೇಗೂ ನಮ್ಮ ಕೊಂಕಣಿಯಲ್ಲಿನ ಕೆಲವರ ನೀಚತನ, ಅಧಃಪತನ ಮತ್ತು ಕ್ಷುಲ್ಲಕತನ ಬಹಿರಂಗವಾಗಿ ಇಡೀ ಸಮಾಜದ ಮುಂದೆ ಪತ್ರಿಕೆ, ಮಾಧ್ಯಮಗಳ ಮುಖಾಂತರ ಪ್ರಚಾರಗೊಂಡು ಕೊಂಕಣಿ ಸಮಾಜದ ಮಾನ, ಮರ್ಯಾದೆಯನ್ನು ಹರಾಜಿಗಿಟ್ಟಿರುವುದರಿಂದ ಜನರಿಗೆಲ್ಲಾ ನಿಜ ಸಂಗತಿ ಗೊತ್ತಾಗಬೇಕಿದೆ. ಸತ್ಯವೇನು ಎಂಬುದನ್ನು ಲೋಕಕ್ಕೆಲ್ಲಾ ತಿಳಿಯಪಡಿಸುವುದು ಜವಾಬ್ದಾರಿಯುತ, ನ್ಯಾಯಪರ ಮಾಧ್ಯಮವಾದ ನಮ್ಮ ಕರ್ತವ್ಯ ಕೂಡ.

editorial_budkulo_kannada_donald-pereiraಹೌದು. ಕೊಂಕಣಿ ಸಮಾಜದ ಮೇಲೆ ಅಪಾಯ ಬಂದೊದಗಿದೆ. ನಿರ್ದಿಷ್ಟವಾಗಿ ಹೇಳಬೇಕೆಂದರೆ ಕೊಂಕಣಿ ಸಾಹಿತ್ಯ, ಸಾಂಸ್ಕೃತಿಕ ಮತ್ತು ಕಲಾ ಕ್ಷೇತ್ರಕ್ಕೆ ಮಾರಕವಾದ ಬೆಳವಣಿಗೆಗಳು, ಕ್ಯಾನ್ಸರ್‍ನಂಥ ಕಾಯಿಲೆಗಳು ಅಪ್ಪಳಿಸಿವೆ. ಇದೇನೂ ಇಂದಿನ ಬೆಳವಣಿಗೆಯಲ್ಲ. ಹಲವು ವರ್ಷಗಳಿಂದ ಕಾಡುತ್ತಿದ್ದ ಮಹಾರೋಗ. ಇದಕ್ಕೆಲ್ಲಾ ಕಾರಣರಾದ ಬೆರಳೆಣಿಕೆಯ ವ್ಯಕ್ತಿಗಳು ಇಲ್ಲಿಯತನಕ ಹುಚ್ಚು ನಾಯಿಗಳಂತೆ, ಮತಿಗೆಟ್ಟ ಹಂದಿಗಳಂತೆ ಕಂಡ ಕಂಡವರಿಗೆ ರಗಳೆ, ಹಿಂಸೆ, ಹಾನಿ ಮಾಡುತ್ತಿದ್ದರು. ಅದರಿಂದಾಗಿ ಇಡೀ ಕೊಂಕಣಿ ಸಾಹಿತ್ಯ-ಸಾಂಸ್ಕೃತಿಕ ಲೋಕವೇ ದಿಕ್ಕೆಟ್ಟಿತ್ತು, ಕಂಗಾಲಾಗಿತ್ತು ಮತ್ತು ಹೈರಾಣಾಗಿತ್ತು.

ಆದರೆ ಇದು ಈಗ ತೀರಾ ಅತಿರೇಕಕ್ಕೇರಿದೆ. ಈ ಚಿಲ್ಲರೆ ವ್ಯಕ್ತಿಗಳಿಗೆ ಕೆಲ ‘ಗಣ್ಯ’ ವ್ಯಕ್ತಿಗಳು ಗುಪ್ತವಾಗಿ ಸಹಕಾರ, ಬೆಂಬಲ ನೀಡುತ್ತಿದ್ದ ಸಂಗತಿ ಬಹುತೇಕರಿಗೆ ಅರಿವಾಗಿತ್ತು. ಆದರೆ ಆ ಗಣ್ಯ ವ್ಯಕ್ತಿಗಳು ಯಾರೆಂಬುದನ್ನು ಅವರೇ ಇದೀಗ ಬಹಿರಂಗವಾಗಿ ತಾವೇ ಪ್ರದರ್ಶಿಸಿಕೊಳ್ಳುವುದರ ಮೂಲಕ ಗುಪ್ತವಾಗಿ ನಡೆಯುತ್ತಿದ್ದ ಅನಾಚಾರಗಳು ಬಹಿರಂಗವಾಗಿವೆ, ನಿಸ್ಸಂದೇಹವಾಗಿ.

ಕೊಂಕಣಿಯಲ್ಲಿ ಏನೇನು ನಡೆಯುತ್ತಿತ್ತೆಂಬುದನ್ನು ತಿಳಿಯದವರು ಕೆಲ ಸಂಗತಿ, ಘಟನೆಗಳನ್ನು ತಿಳಿದುಕೊಳ್ಳಬೇಕು. ಅದೇನೆಂದರೆ, ಬಹಳ ವರ್ಷ, ದಶಕಗಳಿಂದ ಕೊಂಕಣಿ ಸಮಾಜ ಶಾಂತಿಯುತವಾಗಿತ್ತು. ಜನರೆಲ್ಲಾ ತಮ್ಮಷ್ಟಕ್ಕೆ ಜೀವನ ನಡೆಸುತ್ತಿದ್ದರೆ, ಕಲಾವಿದರು, ಸಾಹಿತಿಗಳು, ಪತ್ರಿಕೆ ಮತ್ತಿತರ ಕ್ಷೇತ್ರಕ್ಕೆ ಸೇರಿದವರು, ಸಂಗೀತಗಾರರು ಮುಂತಾದವರೆಲ್ಲಾ ಕೊಂಕಣಿ ಭಾಷೆಯ ಅಭಿವೃದ್ಧಿ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ದಶಕಗಟ್ಟಲೆಯಿಂದ ಈ ಪ್ರಕ್ರಿಯೆ ಅನೂಚಾನವಾಗಿ ನಡೆದುಕೊಂಡು ಬಂದಿತ್ತು.

budkulo_fr-mark-walder_autobiography-18 budkulo_fr-mark-walder_autobiography-10

ಹಾಂ, ಒಂದು ವಿಷಯ ಸ್ಪಷ್ಟಪಡಿಸಬೇಕು. ಕೊಂಕಣಿ ಎಂಬುದು ಒಂದು ವಿಶಿಷ್ಟ ಸಮುದಾಯ. ಎಲ್ಲಾ ಧರ್ಮ, ಪಂಗಡದವರು ಕೊಂಕಣಿ ಭಾಷಿಗರು ಎಂಬುದೇ ಪ್ರಪಂಚದ ಅತಿ ವಿಶಿಷ್ಟ ಸಂಗತಿ. ಅಧಿಕೃತವಾಗಿ 42 ಪಂಗಡಗಳು ನಮ್ಮಲ್ಲಿ ದಾಖಲಾಗಿವೆ (ದಾಖಲಾಗದವು ಇನ್ನೂ ಹಲವಿವೆ). ಆದರೆ ದೇಶಾದ್ಯಂತ, ಪ್ರಪಂಚದಾದ್ಯಂತ ಜನರು ‘ಕೊಂಕಣಿಗರು’ ಎಂದರೆ ಪ್ರಮುಖವಾಗಿ ಎರಡು ಸಮುದಾಯಗಳನ್ನು ಗುರುತಿಸುತ್ತಾರೆ. ಅವೆಂದರೆ ಕ್ರೈಸ್ತರು ಮತ್ತು ಸಾರಸ್ವತ ಸಮುದಾಯದವರು. ಇವರ ಸಂಖ್ಯೆ ಪ್ರಭಾವಶಾಲಿಯಾಗಿದೆ. ಹಾಗಾಗಿ ಕೊಂಕಣಿ ಎಂದರೆ ಒಂದೋ ಕ್ರೈಸ್ತ ಅಥವಾ ಸಾರಸ್ವತ ಬ್ರಾಹ್ಮಣ ಎಂದು ಇತರ ಜನರು ಅಂದುಕೊಳ್ಳುತ್ತಾರೆ. (ಕೊಂಕಣಿಗ = ಕೊಂಕ್ಣೊ ಅಥವಾ ಕೊಂಕ್ಣಿ ಮನಿಸ್).

ಈ ಮೇಲೆ ಹೇಳಲಾದ ಅಹಿತಕರ ಬೆಳವಣಿಗೆಗಳು ನಡೆಯುತ್ತಿರುವುದು ನಿರ್ದಿಷ್ಟವಾಗಿ ಒಂದು ಸಮುದಾಯದಲ್ಲಿ, ಅಂದರೆ ಕೊಂಕಣಿ ಕಥೊಲಿಕ್ ಕ್ರೈಸ್ತ ಸಮಾಜದಲ್ಲಿ. ಇನ್ನೊಂದು ವಿಷಯ ಎಲ್ಲರೂ ತಿಳಿದುಕೊಳ್ಳಬೇಕಾಗಿದ್ದೇನೆಂದರೆ, ಕರ್ನಾಟಕದ ಕೊಂಕಣಿ ಲೋಕದಲ್ಲಿ (ಅಂದರೆ ಎಲ್ಲಾ ಸಮುದಾಯಗಳು ಸೇರಿ) ಸಾಹಿತ್ಯ, ಪತ್ರಿಕೋದ್ಯಮ, ಸಂಗೀತ, ಸಾಂಸ್ಕೃತಿಕ, ಕಲಾ ಕ್ಷೇತ್ರಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡವರೂ ಇವರೇ, ಕ್ರೈಸ್ತರು. ಎಲ್ಲಿಯವರೆಗೆಂದರೆ ಕರ್ನಾಟಕದಲ್ಲಿ ಇಲ್ಲಿಯವರೆಗೆ ರಚನೆಯಾದ ಸಾಹಿತ್ಯದಲ್ಲಿ ಈ ಜನಾಂಗದ ಪಾಲು 95 ಶೇಕಡಕ್ಕಿಂತ ಹೆಚ್ಚು. ಇತರ ಕ್ಷೇತ್ರಗಳಲ್ಲೂ ಅಷ್ಟೇ.

ಅಷ್ಟೇ ಅಲ್ಲ, ಕೊಂಕಣಿಯ ತವರು ಎಂದು ಕರೆಯಲಾಗುವ ಗೋವಾದಲ್ಲಿ ನಿರ್ಮಾಣವಾದ ಸಾಹಿತ್ಯಕ್ಕಿಂತ ಹತ್ತು ಪಟ್ಟು ಹೆಚ್ಚು ಸಾಹಿತ್ಯ ಕರ್ನಾಟಕದ ಕೊಂಕಣಿಗರಿಂದ ರಚನೆಯಾಗಿದೆಯೆಂದರೆ ಈ ಸಮುದಾಯದ ಕೊಡುಗೆ ಎಷ್ಟು ಮಹತ್ತರ ಎಂಬುದನ್ನು ನೀವು ಅರಿತುಕೊಳ್ಳಬಹುದು.

ಇದೆಲ್ಲಾ ಪರಂಪರಾಗತವಾಗಿ, ನಿರಾತಂಕವಾಗಿ ನಡೆದುಕೊಂಡು ಬಂದಿತ್ತು. ಆದರೆ ಒಮ್ಮಿಂದೊಮ್ಮೆಲೇ ಅನಾಗರಿಕ ಮೃಗವೊಂದರ ಪ್ರವೇಶವಾಯಿತು. ಅದು ಹುಚ್ಚು ನಾಯಿಯಂತೆ, ಕಾಡು ಹಂದಿಯಂತೆ ದಾಳಿಯಿಟ್ಟು ಕೊಂಕಣಿ ಸಮಾಜವನ್ನು, ಭಾಷೆ ಮತ್ತು ಇಲ್ಲಿನ ಜನರನ್ನೆಲ್ಲಾ ನಾಶ ಮಾಡಲು ಪಣತೊಟ್ಟು, ಸುಪಾರಿ ತೆಗೆದುಕೊಂಡು ಬಂದಂತೆ ಪಾಶವೀ ಕೃತ್ಯಗಳನ್ನೆಲ್ಲಾ ಮಾಡಲಾರಂಭಿಸಿತು.

budkulo_fr-mark-walder_autobiography-24

ಮೊದಲು ಆ ಮೃಗ, ಎಂದರೆ ವ್ಯಕ್ತಿ, ತನ್ನನ್ನು ತಾನು ಮಹಾನ್ ಬುದ್ಧಿವಂತ, ಪ್ರಖಾಂಡ ಪಂಡಿತನೆಂಬಂತೆ ಊಳಿಟ್ಟಿತು. ಕೆಲ ತರುಣ ಕುತೂಹಲಿಗರೆಲ್ಲಾ ಆತನನ್ನು ಹಾಗೆಯೇ ಭಾವಿಸಿ ತಾವೂ ಹಳ್ಳಕ್ಕೆ ಬಿದ್ದುದಲ್ಲದೆ ಇತರರನ್ನೂ ಹಳ್ಳಕ್ಕೆ ಬೀಳಿಸಿದರು.

ಇಲ್ಲೀಗ ಆ ‘ಗುಳ್ಳೆನರಿ’ ಮಾಡಿದ ಕುಕೃತ್ಯಗಳನ್ನೆಲ್ಲಾ ಹೇಳಲಿಕ್ಕೆ ಸಮಯವೂ ಇಲ್ಲ. ಅದನ್ನೆಲ್ಲಾ ಬರೆಯಲು ಹೋದರೆ ಹತ್ತು ಮಹಾ ಕಾದಂಬರಿಗಳೂ ಸಾಕಾಗಲಾರವು.

ಆದರೆ ನಿಜಕ್ಕೂ ಖೇದಕರ ಮತ್ತು ಅಸಹನೀಯ ಸಂಗತಿಯೆಂದರೆ ಈ ಭೀಕರ ಮನಸ್ಸಿನ, ವಿಕೃತ ಚಿಂತನೆಯ, ವಿಕಾರ ಬುದ್ಧಿಯ, ಮಾರಕ ಮನಸ್ಥಿತಿಯ ಸ್ಯಾಡಿಸ್ಟ್ ಪೀಡೆಯ ಇಷ್ಟೆಲ್ಲಾ ಅವಾಂತರಗಳನ್ನೆಲ್ಲಾ ಕಣ್ಣ ಮುಂದೆಯೇ ನೋಡಿಯೂ ಆತನಿಗೆ ಕಡಿವಾಣ ಹಾಕುವ, ನಿಯಂತ್ರಿಸುವ, ಸೂಕ್ತ ಕ್ರಮ ತೆಗೆದುಕೊಳ್ಳಲು ಯಾರೂ ಮನಸ್ಸು ಮಾಡದೇ ಹೋಗಿದ್ದು. ಕೆಲವರು ಆ ನಿಟ್ಟಿನಲ್ಲಿ, ಒಂದು ಮಾಧ್ಯಮವಾಗಿ ನಾವೂ ಕೂಡ (ಬುಡ್ಕುಲೊ ಇ-ಪತ್ರಿಕೆ), ಸಾಕಷ್ಟು ಶ್ರಮಪಟ್ಟರೂ ಉಳಿದವರು ಈ ಬಗ್ಗೆ ತೋರಿದ ಅನಾದರ, ನಿರ್ಲಕ್ಷ್ಯ, ಅಸಹಕಾರ ಮತ್ತು ಮೌನ ಸಮ್ಮತಿ ಈ ಮೃಗೀಯ ವ್ಯಕ್ತಿಯ ಭಯಾನಕ ಕುಕೃತ್ಯಗಳು ಹೆಚ್ಚಾಗಲು ಸಹಕಾರಿಯಾಯಿತು.

ಇಂಥ ಶೋಚನೀಯ ಪರಿಸ್ಥಿತಿಯಲ್ಲಿ ಗಂಡುಗಲಿಯೊಂದು ಗುಡುಗಿತು.

ಹೌದು. ಆ ಗಂಡುಗಲಿ ಬೇರ್ಯಾರೂ ಅಲ್ಲ. ಸಮಸ್ತ ಕೊಂಕಣಿಗರ (ಎಲ್ಲಾ ಸಮುದಾಯಗಳ) ಅನಭಿಷಿಕ್ತ ಸಾಮ್ರಾಟನೆಂದೇ ಬಣ್ಣಿಸಲ್ಪಟ್ಟ, ಕೊಂಕಣಿ ಚಕ್ರವರ್ತಿ ಬಿರುದಾಂಕಿತ, ಕೊಂಕಣಿ ಭಾಷೆಯ ಸಮಗ್ರ ಬೆಳವಣಿಗೆಗೆ ಸಂಪೂರ್ಣ ಕೊಡುಗೆ, ದೇಣಿಗೆ ನೀಡಿದ, ಕೊಂಕಣಿ ಜನರ ಏಳಿಗೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ ರೆವೆರೆಂಡ್ ಫಾದರ್ ಮಾರ್ಕ್ ವಾಲ್ಡರ್ ಅವರು. ರಾಕ್ಣೊ ಪತ್ರಿಕೆಯ ಸಂಪಾದಕರಾಗಿ ವಿಶ್ವದಾದ್ಯಂತ ಹೆಸರುವಾಸಿಯಾದವರು. (ಒಲಿಂಪಿಕ್ಸ್‍ನಲ್ಲಿ ಭಾರತವನ್ನು ಪ್ರತಿನಿಧಿಸಿದ ಏಕೈಕ ಕೊಂಕಣಿ ಪತ್ರಕರ್ತ/ಸಂಪಾದಕ ಅವರು, ತಿಳಿಯಿತಲ್ಲಾ ಅವರ ಪ್ರಭಾವ ಮತ್ತು ಸಾಮರ್ಥ್ಯ?).

ಹೌದು. ಅವರು ನ್ಯಾಯ, ನೀತಿ, ಸಮಾನತೆ, ಪ್ರಾಮಾಣಿಕತೆಗಾಗಿ ಧೈರ್ಯದಿಂದ ದುಡಿದವರು, ಹೋರಾಡಿದವರು. ಅದೇ ಒಂದು ದಂತಕಥೆ. ಒಂದು ಪಾದ್ರಿಯಾಗಿದ್ದರೂ ಇಡೀ ಒಂದು ಸರ್ಕಾರ ಮಾಡುವಂಥಾ ಕೆಲಸ ಕಾರ್ಯಗಳನ್ನು ತಮ್ಮ ಜನರಿಗಾಗಿ ಮಾಡಿದವರು. ಮೊನ್ನೆಯಷ್ಟೇ 80ರ ಹುಟ್ಟುಹಬ್ಬದ ಸಂಭ್ರಮದಲ್ಲಿ ಕೊಂಕಣಿ ಜನರೆಲ್ಲಾ ಸೇರಿ ಅವರನ್ನು, ತಮ್ಮ ಪೂಜನೀಯ ಗುರುಗಳನ್ನು ತುಂಬು ಹೃದಯದಿಂದ, ಕೃತಜ್ಞತೆಯಿಂದ ಸನ್ಮಾನಿಸಿದರು. ಅದೇ ದಿನ ಅವರು ಬರೆದ ಅವರ ಆತ್ಮಚರಿತ್ರೆ ಪುಸ್ತಕವೂ ಲೋಕಾರ್ಪಣೆಗೊಂಡಿತು.

ಈ ಕೊಂಕಣಿಯ ಮಹಾರಾಜ ಸರಳಾತಿ ಸರಳ, ಅಷ್ಟೇ ನಿಷ್ಠುರ ನಡೆನುಡಿಯ ವ್ಯಕ್ತಿ. ಅನ್ಯಾಯವನ್ನು ಸಹಿಸುವುದು ಅವರಿಗೆ ಕನಸಿನಲ್ಲೂ ಅಸಾಧ್ಯದ ಸಂಗತಿ. ಈ ವಯಸ್ಸಿನಲ್ಲೂ ಅವರು ಹೋರಾಡಲು ಸದಾ ಸಜ್ಜು. ಇಂಥಾ ಹಿರಿಯ ವ್ಯಕ್ತಿ ಒಂದು ದಿನ ಘರ್ಜಿಸಿಯೇ ಬಿಟ್ಟರು.

ವಿಷಯ ಎಲ್ಲರಿಗೂ ಗೊತ್ತಿದ್ದದ್ದೇ. ಇಲ್ಲಿನವರೆಲ್ಲಾ ನಪುಂಸಕರಂತೆ ಕೈಕಟ್ಟಿ ಕುಳಿತಿದ್ದಾಗ ಈ ಜೀವ ಸುಮ್ಮನಾಗಲಿಲ್ಲ. ಸಿಕ್ಕಿದ ಸದವಕಾಶವನ್ನುಪಯೋಗಿಸಿ ಅವರು ಎಲ್ಲಾ ಕೊಂಕಣಿ ಜನರ ಪರವಾಗಿ ಕಹಳೆಯೂದಿದರು.

ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಿಂದ ಕೊಡಮಾಡಿದ, ಜೀವಮಾನ ಸಾಧನೆಗಾಗಿನ, ಒಂದು ಲಕ್ಷ ರೂಪಾಯಿ ನಗದನ್ನೊಳಗೊಂಡ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ ಮಾತನಾಡುತ್ತಿದ್ದ ಅವರು ಎರಡು ಪ್ರಶ್ನೆಗಳನ್ನು ಜನರ ಮುಂದಿಟ್ಟರು. ಅದರಲ್ಲಿ ಎರಡನೆಯದು, “ಕೊಂಕಣಿ ಭಾಷೆ ಮತ್ತು ಜನರ ಅಭಿವೃದ್ಧಿಗಾಗಿ, ಏಳಿಗೆಗಾಗಿ ಮತ್ತು ಏಕತೆಗಾಗಿ ಕ್ರಿಯಾಶೀಲವಾಗಿ ದುಡಿಯುತ್ತಿದ್ದ, ಸಾಹಿತ್ಯಕ್ಕಾಗಿ ಸದಾ ಕಾರ್ಯತತ್ಪರವಾಗಿದ್ದ ‘ಕೊಂಕಣಿ ಲೇಖಕರ ಒಕ್ಕೂಟ’ ಏನಾಗಿದೆ, ಯಾಕೆ ಅದು ಮೌನವಾಗಿದೆ, ಅದಕ್ಕೇನಾಯಿತು?” ಎಂದು ಕೇಳಿಯೇ ಬಿಟ್ಟರು.

ಆಲಿಸುತ್ತಿದ್ದ ಜನರು ಕಿವಿಗಡಚಿಕ್ಕುವಂತೆ ಚಪ್ಪಾಳೆ ತಟ್ಟಿದರು (ಕೊನೆಗೂ ಓರ್ವರು ಆ ಬಗ್ಗೆ ದನಿಯೆತ್ತಿದರಲ್ಲಾ ಎಂಬುದಕ್ಕಾಗಿ). ಕೊಂಕಣಿ ಬರಹಗಾರರು, ಕಾರ್ಯಕರ್ತರು ಕಿವಿ ನಿಮಿರಿಸಿಕೊಂಡು ಕೇಳಿ ಪುಳಕಿತರಾದರು, ರೋಮಾಂಚನಗೊಂಡರು.

ಅಷ್ಟೆ! ಮರುದಿನ ಎಲ್ಲರೂ ಅದನ್ನು ಮರೆತು ಬಿಟ್ಟರು. ಒಬ್ಬನನ್ನು ಬಿಟ್ಟು!

ಅದೊಂದು ಘಟಸರ್ಪ. ವಿಕೃತ ಮನಸ್ಸಿನ, ರಾಕ್ಷಸೀಯ ನಡೆನುಡಿಯ ಆ ವ್ಯಕ್ತಿ ಬೇರೆ ಯಾರೂ ಅಲ್ಲ. ಈ ‘ಕೊಂಕಣಿ ಲೇಖಕರ ಒಕ್ಕೂಟ’ವನ್ನು ಸೇರಿ, ಅದನ್ನು ಕುಲಗೆಡಿಸಿ, ಅದರ ಮೇಲೆ ಅತ್ಯಾಚಾರಗೈದು, ಕುತ್ತಿಗೆ ಹಿಸುಕಿ ಸಾಯಿಸಿದ ಮಾನಸಿಕ ರೋಗಿ (ಥೇಟ್ ವಿಕೃತ ಕಾಮಿ ಉಮೇಶ್ ರೆಡ್ಡಿಯ ತದ್ರೂಪ ಈತನೆಂದರೆ ತಪ್ಪಾದೀತೆ?). ಈ ಪರಮ ರೋಗಿಗೆ ಈ ಮಾತುಗಳನ್ನು ಸಹಿಸಲಾಗಲಿಲ್ಲ. ರಾತ್ರಿಯಿಡೀ ನಿದ್ದೆ ಮಾಡದೆ ಯಾರನ್ನು, ಯಾವುದನ್ನು ಹೇಗೆ ಹಣಿಯಬೇಕು, ತುಳಿಯಬೇಕು, ಧ್ವಂಸಗೊಳಿಸಬೇಕು, ನಾಶಗೊಳಿಸಬೇಕೆಂದು ಒಂದೇ ಸಮನೆ ತನ್ನನ್ನು ತಾನೇ ಬಾಧಿಸುತ್ತಾ ವಿಕೃತ, ವಿನಾಶಕಾರಿ ಚಿಂತನೆಯಲ್ಲಿ ತೊಡಗಿದ ಈ ಪರಮ ರೋಗಿ, ಅಸ್ವಸ್ಥತೆಯಿಂದ ಬಳಲುತ್ತಾ ದಿನವಿಡೀ ಗಾಢಾಲೋಚನೆಯಲ್ಲಿ ನರಳಿ, ನಲುಗಿ ಮಾಡಿದ್ದು ಒಂದೇ ಕೃತ್ಯ.

ಸಮಗ್ರ ಕ್ರೈಸ್ತ ಜನಾಂಗಕ್ಕೆ ಓರ್ವ ಪೂಜ್ಯ ಸ್ವಾಮೀಜಿಯಾಗಿ, ಅವರಿಗೆ ಮಾರ್ಗದರ್ಶನ ನೀಡಿ, ಜನಾನುರಾಗಿಯಾಗಿ, ಕೊಂಕಣಿಯ ಸೇವಾ ಕೈಂಕರ್ಯಗಳಲ್ಲಿ ತೊಡಗಿಸಿಕೊಂಡು ಸರ್ವ ಧರ್ಮ, ಜಾತಿ, ಜನಾಂಗಗಳವರ ಪ್ರೀತಿಪಾತ್ರರಾಗಿದ್ದ, ಅಭಿಮಾನ, ಗೌರವಾದರಕ್ಕೊಳಗಾಗಿದ್ದ, ಆದರ್ಶಗಳಿಗೆ ಹೆಸರುವಾಸಿಯಾಗಿದ್ದ, ವಯೋವೃದ್ಧ ಗುರುಗಳಾದ ಇದೇ ಫಾದರ್ ಮಾರ್ಕ್ ವಾಲ್ಡರ್ ಅವರನ್ನು ಸುಮಾರು ಅರ್ಧಗಂಟೆಯ ಕಾಲ ಧಮಕಿ ಹಾಕಿ, ಕೀಳು ಮಾತುಗಳಲ್ಲಿ ನಿಂದಿಸಿ, ಅವಮಾನಗೊಳಿಸಿ, ನೀಚವಾಗಿ, ತುಚ್ಛವಾಗಿ ಬೆದರಿಸಿ ಘಾಸಿಗೊಳಿಸಿದನೀ ಪರಮ ಘಾತುಕ, ಅನಾಗರಿಕ, ಪೈಶಾಚಿಕ ವಿಷಜಂತು. (ಇದನ್ನು ಇತ್ತೀಚೆಗೆ ಬಹಿರಂಗಪಡಿಸಲಾಯಿತು).

ಇದು ಬರೀ ಒಂದು ಸ್ಯಾಂಪಲ್ ಅಷ್ಟೇ. ಒಂದು ರೀತಿಯಲ್ಲಿ ಸಮಗ್ರ ಕೊಂಕಣಿ ಹಾಗೂ ಕ್ರೈಸ್ತರಿಗೆ ಆರಾಧ್ಯದೈವದಂತಿದ್ದ ಒಬ್ಬ ಹಿರಿಯ ನೇತಾರರನ್ನು, ಪೂಜ್ಯ ಯಾಜಕರನ್ನು ಈ ರೀತಿ ತುಚ್ಛವಾಗಿ ವ್ಯಕ್ತಿಯೋರ್ವ ಬೆದರಿಸುತ್ತಾನೆಂದರೆ, ಅವಮಾನಿಸುತ್ತಾನೆಂದರೆ ಆತ ನಾಗರಿಕ ಸಮಾಜದಲ್ಲಿ ಇರಲು ಅರ್ಹನೆ? ನೀವೇ ಹೇಳಿ. ಮನುಷ್ಯರಾದವರಿಂದ ಇಂತಹದನ್ನು ಕಲ್ಪಿಸಿಕೊಳ್ಳಲೂ ಅಸಾಧ್ಯ.

futai-re-budkulo-2 futai-re-budkulo

ಅದಕ್ಕಿಂತಲೂ ಆಘಾತಕಾರಕವೆಂದರೆ ಇಂತಹ ಕೀಚಕನನ್ನು ಅತ್ಯುಗ್ರವಾಗಿ, ಸಾರ್ವಜನಿಕವಾಗಿ ‘ಮಹನೀಯ’ರೊಬ್ಬರು ಬೆಂಬಲಿಸಿದ್ದೇ ಅಲ್ಲದೆ, ಆತನನ್ನು ಸಮರ್ಥಿಸಿ, ತಾನು ಆತನನ್ನು ನೀರೆರೆದು ಪೋಷಿಸಿದ್ದು ಸಾಕಾಗಲಿಲ್ಲವೆಂಬಂತೆ ಕೊಂಕಣಿಗರೆಲ್ಲರೂ ಪೋಷಿಸಿ, ಪ್ರೋತ್ಸಾಹಿಸಿ, ಹುರಿದುಂಬಿಸಬೇಕಂತೆ.

ಎಂಥಾ ನಿಕೃಷ್ಟ ಸಂಗತಿಯಲ್ಲವೆ?

ನೀವೇ ಹೇಳಿ, ಓರ್ವ ನೀಚಾತಿನೀಚ, ಹೀನಾತಿಹೀನ, ಅತಿ ಕೀಳು ದರ್ಜೆಯ ಕೃತ್ಯಗಳನ್ನು ನಡೆಸಿದ, ಮಾನಸಿಕ ಸಮತೋಲನ ಕಳೆದುಕೊಂಡು ಸಮಾಜಕ್ಕೆ ಘಾತುಕಮಯವಾಗಿ ಬೆದರಿಕೆಯೊಡ್ಡುತ್ತಾ, ಹಾನಿಗೊಳಿಸುತ್ತಿರುವ, ಭಯಭೀತಿಗೊಳಿಸುತ್ತಿರುವ ಓರ್ವ ರಾಕ್ಷಸನನ್ನು ಯಾರಾದರೂ ಹೀಗೆ ಬೆಂಬಲಿಸುತ್ತಾರೆ, ನೆರವು ನೀಡುತ್ತಾರೆಂದರೆ ಅಂತಹ ವ್ಯಕ್ತಿಗಳು ಯಾವ ಮನಸ್ಥಿತಿಯವರು? ಏನಂತೀರಿ?

ಹಾಂ. ಗಾಬರಿಗೊಳ್ಳಬೇಡಿ. ಈ ವ್ಯಕ್ತಿ ಬೇರ್ಯಾರೂ ಅಲ್ಲ. ದೇಶಕ್ಕೆ ದೇಶವೇ ಗೌರವಾದರಗಳಿಂದ ಪರಿಗಣಿಸುವ ಪ್ರತಿಷ್ಠಿತ ಪ್ರಶಸ್ತಿಯೊಂದನ್ನು ‘ಪಡೆದು’ಕೊಂಡಿರುವ ಮಹಾನ್ ವ್ಯಕ್ತಿ ಈತ!

ಹೌದು. ನಿಮ್ಮ ಊಹೆ ನಿಜ. ಈ ವ್ಯಕ್ತಿ ಕೂಡ ಅದೇ ವ್ಯಕ್ತಿತ್ವವನ್ನು ಹೊಂದಿರುವಂತಹ ಮನುಷ್ಯ. ಇಲ್ಲದಿದ್ದರೆ ಯಾರು ಮತ್ತು ಯಾಕೆ ಓರ್ವ ಕೇಡಿಯನ್ನು, ಅತ್ಯಾಚಾರಿ ಮನಸ್ಸಿನವನ್ನು ಸಾರ್ವಜನಿಕವಾಗಿ ಬೆಂಬಲಿಸುತ್ತಾರೆ, ಹೇಳಿ!?

ಈ ಅಸಹ್ಯಕರ, ಪರಮ ಘಾತುಕ ಬೆಳವಣಿಗೆ ನಡೆದಾಗ ಕೊಂಕಣಿ ಜನರೆಲ್ಲಾ ಬೆಚ್ಚಿ ಬಿದ್ದರು. ಇಂತಹ ಗೌರವಾನ್ವಿತ ಪ್ರಶಸ್ತಿ ‘ವಿಜೇತ’ನೊಬ್ಬ ಅತಿ ಕೀಳು ವ್ಯಕ್ತಿಯೋರ್ವನನ್ನು ಬೆಂಬಲಿಸಿದ್ದಾದರೂ ಯಾಕೆ ಎಂಬುದು ಅವರಿಗೆ ಸೋಜಿಗವನ್ನುಂಟು ಮಾಡಿತು. ಆದರೆ ಅದರ ಮರ್ಮ ಮತ್ತು ಹಿಂದಿನ ರಹಸ್ಯ ತಿಳಿದುಕೊಂಡವರು ಬಹಳಷ್ಟು ಜನರಿದ್ದಾರೆ. ಅವರಿಗೆ ಆಘಾತವಾಗಲಿಲ್ಲ.

ಇಂತಿಪ್ಪ ಈ ಬೆಳವಣಿಗೆಯ ಸಮಯದಲ್ಲಿಯೇ ಬೇರೆ ಕೆಲವು ಘಟನೆಗಳು ಜರಗಿದವು. ಈ ಮಾನಸಿಕ ಅಸ್ವಸ್ಥ ರಾಕ್ಷಸ ಮಾಡಿದ ಅಪಾಯಕಾರಿ ಕೃತ್ಯಗಳಿಂದ ಮಾರಣಾಂತಿಕವಾಗಿ ಘಾಸಿಗೊಳಪಟ್ಟಿದ್ದ ವ್ಯಕ್ತಿ, ಸಂಸ್ಥೆ, ಸಂಘಟನೆಗಳ ಪರಿಸ್ಥಿತಿಯನ್ನು ಕಂಡು ವ್ಯಥೆಗೊಳಪಟ್ಟ ದೂರದೂರಿನ ಕೊಂಕಣಿ ವ್ಯಕ್ತಿಗಳು, ಸಂಘಟನೆಗಳು ಚರ್ಚಿಸಿ, ಈ ಅಪರಾಧಿಗಳಿಗೆ ಕಡಿವಾಣ ಹಾಕಬೇಕು, ಕೊಂಕಣಿಯಲ್ಲಿ ನಡೆಯುತ್ತಿರುವ ಅನಾಚಾರ, ದುಷ್ಕೃತ್ಯಗಳನ್ನು ತಡೆಯಬೇಕು, ಕೊಂಕಣಿ ಭಾಷೆ ಮತ್ತು ಜನರಿಗಾಗುತ್ತಿರುವ ಅನ್ಯಾಯ, ಅಪಾಯಗಳನ್ನು ನಿಲ್ಲಿಸಬೇಕೆಂದು, ಅದಕ್ಕಾಗಿ ತಾವು ಶ್ರಮಿಸಬೇಕೆಂದು ಪಣತೊಟ್ಟರು.

ಅದೇ ಸಮಯದಲ್ಲಿ ಕೊಂಕಣಿ ಚಕ್ರವರ್ತಿಯವರು ಬರೆದ ಆತ್ಮಚರಿತ್ರೆಯನ್ನು, ಅವರ 80ನೇ ಹುಟ್ಟುಹಬ್ಬದ ದಿನದಂದು ಬಿಡುಗಡೆಗೊಳಿಸುವ ಕಾರ್ಯಕ್ರಮವನ್ನು ಅವರ ಶಿಷ್ಯಂದಿರು ಏರ್ಪಡಿಸಿದರು. ಅಲ್ಲಿ ಮತ್ತೊಮ್ಮೆ ಇದೇ ವಿಚಾರದಲ್ಲಿ ಮಂಥನ ನಡೆಯಿತು.

budkulo_fr-mark-walder_autobiography-16 budkulo_fr-mark-walder_autobiography-14 budkulo_fr-mark-walder_autobiography-17 budkulo_fr-mark-walder_autobiography-13 budkulo_fr-mark-walder_autobiography-5 budkulo_fr-mark-walder_autobiography-11 budkulo_fr-mark-walder_autobiography-12 budkulo_fr-mark-walder_autobiography-20 budkulo_fr-mark-walder_autobiography-9 budkulo_fr-mark-walder_autobiography-1 budkulo_fr-mark-walder_autobiography-30 budkulo_fr-mark-walder_autobiography-31 budkulo_fr-mark-walder_autobiography-33

ವಯೋವೃದ್ಧ ಸನ್ಯಾಸಿಯವರನ್ನು ಫೋನಿನಲ್ಲಿ ಬೆದರಿಸಿ, ನಿಂದಿಸಿದ ಪ್ರಕರಣದಿಂದ ಹಿಡಿದು, ಕೊಂಕಣಿ ಲೇಖಕರ ಒಕ್ಕೂಟದ ಹತ್ಯೆ, ಕೊಂಕಣಿ ವ್ಯಕ್ತಿ, ಸಾಧಕ, ಸಾಹಿತಿಗಳಿಂದ ಕಲಾವಿದರು, ಸಂಗೀತಗಾರರಿಂದ ನಾಟಕಕಾರರು, ಕಾರ್ಯಕರ್ತರುಗಳಿಂದ ನಾಯಕರುಗಳ ತನಕ, ಪತ್ರಿಕೆಗಳಿಂದ ಸಂಘ ಸಂಸ್ಥೆಗಳವರೆಗೆ ಕಂಡ ಕಂಡವರನ್ನೆಲ್ಲಾ, ಸಿಕ್ಕಸಿಕ್ಕವರನ್ನೆಲ್ಲಾ ಉಗ್ರಗಾಮಿಗಳಂತೆ, ಭಯೋತ್ಪಾದಕರಂತೆ, ಗೂಳಿಗಳಂತೆ ಹಲ್ಲೆ, ಆಕ್ರಮಣ, ಧ್ವಂಸ ಕಾರ್ಯ ನಡೆಸುತ್ತಾ, ಮಾನಹರಣದಿಂದ ಹಿಡಿದು ಚಾರಿತ್ರ್ಯಹನನ ಮತ್ತು ಕೊನೆಗೆ ಅವರನ್ನೆಲ್ಲಾ ಸರ್ವನಾಶ ಮಾಡುವ ಏಕೈಕ ಧ್ಯೇಯೋದ್ದೇಶ, ಗುರಿಯೊಂದಿಗೆ ನಿರಂತರ ಕಾರ್ಯತತ್ಪರರಾಗಿದ್ದ ಈ ದುರ್ಘಟನೆ, ಅಸಹನೀಯ, ಆತಂಕಕಾರಿ ಬೆಳವಣಿಗೆಗಳಿಂದ ಮುಕ್ತಿ ದೊರಕಿಸಿಕೊಳ್ಳಲು ಇದು ಸಕಾಲ, ತುರ್ತು ಸಮಯವೆಂಬುದನ್ನು ಎಲ್ಲರೂ ಕಂಡುಕೊಂಡರು.

ಸಭೆಯಲ್ಲಿ ಮಾತನಾಡಿದ ಅತಿಥಿಗಳು, ಗಣ್ಯ ವ್ಯಕ್ತಿಗಳೂ ಅದನ್ನೇ ಮುಕ್ತವಾಗಿ, ಧೈರ್ಯದಿಂದ ಹೇಳಿದರು. ಮುಖ್ಯ ಅತಿಥಿಯಾಗಿದ್ದ ದೈಜಿವರ್ಲ್ಡ್ ವೀಕ್ಲಿಯ ಸಂಪಾದಕ ಹೇಮಾಚಾರ್ಯರವರು ಈ ಹೀನ ಬೆಳವಣಿಗೆಗಳನ್ನು ಖಂಡಿಸಿ, ಈ ನಾಚಿಕೆಗೇಡಿನ ಪರಿಸ್ಥಿತಿಯಿಂದ ಕೊಂಕಣಿಗರನ್ನು ಕಾಪಾಡಲು ಕರೆ ನೀಡಿದರು. ಈ ಮಹತ್ವದ, ಗುರುತರ ಕೈಂಕರ್ಯದ ಜವಾಬ್ದಾರಿಯನ್ನು ಹೊರಲು, ಕಾರ್ಯಕ್ರಮದ ಅಧ್ಯಕ್ಷರೂ ಆಗಿದ್ದ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ, ಸರ್ವರಿಂದ ಮಾನ್ಯರೆಂದು ಪರಿಗಣಿತರಾದ, ರೊಯ್ ಕಾಸ್ತೆಲಿನೊ ಅವರಿಗೆ ಆಹ್ವಾನ ನೀಡಿದರು. ಇದಕ್ಕೆ ಬೇಕಾದ ಅಧಿಕಾರ, ಅರ್ಹತೆ ಅವರಿಗಿದೆ ಎಂದೂ ಹೇಳಿದರು.

ಈ ರಾಯ್ ಕಾಸ್ತೆಲಿನೊ ಅವರು ಕೊಂಕಣಿಯ ಮತ್ತೊಬ್ಬ ಹೆಮ್ಮೆಯ ಪುತ್ರ. ದಶಕಗಳಿಂದ ಕೊಂಕಣಿಯ ಒಳಿತಿಗೆ ತಮ್ಮದೇ ಹಣ ಖರ್ಚು ಮಾಡುತ್ತಾ ಸದಾ ಶ್ರಮಿಸುತ್ತಿರುವ ಕ್ರಿಯಾಶೀಲ, ನಿಸ್ವಾರ್ಥ ಮತ್ತು ಕಟಿಬದ್ಧ, ಲವಲವಿಕೆಯ ನಿಷ್ಠಾವಂತ ಕಟ್ಟಾಳು. ಇಂತಹ ಗಣ್ಯ, ಸರ್ವಾದರಣೀಯ ಸಾಧಕನನ್ನೂ ಈ ಕೀಚಕರ ಪಡೆ ಸತತವಾಗಿ ಕಿರುಕುಳ ನೀಡಿ, ಚಾರಿತ್ರ್ಯಹನನ ಮತ್ತು ಮಾನಹಾನಿ ಮಾಡುತ್ತಾ ಬಂದವರು. ಆದರೆ ಅದಕ್ಕೆ ರೊಯ್ ಅವರು ತಲೆಕೆಡಿಸಿಕೊಂಡಿದ್ದೇ ಇಲ್ಲ. ಆದರೆ ನಿರಂತರವಾಗಿ, ಸತತವಾಗಿ, ತಮ್ಮನ್ನು ಕೊಂಕಣಿಯ ಸರ್ವ ಸಂಗತಿಗಳಿಗೂ ತಾವೇ ವಾರಿಸುದಾರರೆಂದು ಕರೆದು ಕೊಳ್ಳುವ ಚೋರ ಗುರು ಮತ್ತವನ ಚಾಂಡಾಲ ಶಿಷ್ಯರುಗಳ ದುರುದ್ದೇಶಪೂರಿತ ಆಪಾದನೆಗಳಿಂದ, ಕಿರುಕುಳಗಳಿಂದ ಮನನೊಂದಂತೆ ಕಂಡುಬಂದ ರೊಯ್ ಕಾಸ್ತೆಲಿನೊ ಅವರು ಹೇಮಾಚಾರ್ಯ ಅವರು ನೀಡಿದ ಈ ಆಹ್ವಾನವನ್ನು ಸ್ವೀಕರಿಸಲು ನಿರಾಕರಿಸಿದರು.

‘ತನ್ನನ್ನು ಅಯೋಗ್ಯ, ನಾಲಾಯಕ್ ಎಂದು ಕರೆಯುವ ಜನರನ್ನು ತಾನು ಹೇಗೆ ಮನವೊಲಿಸಲಿ, ಅವರನ್ನು ಸಭೆ ಸೇರಿಸಿ ಯಾವ ಪುರುಷಾರ್ಥ ಸಾಧನೆ ಮಾಡಿಯೇನು’ ಎಂದು ಅವರು ತಮ್ಮ ಅಳಲನ್ನು ತೋಡಿಕೊಂಡರು. ಅವರು ಹೇಳಿದ್ದೂ ಸರಿಯೇ ಆಗಿತ್ತು.

ಆದರೆ ಅವರು ಒಂದು ಮಾತು ಹೇಳಿದರು. ಈ ವ್ಯಕ್ತಿಗಳಿಂದ ಬಾಧೆಗೊಳಪಟ್ಟಿದ್ದು ಹೆಚ್ಚಾಗಿ ಕೊಂಕಣಿ ಬರಹಗಾರರು, ಕಲಾವಿದರು ಮತ್ತು ಕಾರ್ಯಕರ್ತರು. ಅಂತಹವರು ಈ ಸಭೆಯಲ್ಲಿ ಹಾಜರಿದ್ದರು. ರೊಯ್ ಅವರು ಈ ಜವಾಬ್ದಾರಿಯನ್ನು, ಹೊಣೆಗಾರಿಕೆಯನ್ನು ಹೊರಲು ಅನ್ಯಾಯಕ್ಕೊಳಗಾದವರಿಗೇ ಕರೆ ಕೊಟ್ಟರು. ಬರಹಗಾರರು, ಸಾಹಿತಿಗಳು, ಪತ್ರಕರ್ತರು ಮತ್ತಿತರರೆಲ್ಲಾ ತಮ್ಮವರ ಮೇಲೆ ನಡೆಯುತ್ತಿರುವ ಅನ್ಯಾಯ (ಕೇವಲ ಬೆರಳೆಣಿಕೆಯ ವ್ಯಕ್ತಿಗಳಿಂದ), ವಂಚನೆ, ತೊಂದರೆ, ಕೀಟಲೆ, ರಗಳೆ, ಶೋಷಣೆ, ದಬ್ಬಾಳಿಕೆ, ಅಕ್ರಮ, ಅನೀತಿಗಳನ್ನು ಒಕ್ಕೊರಲಿನಿಂದ ಉಗ್ರವಾಗಿ ಖಂಡಿಸಬೇಕೆಂದು, ವಿರೋಧಿಸಬೇಕೆಂದು ಕರೆ ನೀಡಿದರು. ಸಾಹಿತಿಗಳು ತಮ್ಮ ಬರವಣಿಗೆಯಲ್ಲಿ ಇದನ್ನು ಮಾಡಬೇಕು ಎಂದರು.

ಸರಿಯೇ ಅಲ್ಲವೆ? ಈ ನೀಚ ಪೀಡೆಗಳು ಇಷ್ಟೊಂದು ವಿಪರೀತವಾಗಿ ಬೆಳೆದು ಬಿಟ್ಟಿದ್ದಕ್ಕೆ ಕಾರಣ ಸಂಬಂಧಪಟ್ಟವರು ಷಂಡರಂತೆ, ಮೂಕ-ಕಿವುಡ-ಕುರುಡರಂತೆ ವರ್ತಿಸಿದ್ದೇ ಅಲ್ಲವೆ? ತಾನು ಏನು ಮಾಡಿದರೂ ಅದನ್ನು ಕೇಳುವವರಿಲ್ಲ, ಏನೂ ಮಾಡಬಲ್ಲೆ, ಏನೇ ಆಗಲಿ, ಯಾವುದನ್ನೇ ಮಾಡಲಿ ತನ್ನನ್ನು ಪ್ರಶ್ನಿಸುವವರೂ ಇಲ್ಲ, ತಡೆಯುವವರೂ ಇಲ್ಲವೆಂಬ ಅಹಂಕಾರ, ಮದ ಮತ್ತು ದುರುಳತನದಿಂದಲೇ ಅಲ್ಲವೇ ಈ ವ್ಯಕ್ತಿ (ಮತ್ತವನ ಪಟಾಲಂ) ಇಂತಹ ನಿಕೃಷ್ಟ ಮಟ್ಟಕ್ಕಿಳಿದಿದ್ದು!?

ಅಷ್ಟೇ ಅಲ್ಲ, ತನ್ನನ್ನು ತಡೆಯಲು, ಸರಿಪಡಿಸಲು, ವಿರೋಧಿಸಲು ಬಂದ ಕೆಲವರಿಗೆ ಹುಚ್ಚು ನಾಯಿಯಂತೆ ಎರಗಿ ಅವರ ಮತ್ತು ಇತರರ ಜಂಘಾಬಲವೇ ಉಡುಗುವಂತೆ ಮಾಡಿದ್ದು ಈ ದುರ್ಮಾರ್ಗಿಗಳಿಗೆ ಮತ್ತಷ್ಟು ಬಲ ನೀಡಿತು. (ನ್ಯಾಯಕ್ಕಾಗಿ ಹೋರಾಡಿದ ‘ಬುಡ್ಕುಲೊ’ವನ್ನು ಹೇಗಾದರೂ ಹಣಿಯಬೇಕೆಂದು ದೂರದೂರಿನಲ್ಲಿರುವ ತಮ್ಮ ಮಿತ್ರರ ಮನಸ್ಸಿಗೆ ವಿಷಬೋಧನೆ ಮಾಡಿ ಅವರಿಂದ ನಮ್ಮ ಮೇಲೆ ನಿರಂತರ ದಾಳಿ, ಬೆದರಿಕೆ, ನಿಂದನೆ, ಅಪಪ್ರಚಾರ ನಡೆಸಿದ್ದರ ಕಥೆಯೇ ಬೇರೆ ಇದೆ. ಅವೆಲ್ಲವೂ ಸಾಕ್ಷ್ಯಾಧಾರಗಳ ಸಮೇತ ನಮ್ಮಲ್ಲಿ ದಾಸ್ತಾನುಗೊಂಡಿದೆ).

ಅದೆಲ್ಲಾ ಸಾಲದ್ದಕ್ಕೆಂಬಂತೆ ಸಮಾಜದಲ್ಲಿ ತಾನೋರ್ವ ಮಹಾನ್ ಸಾಹಿತಿಯೆಂಬಂತೆ ಮುಖವಾಡ ಹೊತ್ತುಕೊಂಡು, ‘ಊಂಚಿ’ ಪ್ರಶಸ್ತಿಯನ್ನು ಗೆದ್ದು ದಿಗ್ವಿಜಯಂಗೈದೆನೆಂಬಂತೆ ತೋರ್ಪಡಿಸುತ್ತಾ, ಹೊರಗೆ ಸಂತನಂತೆಯೂ ಗುಪ್ತವಾಗಿ ಪರಮ ದುರುಳನಂತೆಯೂ ವರ್ತಿಸುವ ಮತ್ತೋರ್ವ ಕಪಟ ನಾಟಕ ಸೂತ್ರಧಾರಿಯ ‘ರಂಗಪ್ರವೇಶ’ವಾಗಿದೆ.

ಇಲ್ಲಿಯತನಕ ಗುಪ್ತವಾಗಿ ಕಾರ್ಯ ನಿರ್ವಹಿಸುತ್ತಿದ್ದ ಈ ‘ಕಂಸ’ ಇದೀಗ ಘರ್ಜಿಸುತ್ತಾ ತನ್ನ ಫಟ್ಟಿಂಗ ಶಿಷ್ಯರುಗಳ ತಂಟೆಗೆ ಬಂದರೆ ಜೋಕೆ, ಅವರು ತನ್ನವರು, ತಾನವರನ್ನು ಪೋಷಿಸುತ್ತೇನೆ, ಇನ್ನು ನೀವು ಪ್ರೇಕ್ಷಕ, ಸಾರ್ವಜನಿಕ ಬಂಧುಗಳೂ ಈ ಖೂಳರನ್ನು ತಲೆ ಮೇಲೆ ಹೊತ್ತುಕೊಂಡು ಮೆರೆಯಬೇಕೆಂದು ‘ಪುಣ್ಯಕೋಟಿ’ಯ ಸೋಗಿನಲ್ಲಿ ಮೊಸಳೆ ಕಣ್ಣೀರು ಸುರಿಸಿದ್ದನ್ನು ಕಂಡು ಬೆಚ್ಚಿ ಬಿದ್ದ, ಇಲ್ಲಿಯ ತನಕ ನಿದ್ರಿಸಿಕೊಂಡಿದ್ದ, ತನಗೂ ಪ್ರಪಂಚಕ್ಕೂ ಯಾವುದೇ ಸಂಬಂಧವೇ ಇಲ್ಲವೆಂಬಂತೆ ನಿಷ್ಕ್ರಿಯರಾಗಿದ್ದ ಕೊಂಕಣಿ ಬರಹಗಾರರು ಮತ್ತು ಇತರರೆಲ್ಲಾ ಎಚ್ಚರಗೊಂಡು, ಮೈ ಕೊಡವಿಕೊಂಡು ಸುಮ್ಮನಾಗಿದ್ದು ಸಾಕೆಂಬ ನಿರ್ಧಾರಕ್ಕೆ ಬಂದಿದ್ದಾರೆ, ಕೆಡುಕುತನವನ್ನು ನಿಲ್ಲಿಸಲೇಬೇಕೆಂಬ ಸಂಕಲ್ಪ ಮಾಡಿದ್ದಾರೆ.

‘ಬುಡ್ಕುಲೊ’ ಕೊಂಕಣಿಯ ಹೆಮ್ಮೆಯ ಮಾಧ್ಯಮ. ಕೊಂಕಣಿ ಜನರ, ಸಮುದಾಯದ, ಭಾಷೆ, ಸಂಸ್ಕøತಿ, ಕಲೆ ಸೇರಿದಂತೆ ಸಮಗ್ರ ಒಳಿತಿಗಾಗಿ, ಅಭಿವೃದ್ಧಿಗಾಗಿ, ಶ್ರೇಯಕ್ಕೋಸ್ಕರ ನಿರಂತರ ದುಡಿದು, ಬೆಂಬಲ ನೀಡಿ, ಪ್ರಚಾರ ನೀಡುತ್ತಾ ಬಂದಿದೆ. ಈ ಪರ್ವಕಾಲದಲ್ಲಿ, ಮಾಡು ಇಲ್ಲವೇ ಮಡಿ ಪರಿಸ್ಥಿತಿಯಲ್ಲಿ ನ್ಯಾಯಕ್ಕಾಗಿ, ನೀತಿಗಾಗಿ, ಸತ್ಯಕ್ಕಾಗಿ ನಾವು ಎದೆಗುಂದದೆ ನ್ಯಾಯಕ್ಕಾಗಿನ ಹೋರಾಟದಲ್ಲಿ ಮುಂಚೂಣಿಯಲ್ಲಿ ಭಾಗವಹಿಸುತ್ತೇವೆ. ಅತ್ಯಂತ ಅಗತ್ಯದ, ಅನಿವಾರ್ಯ ಮತ್ತು ನಿರ್ಣಾಯಕ ಸಂದರ್ಭದಲ್ಲಿ ಕೊಂಕಣಿಯ ಏಕತೆ, ಕೊಂಕಣಿ ಜನರ ಒಳಿತಿಗೆ, ಒಗ್ಗಟ್ಟಿಗೆ, ಸಮಗ್ರತೆಗಾಗಿ ದುಡಿಯುವ ಎಲ್ಲರ ಜೊತೆ ಕೈ ಜೋಡಿಸಲು ‘ಬುಡ್ಕುಲೊ’ ಮಾಧ್ಯಮ ಬದ್ಧವಾಗಿದೆ, ಸಾಂಗತ್ಯ ಮತ್ತು ಬೆಂಬಲ ನೀಡಲು ಸಜ್ಜಾಗಿದೆ.

ಹಾಗಾಗಿ, ಬನ್ನಿ ನೀವೆಲ್ಲಾ ಸಮಸ್ತ ಕೊಂಕಣಿಯ ಸ್ವಾಭಿಮಾನಿ ಕಾರ್ಯಕರ್ತರೇ, ಸೇನಾನಿಗಳೇ, ಬಂಧುಗಳೇ ಬನ್ನಿ, ಒಳಿತು ಕೆಡುಕನ್ನು ಬೇರ್ಪಡಿಸೋಣ. ನಮ್ಮನ್ನೆಲ್ಲಾ ಬಾಧಿಸುವ ಮಾರಕ ಸಮಸ್ಯೆಗಳಿಂದ, ರೋಗಗಳಿಂದ ಮುಕ್ತರಾಗೋಣ. ಕೊಂಕಣಿಯಲ್ಲಿ ಶಾಂತಿ, ಸಮಾಧಾನದ ವಾತಾವರಣ ನಿರ್ಮಿಸಿ ಭಾಷಾಭಿವೃದ್ಧಿಗಾಗಿ ದುಡಿಯೋಣ.

ಜೈ ಕೊಂಕಣಿ, ಜೈ ಕರ್ನಾಟಕ, ಜೈ ಭಾರತ.

Send your feedback to: budkuloepaper@gmail.com

Like our Facebook Page: www.facebook.com/budkulo.epaper

ಕೊಂಕಣಿಯ ಅಸಹ್ಯ ಬೆಳವಣಿಗೆಗಳಿಗೆ ಖೇದ: ಕೊಂಕಣಿ ವರದಿಗೆ ಕ್ಲಿಕ್ ಮಾಡಿ

1 comment

  1. ಓರ್ವ ನೀಚಾತಿನೀಚ, ಹೀನಾತಿಹೀನ, ಅತಿ ಕೀಳು ದರ್ಜೆಯ ಕೃತ್ಯಗಳನ್ನು ನಡೆಸಿದ, ಮಾನಸಿಕ ಸಮತೋಲನ ಕಳೆದುಕೊಂಡು ಸಮಾಜಕ್ಕೆ ಘಾತುಕಮಯವಾಗಿ ಬೆದರಿಕೆಯೊಡ್ಡುತ್ತಾ, ಹಾನಿಗೊಳಿಸುತ್ತಿರುವ, ಭಯಭೀತಿಗೊಳಿಸುತ್ತಿರುವ ಓರ್ವ ರಾಕ್ಷಸನನ್ನು ಯಾರಾದರೂ ಬೆಂಬಲಿಸುತ್ತಾರೆ… Agree, there are Konkani people do not know every thing happening in Konkani directly or indirectly and it should not be expected so. But when I read this article , within this article, I would like to know who is that ನೀಚಾತಿನೀಚ, ಹೀನಾತಿಹೀನ ಮತ್ತು ಭಯಭೀತಿಗೊಳಿಸುತ್ತಿರುವ ರಾಕ್ಷಸ?

Leave a Reply to Stivan J Alva

Your email address will not be published. Required fields are marked *

Latest News