ನೀವು ಫೇಸ್‍ಬುಕ್‍ನಲ್ಲಿದ್ರೆ ಈ 7 ಸಂಗತಿಗಳನ್ನು ಅವಶ್ಯವಾಗಿ ತಿಳ್ಕೊಳ್ಳಿ

Budkulo Media Service

Posted on : February 11, 2016 at 12:41 PM

ಇಂದಿನ ಪ್ರಪಂಚದಲ್ಲಿ ಫೇಸ್‍ಬುಕ್ ಪ್ರೊಫೈಲ್ ಇರದವರು ವಿರಳ. ಹಳ್ಳಿಯಿಂದ ನಗರಗಳಲ್ಲಿ, ದೇಶ ವಿದೇಶಗಳಲ್ಲಿರುವ ಪ್ರತಿಯೊಬ್ಬರೂ ಫೇಸ್‍ಬುಕ್ ಅಕೌಂಟ್ ಹೊಂದಿದ್ದಾರೆ. ಇಲ್ಲದವರು ತೆರೆಯಲು ಹಾತೊರೆಯುತ್ತಾರೆ. ಕೆಲವರಿಗಂತೂ ಫೇಸ್‍ಬುಕ್ ನೋಡದಿದ್ದರೆ ದಿನವೇ ಕಳೆಯುವುದಿಲ್ಲ.

Facebook Logo_2ಇದೀಗ ವಿಜ್ಞಾನಿಗಳು ಫೇಸ್‍ಬುಕ್ ಬಳಕೆದಾರರರನ್ನು ಅಧ್ಯಯನ ಮಾಡಿ ವರದಿಯೊಂದನ್ನು ಬಿಡುಗಡೆಗೊಳಿಸಿದ್ದಾರೆ. ಫೇಸ್‍ಬುಕ್ ಬಳಸುವ ಪ್ರತಿಯೊಬ್ಬ ವ್ಯಕ್ತಿಯೂ ತಿಳಿದುಕೊಳ್ಳಬೇಕಾದ 7 ಸಂಗತಿಗಳನ್ನು ಅವರು ಪಟ್ಟಿ ಮಾಡಿದ್ದಾರೆ.

ನಿಮ್ಮ ಫೇಸ್‍ಬುಕ್ ಪ್ರೊಫೈಲ್ ನಿಮ್ಮ ವ್ಯಕ್ತಿತ್ವವನ್ನು ಬಹುತೇಕ ಜಾಹೀರುಗೊಳಿಸುತ್ತದೆ. ಹೊರ ಜಗತ್ತಿನ ಸಂಗತಿಗಳಿಗೆ ನೀವು ಎಷ್ಟು ತೆರೆದುಕೊಂಡಿದ್ದೀರಿ, ಹೊಸ ಸಂಗತಿಗಳಿಗೆ ನೀವೆಷ್ಟು ಮುಕ್ತವಾಗಿದ್ದೀರೆಂಬುದನ್ನು ಅದು ಸೂಚಿಸುತ್ತದೆ. ನೀವೆಷ್ಟು ಒತ್ತಡಕ್ಕೊಳಗಾಗಿದ್ದೀರಿ ಮತ್ತು ಕೆಲಸ ಮಾಡುವ ನಿಮ್ಮ ಸಾಮಥ್ರ್ಯವನ್ನೂ ಸಹ ನಿಮ್ಮ ಫೇಸ್‍ಬುಕ್ ಪ್ರೊಫೈಲ್ ನೋಡಿ ಕಂಡುಕೊಳ್ಳಬಹುದಂತೆ.

ಫೇಸ್‍ಬುಕ್ ಪ್ರೊಫೈಲಿನ ನಿಮ್ಮ ಫೋಟೊ ನೋಡಿ ನಿಮ್ಮನ್ನು ಅಳೆಯಬಹುದು. ನಿಮ್ಮ ಫೊಟೊ ನಿಮ್ಮ ಪ್ರಸ್ತುತ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಹಾಗೆ ನೋಡಿದರೆ ನಿಮ್ಮ ಭಾವಚಿತ್ರ ಮುಂದಿನ ಮೂರೂವರೆ ವರ್ಷಗಳ ತನಕ ನೀವು ಎಷ್ಟು ಸಂತೋಷದಲ್ಲಿರುವಿರಿ ಎಂಬುದರ ಅಂದಾದನ್ನೂ ಹೇಳುತ್ತದೆಯಂತೆ.

Budkulo_Facebook survey_1 Budkulo_Facebook survey_4 Budkulo_Facebook survey_2

ರಿಲೇಶನ್‍ಶಿಪ್ ಸ್ಟೇಟಸ್‍ನಲ್ಲಿ ನೀವು ಬರೆಯುವ ಸಾಲುಗಳು ನೀವೆಷ್ಟು ಸಂತೋಷದಲ್ಲಿದ್ದೀರೆಂಬುದನ್ನು ತೋರಿಸುತ್ತದೆ. ತಾವು ಇಂತಿಂಥವರ ಜೊತೆ (ಇನ್ ರಿಲೇಶನ್‍ಶಿಪ್ ವಿಥ್ ….) ಸಂಬಂಧದಲ್ಲಿದ್ದೇವೆ ಎಂಬು ಬರೆಯುವ ಗಂಡಸರು ಮತ್ತು ತಮ್ಮ ಜೀವನ ಸಂಗಾತಿಯ ಜೊತೆಗಿರುವ ಫೊಟೊ ಹಾಕಿಕೊಂಡಿರುವ ಹೆಂಗಸರು ತುಂಬಾ ಒಳ್ಳೆಯ ಸಂಬಂಧ ಹೊಂದಿದ್ದಾರೆಂದು ಹೇಳಬಹುದಂತೆ.

ಇನ್ನೊಂದು ವಿಚಾರ ಗೊತ್ತೇ? ಫೇಸ್‍ಬುಕ್‍ಗೆ ನಿಮ್ಮ ಬಗ್ಗೆ ಎಷ್ಟೊಂದು ತಿಳಿದಿರುತ್ತದೆಂಬುದನ್ನು ಇದು ತೋರಿಸುತ್ತದೆ. ನೀವು ಇನ್ನೆಷ್ಟು ದಿನ ಅಥವಾ ತಿಂಗಳುಗಳಲ್ಲಿ ಒಬ್ಬರ ಜೊತೆ ಸಂಬಂಧ ಹೊಂದಿರುವವರಿದ್ದೀರಿ ಎಂಬುದನ್ನೂ ಅದು ಹೇಳಬಲ್ಲದು. ನೀವು ಯಾರ ಜೊತೆ ಮುಂದಿನ ವಾರ ಡೇಟಿಂಗ್ ಮಾಡುತ್ತೀರಿ ಎಂಬುದು 33% ನಿಖರವಾಗಿ ಫೇಸ್‍ಬುಕ್‍ಗೆ ತಿಳಿದಿರುತ್ತದಂತೆ, ಗೊತ್ತಾ?

Budkulo_Facebook survey_3ಇನ್ನು ಫ್ರೆಂಡ್ಸ್‍ಗಳ ಬಗ್ಗೆ ಹೇಳುವುದಾದರೆ, ಎಲ್ಲರಿಗೂ 100ರಿಂದ 230 ಫ್ರೆಂಡ್ಸ್‍ಗಳನ್ನು ನಿಭಾಯಿಸಬಹುದಂತೆ. ನಿಮ್ಮ ಫ್ರೆಂಡ್‍ಗಳು ಎಷ್ಟೇ ಸಂಖ್ಯೆಯಲ್ಲಿದ್ದರೂ ಹೆಚ್ಚೆಂದರೆ ನೂರರಿಂದ ಇನ್ನೂರು ಫ್ರೆಂಡ್ಸ್‍ಗಳ ಜೊತೆ ಮಾತ್ರ ನಿಗದಿತವಾಗಿ ಸಂಪರ್ಕದಲ್ಲಿರುಬಹುದಂತೆ. ಸಾಮಾನ್ಯವಾಗಿ ನಮಗೆ ಇಷ್ಟವಿಲ್ಲದ ಸಂಗತಿಗಳನ್ನು ಸಿಕ್ಕಾಪಟ್ಟೆ ಪೋಸ್ಟ್ ಮಾಡುವವರನ್ನು ನಾವು ಅನ್‍ಫ್ರೆಂಡ್ ಮಾಡುತ್ತೇವೆಂದು ಈ ಅಧ್ಯಯನ ಹೇಳುತ್ತದೆ.

ಫೇಸ್‍ಬುಕ್‍ನಲ್ಲಿ ಐದು ಸಾವಿರದಷ್ಟು ಫ್ರೆಂಡ್‍ಗಳನ್ನು ಹೊಂದಿರಬಹುದು. ಆದರೆ ಎಷ್ಟು ಸಂಖ್ಯೆಯ ಫ್ರೆಂಡ್ಸ್‍ಗಳಿದ್ದಾರೆಂಬುದು ಪ್ರಮುಖವಲ್ಲ. ಕೇವಲ ಐದನೇ ಒಂದು ಭಾಗದಷ್ಟು ಜನರು ಮಾತ್ರ ನಿಮ್ಮ ಜೀವನದ ಮೇಲೆ ಪ್ರಭಾವ ಬೀರಲು ಶಕ್ತರಾಗುತ್ತಾರಂತೆ. ಯಾರ್ಯಾರು ಏನೇನು ಲೈಕ್ ಮಾಡುತ್ತಾರೆಂಬುದು ನಿಮಗೆ ಮುಖ್ಯವಲ್ಲ. ನಿಮಗೆ ಇಷ್ಟವಾಗಿದ್ದನ್ನು ಮಾತ್ರ ನೀವು ಲೈಕ್ ಮಾಡುತ್ತೀರಿ. ಕೆಲವೊಮ್ಮೆ ಹಳೆಯ ಫ್ರೆಂಡ್‍ಗಳನ್ನು ಮತ್ತೆ ಸೇರಿಸಿಕೊಳ್ಳುವುದೇ ಉತ್ತಮವಾಗಿರುತ್ತದೆ.

ಫೇಸ್‍ಬುಕ್‍ನಲ್ಲಿ ಪ್ರತಿಯೊಬ್ಬರು ತಮ್ಮಲ್ಲಿನ ಅತ್ಯುತ್ತಮವಾದುದನ್ನೇ ತೋರಿಸುತ್ತಾರೆ, ಕೆಟ್ಟದ್ದನ್ನಲ್ಲ. ಬೇರೆಯವರ ಅತ್ಯುತ್ತಮ ಸಂಗತಿ, ಸಾಧನೆ, ಯಶಸ್ಸು, ಗಳಿಕೆ ಇತ್ಯಾದಿಗಳನ್ನು ನೋಡಿಕೊಂಡು ನಾವು ಅವರ ಜೊತೆ ಹೋಲಿಕೆ ಮಾಡಿ ಕೀಳರಿಮೆ ಬೆಳೆಸಿಕೊಳ್ಳುವ ಮನೋಭಾವ ಹೊಂದಲೂ ಸಾಧ್ಯವಿದೆ. ಆದರೆ, ಫೇಸ್‍ಬುಕ್‍ನಲ್ಲಿ ನಿಮಗೆ ಬೇರೆಯವರಿಂದ ಸಾಂತ್ವನ ಮತ್ತು ಬೆಂಬಲವೂ ದೊರಕುತ್ತದೆಂಬುದನ್ನು ಮರೆಯುವಂತಿಲ್ಲ.

ಏನೇ ಇದ್ದರೂ ಒಳ್ಳೆಯ ಉದ್ದೇಶಗಳಿಗೆ ಯಾವುದನ್ನೇ ಆದರೂ ಬಳಸಿಕೊಂಡಲ್ಲಿ ನಮಗೇ ಉತ್ತಮ. ಫೇಸ್‍ಬುಕ್ ಇದಕ್ಕೆ ಹೊರತಲ್ಲ.

ಕೃಪೆ: ಇಂಟರ್‍ನೆಟ್

ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ನಮಗೆ ಕಳುಹಿಸಿ: budkuloepaper@gmail.com

1 comment

Leave a comment

Your email address will not be published. Required fields are marked *