ಇಲೆಕ್ಟ್ರಿಕಲ್ ಪಾಂಯ್ಟ್: ಎಲ್‍ಇಡಿ ಬಲ್ಬ್, ಫ್ಯಾನ್‍ಗಳಿಗೆ ವಿಶೇಷ ರಿಯಾಯಿತಿ

Media Release

Posted on : December 21, 2015 at 6:08 PM

ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಬಳಿ (ಕದ್ರಿ ರಸ್ತೆಯಲ್ಲಿ ಸಿವಿ ನಾಯಕ್ ಸಭಾ ಭವನದ ಎದುರುಗಡೆ) ಯ “ಇಲೆಕ್ಟ್ರಿಕಲ್ ಪಾಂಯ್ಟ್ ಕಾಂಪ್ಲೆಕ್ಸ್”ನಲ್ಲಿ ಮತ್ತು ಉಡುಪಿಯ ಕರಾವಳಿ ಸರ್ಕಲ್ ಬಳಿಯ “ರೀಗಲ್ ಎಂಟ್ರಿ” ಕಟ್ಟಡದಲ್ಲಿ ಕಾರ್ಯವೆಸಗುತ್ತಿರುವ ಕರ್ನಾಟಕದಲ್ಲೇ ಅಲಂಕಾರ ದೀಪಗಳ ಮತ್ತು ಫ್ಯಾನುಗಳ ಬೃಹತ್ ಮಳಿಗೆ “ಇಲೆಕ್ಟ್ರಿಕಲ್ ಪಾೈಂಟ್” ನವೆಂಬರ್ 27ರಂದು ತನ್ನ 15ನೇ ವಾರ್ಷಿಕೋತ್ಸವ ಆಚರಿಸಿದೆ.

Electrical Point_Title

“ಇಲೆಕ್ಟ್ರಿಕಲ್ ಪಾಂಯ್ಟ್” ತನ್ನ 15ನೇ ವಾರ್ಷಿಕೋತ್ಸವ ಪ್ರಯುಕ್ತ ಏರ್ಪಡಿಸಿರುವ ‘ವಿಶೇಷ ದರ ಮಾರಾಟದ ಫ್ಯಾನ್ ಮತ್ತು ಎಲ್‍ಇಡಿ ಮೇಳ’ ಮಂಗಳೂರು ಮತ್ತು ಉಡುಪಿ ಶೋರೂಮುಗಳಲ್ಲಿ 2016 ಜನವರಿ 30ರವರೆಗೆ ಜಾರಿಯಲ್ಲಿರುತ್ತದೆ. ಈ ಯೋಜನೆಯಂತೆ ಆ್ಯಂಕರ್, ಬಜಾಜ್, ಕ್ರಾಂಪ್ಟನ್, ಹವೆಲ್ಸ್, ಸ್ಟ್ಯಾಂಡರ್ಡ್ ಕಂಪೆನಿಯ ಆಯ್ದ ಮಾಡೆಲ್‍ಗಳ ಸೀಲಿಂಗ್ ಫ್ಯಾನ್‍ಗಳು ಆಕರ್ಷಕ ದರಗಳಲ್ಲಿ ಮಾರಾಟ ಮಾಡಲಾಗುತ್ತದೆ. ಎಲ್‍ಇಡಿ ಬಲ್ಬುಗಳು, ಎಲ್‍ಇಡಿ ಪ್ಯಾನೆಲ್ ಲೈಟ್ಸ್ ಮತ್ತು ಎಲ್‍ಇಡಿ ಟ್ಯೂಬ್ ಫಿಟ್ಟಿಂಗ್ಸ್‍ಗಳ ಆಯ್ದ ಮಾಡೆಲ್‍ಗಳು ಸಂಸ್ಥೆ ಈಗಾಗಲೇ ಪ್ರಚುರಪಡಿಸಿದ ವಿಶೇಷ ರಿಯಾಯಿತಿ ದರಗಳಲ್ಲಿ ಗ್ರಾಹಕರಿಗೆ ದೊರೆಯಲಿವೆ. ಮನೆ, ಸಭಾಭವನ, ಪೂಜಾ ಸ್ಥಳ ಇನ್ನಿತರ ಯಾವುದೇ ಕಟ್ಟಡ ಮತ್ತು ಕಂಪೌಂಡ್‍ಗಳಲ್ಲಿ ಉಪಯೋಗದ ಅಲಂಕಾರ ದೀಪಗಳಿಗೆ ಎಂದಿನಂತೆ 40% ರಿಯಾಯಿತಿ ದೊರೆಯುತ್ತದೆ.

2000 ನವೆಂಬರ 27ರಂದು ಮಂಗಳೂರಿನ ಫಳ್ನೀರಿನಲ್ಲಿ 300 ಚದರ ಅಡಿ ಸ್ಥಳದಲ್ಲಿ ಆರಂಭಗೊಂಡಿದ್ದ “ಇಲೆಕ್ಟ್ರಿಕಲ್ ಪಾಂಯ್ಟ್” ಸಂಸ್ಥೆ ಗ್ರಾಹಕರ ಅಭಿರುಚಿಗೆ ತಕ್ಕಂತೆ ಉತ್ಪನ್ನಗಳನ್ನು ಒದಗಿಸಿಕೊಡುವ ಕಾರಣದಿಂದಾಗಿ ಇಂದು ಅಗಾಧವಾಗಿ ಬೆಳೆದಿದೆ. ಸುಮಾರು 15,000 ಚ.ಅ. ವಿಸ್ತೀರ್ಣದ ಮಂಗಳೂರು ಶೋರೂಮ್ ಮತ್ತು 4000 ಚ. ಅ. ಸ್ಥಳಾವಕಾಶದ ಉಡುಪಿ ಶೋರೂಮ್ ಇವು ಎರಡೂ ಸಂಪೂರ್ಣ ಹವಾ ನಿಯಂತ್ರಿತವಾಗಿದ್ದು ವಾಹನ ನಿಲುಗಡೆಗೆ ಸ್ಥಳಾವಕಾಶ ಹೊಂದಿವೆ.

Electrical Point_photos Electrical Point_photos (2) Electrical Point_photos (3) Electrical Point_photos (14) Electrical Point_photos (13) Electrical Point_photos (12) Electrical Point_photos (11) Electrical Point_photos (10) Electrical Point_photos (9) Electrical Point_photos (8) Electrical Point_photos (7) Electrical Point_photos (6) Electrical Point_photos (5) Electrical Point_photos (4) Electrical Point_photos (1) Electrical Point_photos (15)

“ಎಲೆಕ್ಟ್ರಿಕಲ್ ಪಾಂಯ್ಟ್”ನಲ್ಲಿ ಆ್ಯಂಕರ್, ಬಜಾಜ್, ಕ್ರಾಂಫ್ಟನ್, ಹವೆಲ್ಸ್, ಸ್ಟ್ಯಾಂಡರ್ಡ್ ಕಂಪೆನಿಗಳಲ್ಲದೆ ಜೋನ್‍ಸನ್, ಪ್ಯಾನಸೋನಿಕ್, ಉಷಾ, ಓಸ್‍ರಾಮ್, ವಿಪ್ರೊ ಮತ್ತಿತರ ಹೆಸರಾಂತ ಕಂಪೆನಿಗಳ ಫ್ಯಾನ್, ಎಲ್‍ಇಡಿ, ಟ್ಯೂಬ್ ಫಿಟ್ಟಿಂಗ್ಸ್, ಸಿಎಫ್‍ಎಲ್, ಎಕ್ಸಾಸ್ಟ್ ಫ್ಯಾನ್ಸ್ ಮತ್ತು ಅಲಂಕಾರಿಕ ದೀಪಗಳು, ಚಾಂಡಿಲಿಯರ್ಸ್, ವಾಲ್, ಸೀಲಿಂಗ್, ಮಿರರ್ ಮತ್ತಿತರ ಅಲಂಕಾರ ದೀಪಗಳ ಬೃಹತ್ ಸಂಗ್ರಹವಿದೆ. ವಿದೇಶಿ ಉತ್ಪನ್ನಗಳೂ ಇಲ್ಲಿ ಲಭ್ಯ. ಸ್ವಿಚ್ಚ್‍ಗಳು, ವಾಟರ್ ಹೀಟರ್ ಮತ್ತಿತರ ಎಲೆಕ್ಟ್ರಿಕಲ್ ಸಾಮಗ್ರಿಗಳೂ ಇಲ್ಲಿ ದೊರೆಯುತ್ತವೆ.

ಆದಿತ್ಯವಾರ ಹೊರತುಪಡಿಸಿ ಇತರ ದಿನಗಳಲ್ಲಿ (ರಜಾ ದಿನಗಳಲ್ಲಿಯೂ) “ಎಲೆಕ್ಟ್ರಿಕಲ್ ಪಾಂಯ್ಟ್” ಶೋರೂಮ್‍ಗಳು ಬೆಳಿಗ್ಗೆ 9ರಿಂದ ರಾತ್ರಿ 8ರವರೆಗೆ ತೆರೆದಿರುತ್ತವೆ. ಕ್ರೆಡಿಟ್ ಕಾರ್ಡು ಪಾವತಿಯನ್ನು ಸಂಸ್ಥೆ ಸ್ವೀಕರಿಸುತ್ತದೆ.

ಅತ್ಯಂತ ಕಡಿಮೆ ದರಗಳಲ್ಲಿ ಸೀಲಿಂಗ್ ಫ್ಯಾನ್, ಎಲ್‍ಇಡಿ ಬಲ್ಬುಗಳು, ಎಲ್‍ಇಡಿ ಟ್ಯೂಬ್ ಮತ್ತು ಪ್ಯಾನೆಲ್ ಲೈಟ್‍ಗಳನ್ನು ಕೊಂಡುಕೊಳ್ಳಲು ಇಲೆಕ್ಟ್ರಿಕಲ್ ಪಾಂಯ್ಟ್‍ನ ‘ಫ್ಯಾನ್ ಮತ್ತು ಎಲ್‍ಇಡಿ ಮೇಳ’ ಒಂದು ಸುವರ್ಣಾವಕಾಶ.

Leave a comment

Your email address will not be published. Required fields are marked *