ಬೆಡ್‍ರೂಮಿನಲ್ಲಿ ಭಾರತೀಯರು ತುಂಬಾ ಫಾರ್ವರ್ಡ್ ಅಂತೆ!
ಲೈಂಗಿಕ ವಿಚಾರಗಳನ್ನು ಮುಕ್ತವಾಗಿ ಚರ್ಚಿಸುವುದಕ್ಕೇ ಹಿಂಜರಿಯುವ ಜನರು ಭಾರತೀಯರು. ಸೆಕ್ಸ್ ಬಗ್ಗೆಯಾಗಲೀ, ಲೈಂಗಿಕ ಸಂಗತಿಗಳ ಬಗ್ಗೆಯಾಗಲೀ ಯಾರಾದರೂ ಏನಾದರೂ ಹೇಳಿದರೆ ಅಶ್ಲೀಲ, ಅಸಹ್ಯವೆಂದು ಹೀಗಳೆಯುವವರೇ ಹೆಚ್ಚು. ಇದೆಲ್ಲಾ, ಅಂದರೆ ಈ ವಿರೋಧ, ಮುಜುಗರವೆಲ್ಲಾ ನಾಲ್ಕು ಜನರ ಮುಂದೆಯಷ್ಟೇ ಎಂಬುದೂ ಸತ್ಯ. ಇಲ್ಲದಿದ್ದರೆ ಭಾರತದಲ್ಲಿ ಇಷ್ಟೊಂದು ಜನಸಂಖ್ಯೆಯಾದರೂ ಹೇಗಾಗುತ್ತಿತ್ತು, ಅಲ್ಲವೆ?!
ಇಲ್ಲೊಂದು ಸಮೀಕ್ಷೆಯ ವರದಿಯಿದೆ. ಅದರ ಕೆಲ ವಿಚಾರಗಳು ಸಾಂಪ್ರದಾಯಿಕ ಭಾರತೀಯರ ನಂಬಿಕೆ, ಪ್ರತಿಪಾದನೆಗಳ ಮೂಲಕ್ಕೇ ಪೆಟ್ಟು ನೀಡುವಂತಿವೆ. ಹಾಗಂತ ಇದೇನೂ ಕೋಟ್ಯಾಂತರ ಭಾರತೀಯರ ಅನಿಸಿಕೆಯೇನೂ ಅಲ್ಲ. ಆದರೂ ಇಲ್ಲಿ ಕಂಡು ಬಂದಿರುವ ವಿಚಾರಗಳು ಬಹಳಷ್ಟು ಜನರ ಮನಸ್ಥಿತಿಯನ್ನು ಪ್ರತಿನಿಧಿಸಲಾರವೆಂದು ಹೇಳಲಾಗದು.
ಈ ಸಮೀಕ್ಷೆ ನಿನ್ನೆ ಮೊನ್ನೆಯದ್ದಲ್ಲ. ಕೆಲ ವರ್ಷಗಳ ಹಿಂದೆಯೇ ಇದು ಪ್ರಕಟವಾಗಿದೆ. ಇದರಲ್ಲಿನ ಅಂಶಗಳು ನಿಜಕ್ಕೂ ಕುತೂಹಲಕರವಾಗಿವೆ. ಆಧುನಿಕ ಕಾಲದಲ್ಲಿ ಮತ್ತು ಬದಲಾದ ಕ್ರಾಂತಿಕಾರಿ ಸಂಪರ್ಕ ಕ್ರಾಂತಿಯಿಂದಾಗಿ ಜನರಿಗೆ, ಒಂದು ಕಾಲದಲ್ಲಿ ಅತ್ಯಂತ ಖಾಸಗಿ ಮತ್ತು ಗುಪ್ತವಾಗಿದ್ದ ಸಂಗತಿಗಳು ಹೇಗೆ ಅತ್ಯಂತ ಸುಲಭವಾಗಿ ದಕ್ಕುತ್ತವೆ ಮತ್ತು ಸೆಕ್ಸ್‌ನಂತಹ ವಿಚಾರಗಳೂ ಎಷ್ಟೊಂದು ಮುಕ್ತವಾದ ಸಂಗತಿಗಳಾಗಿವೆಯೆಂಬುದನ್ನು ಕಾಣಬಹುದು.
ಕಾಂಡೋಮ್ ತಯಾರಿಕಾ ಕಂಪೆನಿಯೊಂದು ನಡೆಸಿದ ಜಾಗತಿಕ ಸರ್ವೆಯೊಂದರಲ್ಲಿ ಬೆಳಕು ಕಂಡಿರುವ ‘ಆಕರ್ಷಕ’ ಸಂಗತಿಗಳು ಸೆಕ್ಸಾಸಕ್ತರನ್ನು ಬೆಚ್ಚಗಾಗಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಭಾರತೀಯರು ಬೆಡ್‍ರೂಮಿನಲ್ಲಿ ಬಹಳಷ್ಟು ಕ್ರಿಯಾಶೀಲರಾಗಿದ್ದಾರೆಂದು ಈ ಸರ್ವೆಯಿಂದ ಬಹಿರಂಗವಾಗಿದೆ.
ಭಾರತದ ನಗರವಾಸಿಗಳು ತಾವು ಅದ್ಭುತವಾಗಿ ಸೆಕ್ಸ್‌ನಲ್ಲಿ ಭಾಗವಹಿಸುತ್ತಿದ್ದು, ತಮ್ಮ ಲೈಂಗಿಕ ಜೀವನದ ಬಗ್ಗೆ ತುಂಬಾ ತೃಪ್ತರಾಗಿದ್ದಾರೆಂದು ಸರ್ವೆಯಲ್ಲಿ ಭಾಗವಹಿಸಿದವರು ಹೇಳಿದ್ದಾರಂತೆ. ಪ್ರಪಂಚದ ಇತರರಿಗಿಂತ ಭಾರತೀಯರು ತಮ್ಮ ಸಂಗಾತಿಯ ಜೊತೆಗೆ ಸೆಕ್ಸ್ ಬಗ್ಗೆ ಹೆಚ್ಚು ಮುಕ್ತವಾಗಿ ಮಾತನಾಡಿಕೊಳ್ಳುತ್ತಾರಂತೆ.
ಸರ್ವೆಯಲ್ಲಿ ಭಾಗವಹಿಸಿದ ಮುಕ್ಕಾಲು ಪಾಲು ಭಾರತೀಯರು (74%), ಬೆಡ್‍ನಲ್ಲಿ ತಾವೇನು ಬಯಸುತ್ತೇವೆಂದು ತಮ್ಮ ಸಂಗಾತಿಗೆ ಹೇಳುತ್ತಾರೆಂದು ಒಪ್ಪಿಕೊಂಡಿದ್ದಾರೆ. ಈ ವಿಚಾರದಲ್ಲಿ ಜಾಗತಿಕ ಸರಾಸರಿ 58% ಇದ್ದರೆ, ಇಂಗ್ಲೆಂಡಿನಲ್ಲಿ ಅದು ಕೇವಲ 49% ಅಂತೆ.
68% ಭಾರತೀಯರು ತಾವು ಪ್ರಚೋದನಕಾರಿಯಾಗಿ ಸೆಕ್ಸ್ ಅನುಭವ ಪಡೆಯುತ್ತಿದ್ದೇವೆಂದು ಹೇಳಿದ್ದಾರಂತೆ. ಕೇವಲ 38% ಇಂಗ್ಲೆಂಡ್ ಜನರು ಮತ್ತು 36% ಫ್ರೆಂಚರು ಹೀಗೆ ಹೇಳಿದ್ದಾರಂತೆ. ಅಂದರೆ ಈ ವಿಚಾರದಲ್ಲಿ ಭಾರತೀಯರು ಅವರಿಗಿಂತ ದುಪ್ಪಟ್ಟು ಸೆಕ್ಸ್‌ನ ಆನಂದ ಅನುಭವಿಸುತ್ತಿದ್ದಾರೆ. ಮತ್ತೂ ಮುಂದುವರಿದು, ಸೆಕ್ಸ್‌ನಲ್ಲಿ ವೈವಿಧ್ಯತೆಯನ್ನು ಕಂಡುಕೊಳ್ಳುವಲ್ಲಿಯೂ ಭಾರತೀಯರೇ (63%) ಬಹಳ ಮುಕ್ತವಾಗಿದ್ದಾರಂತೆ. ಇಂಗ್ಲಿಶರು ಇದರಲ್ಲಿ ಹಿಂದಿದ್ದರೆ (47%), ಜಪಾನೀಯರು (7%) ಮಾತ್ರ ಬಹಳ ಹಿಂದಿದ್ದಾರಂತೆ.
ತಮ್ಮ ಸೆಕ್ಸ್ ಜೀವನ ಅತ್ಯುತ್ತಮವಾಗಿದೆಯೆಂದು ಹೇಳಿಕೊಂಡಿರುವವರಲ್ಲಿ ಗ್ರೀಕರು (76) ಮತ್ತು ಮೆಕ್ಸಿಕನ್ನರು (80%) ಭಾರತೀಯರಿಗಿಂತ ಮುಂಚೂಣಿಯಲ್ಲಿದ್ದಾರೆ.
ಪ್ರಪಂಚದ 26 ದೇಶಗಳಲ್ಲಿನ 26 ಸಾವಿರ ಜನರು ಆನ್‍ಲೈನ್‍ಲ್ಲಿ ನಡೆಸಲಾದ ಈ ಸರ್ವೆಯಲ್ಲಿ ಭಾಗವಹಿಸಿದ್ದರು ಎಂದು ಕಂಪೆನಿ ತಿಳಿಸಿದೆ.
ಭಾರತೀಯ ಜೋಡಿಗಳು ತಾವು ರತಿಕ್ರೀಡೆಯಲ್ಲಿ ಭಾಗವಹಿಸುವಾಗ ನೂತನ ರೀತಿಯ ಆಸನ, ವಿಭಿನ್ನ ರೀತಿಯ ಕ್ರಿಯೆಗಳ ಮೂಲಕ ಸೆಕ್ಸ್‌ನ ಸುಖವನ್ನು ಪಡೆಯುತ್ತೇವೆಂದು ಹೇಳಿದ್ದಾರಂತೆ.
ಬೆಡ್‍ರೂಮಿನಲ್ಲಿ ಭಾರತೀಯರು ವಿಭಿನ್ನ ಶೈಲಿ, ರೀತಿಗಳಲ್ಲಿ ವರ್ತಿಸುತ್ತಾರಂತೆ. ಅವುಗಳಲ್ಲಿ ಪ್ರಮುಖವಾದವುವೆಂದರೆ ಸೆನ್ಸುವಲ್ ಮಸಾಜ್ (55%), ಸೆಕ್ಸುವಲ್ ಫ್ಯಾಂಟಸಿ (58%), ಉದ್ರೇಕಕಾರಿ ವಸ್ತುಗಳನ್ನು ನೋಡುವುದು (55%). ಮೂರನೇ ಒಂದು ಭಾಗದಷ್ಟು ಜನರು ರೋಲ್ ಪ್ಲೇ (ಇತರ ವ್ಯಕ್ತಿಗಳಂತೆ ವರ್ತಿಸುವುದು) ಮಾಡಲು ಸಂತೋಷಿಸುತ್ತಾರಂತೆ. ಪ್ರಚೋದನಕಾರಿ ಒಳ ವಸ್ತ್ರಗಳನ್ನು ಧರಿಸಿ ಉದ್ರೇಕಪಡುವವರೂ ಅಷ್ಟೇ ಸಂಖ್ಯೆಯಲ್ಲಿದ್ದಾರಂತೆ.
ಮಾರುಕಟ್ಟೆಯಲ್ಲಿ ದೊರೆಯುವ ಸೆಕ್ಸ್ ಆಟಿಕೆಗಳನ್ನು ಉಪಯೋಗಿಸಿ ತಮ್ಮ ಸೆಕ್ಸ್ ಜೀವನವನ್ನು ಮತ್ತಷ್ಟು ರೋಚಕಗೊಳಿಸಿಕೊಳ್ಳುವತ್ತ ಮನಸ್ಸು ಮಾಡುವ ಭಾರತೀಯರ ಸಂಖ್ಯೆಯೂ ಸಾಕಷ್ಟು ಹೆಚ್ಚಿದೆಯೆಂದು ಈ ಸರ್ವೆ ತಿಳಿಸುತ್ತದೆ.
57 ಶೇಕಡ ಭಾರತೀಯರು, ಅಂದರೆ ಹತ್ತರಲ್ಲಿ ಆರು ಜನರು, ಸೆಕ್ಸ್ ಆಟಿಕೆ, ಉಪಕರಣಗಳನ್ನು ಬಳಸುವುದು ಸರಿಯೆನ್ನುತ್ತಾರಂತೆ. ಸರ್ವೆಯಲ್ಲಿ ಭಾಗವಹಿಸಿದವರಲ್ಲಿ 9% ಭಾರತೀಯರು ತಾವು ವೈಬ್ರೇಟರ್ ಬಳಸುತ್ತಿದ್ದೇವೆಂದು ಹೇಳಿಕೊಂಡಿದ್ದಾರೆ. ಜಾಗತಿಕವಾಗಿ ಈ ಸಂಖ್ಯೆ 21%. 13% ಭಾರತೀಯರು ವೈಬ್ರೇಟರ್ ಬಳಸಲು ಆಸಕ್ತಿ ಹೊಂದಿದ್ದಾರಂತೆ.
ಅಷ್ಟೇ ಅಲ್ಲ. 33% ಭಾರತೀಯರು ಸುಖಕರ ಮತ್ತು ಹಿತಕರವಾದ ಮಿಲನ ಮಹೋತ್ಸವಕ್ಕಾಗಿ ಲ್ಯೂಬ್ರಿಕೆಂಟ್ ಬಳುತ್ತಾರಂತೆ. ಪ್ರಪಂಚದಲ್ಲಿ ಲ್ಯೂಬ್ರಿಕೆಂಟ್ ಬಳಸುವವರು 34%ದಷ್ಟು ಜನರಿದ್ದಾರಂತೆ.
ಪ್ರಯೋಗ ಮಾಡಲು ಮಾತ್ರ ಭಾರತೀಯರು ಹಿಂಜರಿಯುತ್ತಾರಂತೆ. 22% ಜನರು ಮಸಾಜ್ ತೈಲ ಬಳಸುತ್ತಿದ್ದು, ಕೇವಲ 9% ಜನರು ಸಂಭೋಗವನ್ನು ದೀರ್ಘವಾಗಿಸುವ ಔಷಧಗಳನ್ನು ಬಳಸುತ್ತಾರಂತೆ. ಕೃತಕ ಮದ್ದು, ತೈಲ, ಲೇಪನ ಮುಂತಾದವುಗಳನ್ನು ಬಳಸಿ ಸೆಕ್ಸ್‌ನ ಸುಖ ಪಡೆಯುವವರು ಕೇವಲ 7%ದಷ್ಟು ಜನರು ಮಾತ್ರವಂತೆ.
ಸಂಪರ್ಕ ಕ್ರಾಂತಿಯ ಪ್ರಯೋಜನ ಪಡೆದು ಮುಂದಿನ ದಶಕಗಳಲ್ಲಿ ಸೆಕ್ಸ್‌ನ ಪ್ರಯೋಗಗಳನ್ನು ಹೆಚ್ಚಿಸುವವರ ಸಂಖ್ಯೆ ವೃದ್ಧಿಯಾಗುತ್ತದೆಂದು 57% ಜನರು ನಂಬುತ್ತಾರೆಂದು ಸರ್ವೆ ಹೇಳುತ್ತದೆ.
ವಿಶ್ವಾಸಿತನದಲ್ಲಿ ಮಾತ್ರ ಭಾರತೀಯರು ಎಲ್ಲರಿಗಿಂತ ಮುಂದಿದ್ದಾರೆ. ಇತರರಿಗೆ ಹೋಲಿಸಿದಾಗ ಹೆಚ್ಚು ಸಂಗಾತಿಗಳೊಂದಿಗೆ ಸೆಕ್ಸ್ ಹೊಂದುವವರ ಸಂಖ್ಯೆಯಲ್ಲಿ ಭಾರತೀಯರು ಹಿಂದಿದ್ದಾರೆ. ಭಾರತೀಯ ಪುರುಷರು 6 ಹೆಂಗಸರೊಂದಿಗೆ, ಹೆಂಗಸರು ಇಬ್ಬರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರೆ, ಇಂಗ್ಲೆಂಡಿನಲ್ಲಿ ಪುರುಷರು 16 ಸ್ತ್ರೀಯರೊಂದಿಗೆ, ಸ್ತ್ರೀಯರು 10 ಗಂಡಸರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾರೆಂದು ಸರ್ವೆಯಲ್ಲಿ ಭಾಗವಹಿಸಿದವರು ಒಪ್ಪಿಕೊಂಡಿದ್ದಾರೆ. ಜಾಗತಿಕವಾಗಿ ಪುರುಷರು 13 ಸ್ತ್ರೀಯರೊಂದಿಗೆ, ಸ್ತ್ರೀಯರು 7 ಪುರುಷರೊಂದಿಗೆ ಸೆಕ್ಸ್ ಸಂಬಂಧ ಹೊಂದಿದ್ದಾರಂತೆ.
ನಿಮ್ಮ ಲೈಂಗಿಕ ಜೀವನ ಉತ್ತಮಗೊಳಿಸಲು ಯಾವುದು ಸಹಕರಿಸುತ್ತದೆ ಎಂದು ಕೇಳಿದಾಗ 47% ಭಾರತೀಯರು ರೊಮಾನ್ಸ್ ಎಂದುತ್ತರಿಸಿದರೆ, 46% ಜನರು ಮೋಜು, 44% ಜನರು ಸಂಗಾತಿಯೊಂದಿಗೆ ಹೆಚ್ಚು ಸಮಯವನ್ನು ಕಳೆಯುವುದು ಎಂದಿದ್ದಾರಂತೆ. 45% ಭಾರತೀಯರು ಸಂಗಾತಿಗೆ ಹೆಚ್ಚು ಸುಖ ಕೊಡುವುದಕ್ಕಾಗಿ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಲು ಇಚ್ಛಿಸುತ್ತಾರಂತೆ.
ಹೇಗಿದೆ ನೋಡಿ! ಅಂತೂ ಸೆಕ್ಸ್ ಬಗ್ಗೆ ಭಾರತೀಯರಿಗೆ, ಅದರಲ್ಲೂ ನಗರವಾಸಿಗಳಿಗೆ ಹೇಳಿಕೊಳ್ಳಲು ಮುಜುಗರವಿಲ್ಲ, ತಾವು ಏನು ಮಾಡುತ್ತೇವೆ, ಮಾಡಬೇಕಿದೆಯೆಂಬುದನ್ನು ತುಂಬಾ ಆಳವಾಗಿ, ಸಮಗ್ರವಾಗಿ ತಿಳಿದುಕೊಂಡಿದ್ದಾರೆ ಎಂಬುದು ಗಮನಾರ್ಹ ವಿಚಾರವಲ್ಲವೆ!?
(ಕೃಪೆ: ಇಂಟರ್‌ನೆಟ್)
ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ನಮಗೆ ಕಳುಹಿಸಿ: budkuloepaper@gmail.com