Latest News

ಫೆಬ್ರವರಿಯಲ್ಲಿ ನಡೆಯಲಿದೆ ಸಮಸ್ತ ಕೊಂಕಣಿಗರ ಉತ್ಸವ

Media Release

Posted on : September 17, 2016 at 1:04 PM

Dear Readers, we are running a free media with high democratic values. Without subscriptions, advertisements & having no patrons or god fathers, we depend on your support to run this pro people, impartial, unbiased and courageous media. Kindly support us by your generous help.
Our Google Pay Number - 8277362399

Our Bank Details:
Name: Donald Pereira
Bank: Canara Bank
A/C No: 0977101022194
Hampankatta Branch, Mangaluru 575 001
IFSC Code: CNRB0000612
MICR Code: 575015009

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಮುಂದಿನ ಫೆಬ್ರವರಿ 10ರಿಂದ 12ರ ವರೆಗೆ ಮೂರು ದಿನಗಳ ಕೊಂಕಣಿ ಲೋಕೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದ್ದು ಸಮಗ್ರ ಕೊಂಕಣಿಗರನ್ನು ಒಗ್ಗೂಡಿಸಲಿದೆ. ಮಂಗಳೂರಿನ ಪುರಭವನದಲ್ಲಿ ಈ ಉತ್ಸವ ಜರಗಲಿದೆ.

ಕಾರ್ಯಕ್ರಮದ ಧ್ಯೇಯೋದ್ದೇಶ:

ಕೊಂಕಣಿ ಭಾಷೆ, ಸಾಹಿತ್ಯ, ಕಲೆ, ಜಾನಪದಗಳ ಸೊಗಡನ್ನು ದೇಶದಲ್ಲೆಡೆ ಪಸರಿಸುವಂತೆ, ಕೊಂಕಣಿಯ ಸಮಸ್ತ ಬಾಂಧವರನ್ನು ಒಟ್ಟುಗೊಡಿಸಿ, 3 ದಿನಗಳ ರಾಷ್ಟ್ರ ಮಟ್ಟದ “ಕೊಂಕಣಿ ಲೋಕೋತ್ಸವ”ವನ್ನು ನಡೆಸುವುದು. ಮೂರು ಧರ್ಮದ ಸುಮಾರು 41 ಸಮುದಾಯವನ್ನು ಹೊಂದಿರುವ ಕೊಂಕಣಿ ಭಾಷಿಕರ ವಿಭಿನ್ನ ಕಲೆ, ಸಂಸ್ಕೃತಿ, ಜಾನಪದ, ಆಚಾರ ವಿಚಾರಗಳು, ಆಹಾರ ಪದ್ದತಿಗಳ ಪ್ರದರ್ಶನ ನಡೆಸುವುದು. ಕೊಂಕಣಿಗೆ ಶ್ರೀಮಂತ ಜನಪದ ಪರಂಪರೆಯಿದೆ. ನಾಟಕ, ವಿವಿಧ ಜನಪದ ಕಲೆಗಳು, ಯಕ್ಷಗಾನ, ಗೀತೆ ಗಾಯನ, ವಿವಿಧ ನೃತ್ಯ ಪ್ರಕಾರಗಳು, ಕೊಂಕಣಿ ಸಿನೆಮಾಗಳು, ಇವೆಲ್ಲವನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಲಾಗುವುದು. ಈ ಮೂರು ದಿನಗಳ ಸಂಭ್ರಮದ ಲೋಕೋತ್ಸವವನ್ನು 2017, ಫೆಬ್ರವರಿ 10, 11 ಮತ್ತು 12ರಂದು ಮಂಗಳೂರಿನ ಪುರಭವನದಲ್ಲಿ ಬೆಳಿಗ್ಗೆ 9.00ರಿಂದ ರಾತ್ರಿ 9.00ರ ತನಕ ನಡೆಸಲಾಗುವುದು.

budkulo_academy_konkani-lokotsav-1 budkulo_academy_konkani-lokotsav-2 budkulo_academy_konkani-lokotsav-5 budkulo_academy_konkani-lokotsav

ಈ ಮೂರೂ ದಿನ ಊರ ಪರವೂರಿನಿಂದ ಆಗಮಿಸಿದ ಜನರಿಗೆ ಉಟೋಪಚಾರ ವ್ಯವಸ್ಥೆ, ಕೊಂಕಣಿ ಜನ ಜೀವನ ವೈವಿಧ್ಯಮಯ ಸಂಸ್ಕೃತಿ ಬಿಂಬಿಸುವ ವಸ್ತು ಪ್ರದರ್ಶನ ಮಳಿಗೆಗಳು, ಮಾರಾಟ ಮಳಿಗೆಗಳು, ಸಾಂಪ್ರದಾಯಿಕ ಮತ್ತು ಆಧುನಿಕ ತಿಂಡಿ ತಿನಿಸುಗಳ ಆಹಾರ ಮಳಿಗೆಗಳು, ಉಡುಗೆ-ತೊಡುಗೆ ಮಳಿಗೆಗಳು, ಪುಸ್ತಕ ಮಾರಾಟ ಮಳಿಗೆಗಳು ಇರಲಿವೆ. ಇದಕ್ಕಾಗಿ ಪುರಭವನದ ಎರಡೂ ಕಡೆ ಅಗತ್ಯವಿರುವ ಬೃಹತ್ ಚಪ್ಪರ ಮತ್ತಿತರ ವ್ಯವಸ್ಥೆ ಮಾಡಲಾಗುವುದು.

ಮೂರು ದಿನಗಳ ಪ್ರಮುಖ ಕಾರ್ಯಕ್ರಮಗಳು :

•    2017 ಫೆಬ್ರವರಿ 10, ಶುಕ್ರವಾರ: ಪೂರ್ವಾಹ್ನ 10.00 ಗಂಟೆಗೆ ತ್ರಿ ದಿನದ ಲೋಕೋತ್ಸವದ ವೈಭವದ ಉದ್ಘಾಟನೆ

•    2017 ಫೆಬ್ರವರಿ 11, ಶನಿವಾರ: ಅಪರಾಹ್ನ 4.00 ಗಂಟೆಗೆ ಬಲ್ಮಠ ಮೈದಾನದಿಂದ ಪುರಭವನದವರೆಗೆ ಜನಪದ ಕಲಾತಂಡಗಳ ವೈಭವದ ಮೆರವಣಿಗೆ

•    2017 ಫೆಬ್ರವರಿ 12, ಭಾನುವಾರ: ಸಾಯಂಕಾಲ 5.00 ಗಂಟೆಗೆ ಅಕಾಡೆಮಿ ಗೌರವ ಪ್ರಶಸ್ತಿ, ಪುಸ್ತಕ ಬಹುಮಾನ, ಯುವ ಪುರಸ್ಕಾರ, ಸಾಧಕರಿಗೆ ಗೌರವಾರ್ಪಣೆ, ಪುಸ್ತಕ ಲೋಕಾರ್ಪಣೆ ಮತ್ತು ಸಮಾರೋಪ ಸಮಾರಂಭ.

•    ಈ ಮೂರು ದಿನಗಳಲ್ಲಿಯೂ ರಾಜ್ಯದ ವಿವಿಧ ಸ್ಥಳಗಳ, ವಿವಿಧ ಕೊಂಕಣಿ ಸಮುದಾಯಗಳ ಕಲಾತಂಡಗಳು ಆಗಮಿಸಿ, ಮೂರು ದಿನಗಳು ಇಲ್ಲಿ ವಾಸ್ತವ್ಯವಿದ್ದು, ಕೊಂಕಣಿ ಜನಪದ ಕಲೆಯ ವೈವಿಧ್ಯತೆಯ ಅಗಾಧತೆಯನ್ನು ಲೋಕಕ್ಕೆ ಪರಿಚಯಿಸುವರು. ಈ ಮೂಲಕ ಕೊಂಕಣಿಯ ಸಂಸ್ಕೃತಿಯ ವಿನಿಮಯ ಹಾಗೂ ಕೊಡು-ಕೊಳ್ಳುವಿಕೆಗೆ ವೇದಿಕೆ ಒದಗಿಸಲಾಗುವುದು.

budkulo_academy_konkani-lokotsav-4 budkulo_academy_konkani-lokotsav-3 budkulo_academy_konkani-lokotsav-7 budkulo_academy_konkani-lokotsav-6 budkulo_academy_konkani-lokotsav-9 budkulo_academy_konkani-lokotsav-8

ಇತರ ಕಾರ್ಯಕ್ರಮಗಳ ಕಿರು ನೋಟ:

ಮೊದಲ ದಿನ:

ಸ್ತ್ರೀಯರ ಮತ್ತು ಮಕ್ಕಳ ದಿನ: ಈ ದಿನ ಸ್ತ್ರೀಯರು ಮತ್ತು ಮಕ್ಕಳಿಂದ ದಿನವಿಡೀ ವೈವಿಧ್ಯಮಯ ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರಗೋಷ್ಟಿ ನಡೆಯಲಿವೆ. ಸಂಜೆ ಜನಪದ ಪ್ರದರ್ಶನಗಳು ನಡೆಯಲಿವೆ.

ಎರಡನೇ ದಿನ:

ಯುವಜನರ ದಿನ: ದಿನವಿಡೀ ಕೊಂಕಣಿ ಯುವಜನರಿಗಾಗಿಯೇ, ವಿಶೇಷವಾಗಿ ಕಾಲೇಜು ಹಾಗೂ ಶಾಲೆಗಳಲ್ಲಿ ಕೊಂಕಣಿ ಕಲಿಯುವ ಹಾಗೂ ಕೊಂಕಣಿ ಕ್ಲಬ್‍ಗಳ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ, ಸಂಜೆ ವೈಭವದ ಜನಪದ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಮೂರನೇ ದಿನ:

ಈ ದಿನ ಸಮಸ್ತ ಕೊಂಕಣಿ ಬಾಂಧವರ ದಿನ. ಈ ಕಾರ್ಯಕ್ರಮದಲ್ಲಿ ದಿನವಿಡೀ ವಿವಿಧ ಗೋಷ್ಟಿ, ಸಮ್ಮೇಳನ ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ನಡೆಯಲಿವೆ. ಸಂಜೆ ಅಕಾಡೆಮಿಯ ಪ್ರಶಸ್ತಿ ಮತ್ತು ಪುಸ್ತಕ ಪುರಸ್ಕಾರ ಸಮಾರಂಭ ಹಾಗೂ ರಸಮಂಜರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಲೋಕೋತ್ಸವದ ಯಶಸ್ಸಿಗಾಗಿ ಸಮಿತಿಗಳು:

ಲೋಕೋತ್ಸವದ ಕಾರ್ಯಚಟುವಟಿಕೆಗಳನ್ನು ಸಾಂಗವಾಗಿ ನೆರವೇರಿಸಲು, ಸೂಕ್ತ ಸಲಹೆ ಸೂಚನೆಗಳನ್ನು ಪಡೆಯಲು ಕೆಲ ಸಮಿತಿಗಳನ್ನು ರಚಿಸಲಾಗಿದೆ. ಈ ಎಲ್ಲಾ ಸಮಿತಿಗಳಿಗೆ ಅಧ್ಯಕ್ಷರಾಗಿ ಅಕಾಡೆಮಿ ಅಧ್ಯಕ್ಷರಾದ ರೊಯ್ ಕ್ಯಾಸ್ತೆಲಿನೊ, ಕಾರ್ಯದರ್ಶಿಗಳಾಗಿ ರಿಜಿಸ್ಟ್ರಾರ್ ಡಾ. ಬಿ. ದೇವದಾಸ ಪೈ ಹಾಗೂ ಅಕಾಡೆಮಿ ಸದಸ್ಯರಾದ – ಜಯರಾಮ್ ಸಿದ್ದಿ, ಯಾಕೂಬ್ ಅಹ್ಮದ್ ಜಿ, ಲಾರೆನ್ಸ್ ಡಿಸೊಜಾ ಇವರು ಸದಸ್ಯರಾಗಿರುತ್ತಾರೆ.

ಈ ಕೆಳಗಿನ ಪ್ರತಿಯೊಂದು ಉಪ ಸಮಿತಿಯಲ್ಲಿ ಓರ್ವ ಸದಸ್ಯ ಸಂಚಾಲಕರು, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ 9 ಮಂದಿ ಸದಸ್ಯರು ಇರುತ್ತಾರೆ. ಈ ಎಲ್ಲಾ ಸಮಿತಿಗಳ ಸುಮಾರು 150 ಜನರು ಸೇರಿ ಕೊಂಕಣಿ ಲೋಕೋತ್ಸವ ಸಂಘಟನಾ ಸಮಿತಿಯಾಗುತ್ತದೆ. ಈ ಸಮಿತಿಗಳ ನೆರವಿನಿಂದ, ಕಾರ್ಯಕ್ರಮದ ಎಲ್ಲಾ ಚಟುವಟಿಕೆಗಳು ಯಶಸ್ವಿಯಾಗಿ ನಡೆಯಲು ಸಹಾಯವಾಗುವಂತೆ ಅಯಾಯ ಸಮಿತಿಗಳಿಗೆ ಜವಾಬ್ದಾರಿಗಳನ್ನು ಹಂಚಿ ನೀಡಲಾಗಿದೆ.

1.    ಸ್ವಾಗತ ಸಮಿತಿ (Reception Committee):
ದೇಶ ವಿದೇಶದ ಅತ್ಯಂತ ಪ್ರಖ್ಯಾತ ಹಾಗೂ ಗಣ್ಯಾತಿಗಣ್ಯ ಕೊಂಕಣಿ ವiಹನೀಯರು, ಕೊಂಕಣಿ ಮಾತೃಭಾಷಿಕ ರಾಜಕಾರಣಿಗಳು ಈ ಸಮಿತಿಯಲ್ಲಿ ಇರಲಿದ್ದಾರೆ.
ಗೌರವಾಧ್ಯಕ್ಷರು: ಬಸ್ತಿ ವಾಮನ್ ಶೆಣೈ

2.    ಉದ್ಘಾಟನಾ ಮತ್ತು ಸಮಾರೋಪ ಕಾರ್ಯಕ್ರಮಗಳ ಸಮಿತಿ:
ಸದಸ್ಯ ಸಂಚಾಲಕರು : ಶ್ರೀಮತಿ ಮಮತಾ ಕಾಮತ್
ಅಧ್ಯಕ್ಷರು: ವೆಂಕಟೇಶ್ ಬಾಳಿಗ, ಉಪಾಧ್ಯಕ್ಷರು : ಶ್ರೀಮತಿ ಐರಿನ್ ರೆಬೆಲ್ಲೊ

3.    ಸಾಂಸ್ಕೃತಿಕ ಸಮಿತಿ:
ಸದಸ್ಯ ಸಂಚಾಲಕರು: ಕೆ. ದೇವದಾಸ ಪೈ
ಅಧ್ಯಕ್ಷರು: ಎರಿಕ್ ಒಝೇರಿಯೊ, ಉಪಾಧ್ಯಕ್ಷರು: ಗೋಪಾಲ ಗೌಡ

4.    ಸಾಹಿತಿಕ ಮತ್ತು ಅಧಿವೇಶನ ಸಮಿತಿ:
ಸದಸ್ಯ ಸಂಚಾಲಕರು    :  ಡಾ. ಅರವಿಂದ ಶಾನಭಾಗ
ಅಧ್ಯಕ್ಷರು: ಅರುಣ್ ರಾಜ್ ರೊಡ್ರಿಗಸ್, ಉಪಾಧ್ಯಕ್ಷರು: ಡಾ. ಜಯವಂತ ನಾಯಕ್

5    ವಸ್ತು ಪ್ರದರ್ಶನ ಸಮಿತಿ:
ಸದಸ್ಯ ಸಂಚಾಲಕರು: ಶ್ರೀ ಶೇಖರ ಗೌಡ
ಅಧ್ಯಕ್ಷರು: ಸಂತೋಷ್ ಶೆಣೈ, ಉಪಾಧ್ಯಕ್ಷರು: ಜೇಮ್ಸ್ ಡಿಸೋಜ

6.    ಊಟೋಪಚಾರ ಸಮಿತಿ:
ಸದಸ್ಯ ಸಂಚಾಲಕರು: ಕಮಲಾಕ್ಷ ಶೇಟ್
ಅಧ್ಯಕ್ಷರು: ಶ್ರೀಮತಿ ಗೀತಾ ಕಿಣಿ, ಉಪಾಧ್ಯಕ್ಷರು: ನವೀನ್ ಲೋಬೊ

7.    ಮೆರವಣಿಗೆ/ಯುವಜನ ಸಮಿತಿ:
ಸದಸ್ಯ ಸಂಚಾಲಕರು: ಅಶೋಕ್ ಕಾಸರಕೋಡು
ಅಧ್ಯಕ್ಷರು: ಜ್ಯಾಕ್ಸನ್ ಡಿಸೊಜ, ಉಪಾಧ್ಯಕ್ಷರು: ರತ್ನಾಕರ ಕುಡ್ವ

8.    ಪ್ರಚಾರ/ಜನಸಂಪರ್ಕ ಸಮಿತಿ:
ಸದಸ್ಯ ಸಂಚಾಲಕರು: ಡಾ. ಚೇತನ ನಾಯ್ಕ್
ಅಧ್ಯಕ್ಷರು: ಎಲಿಯಾಸ್ ಫೆರ್ನಾಂಡಿಸ್, ಉಪಾಧ್ಯಕ್ಷರು: ಶ್ರೀಮತಿ ಸ್ಮಿತಾ ಶೆಣೈ

9.     ಪ್ರಯಾಣ/ವಸತಿ ಸಮಿತಿ:
ಸದಸ್ಯ ಸಂಚಾಲಕರು: ಲುಲ್ಲುಸ್ ಕುಟಿನ್ಹೊ
ಅಧ್ಯಕ್ಷರು: ಸ್ಟ್ಯಾನಿ ಆಲ್ವಾರಿಸ್, ಉಪಾಧ್ಯಕ್ಷರು: ನಿರಂಜನ ರಾವ್

10.     ಕಛೇರಿ/ದಾಖಲಾತಿ ಸಮಿತಿ:
ಸದಸ್ಯ ಸಂಚಾಲಕರು: ಡಾ. ವಾರೀಜ ನಿರ್ಬೈಲ್
ಅಧ್ಯಕ್ಷರು: ವಿಕ್ಟರ್ ಮತಾಯಸ್, ಉಪಾಧ್ಯಕ್ಷರು: ಡಾ. ವಿಜಯಲಕ್ಷ್ಮಿ ನಾಯ್ಕ್

11.     ಆಯೋಜನಾ ಸಮಿತಿ:
ಸದಸ್ಯ ಸಂಚಾಲಕರು: ಶಿವಾನಂದ ಶೇಟ್
ಅಧ್ಯಕ್ಷರು: ಲುವಿಸ್ ಜೆ. ಪಿಂಟೊ, ಉಪಾಧ್ಯಕ್ಷರು: ಶ್ರೀಮತಿ ವಿದ್ಯಾ ಕಾಮತ್

12.     ಅರ್ಥಿಕ ಸಮಿತಿ
ಅಧ್ಯಕ್ಷರು: ಎಮ್. ಎ. ರೆಹೆಮಾನ್, ಉಪಾಧ್ಯಕ್ಷರು : ಡಾ. ಬಿ.ದೇವದಾಸ ಪೈ

Like our Facebook Page: www.facebook.com/budkulo.epaper

Leave a comment

Your email address will not be published. Required fields are marked *

Latest News