ದ.ಕ. ಜಿಲ್ಲಾ ಮಕ್ಕಳ ಮೆಚ್ಚಿನ ಡಿ.ಸಿ.ಯಾಗಿದ್ದ ಸಂಸದ ಸಸಿಕಾಂತ್ ಸೆಂಥಿಲ್ ಸೆ. 3ರಂದು ಮಂಗಳೂರಿಗೆ
ಮಂಗಳೂರು: ಸತತ ಮಳೆಯಿಂದಾಗ ಹಲವು ದಿನಗಳ ಕಾಲ ಶಾಲೆಗಳೆಗೆ ರಜೆ ನೀಡಿ ಮಕ್ಕಳಿಗೆ ಪ್ರಿಯರೂ ಅಪಾರ ಜನಪ್ರಿಯರೂ ಆಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೆಪ್ಟೆಂಬರ್ 3ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ತಮಿಳುನಾಡಿನ ತಿರುವಳ್ಳೂರು ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾಗಿರುವ, ಮಾಜಿ ಐಎಎಸ್ ಅಧಿಕಾರಿ ಸೆಂಥಿಲ್ ಸಂತ ಮದರ್ ತೆರೆಸಾ ವಿಚಾರ ವೇದಿಕೆ ಹಮ್ಮಿಕೊಂಡಿರುವ ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ.
ಮಂಗಳೂರಿನ ಸಂತ ಮದರ್ ತೆರೆಸಾ ವಿಚಾರ ವೇದಿಕೆ, ಟೌನ್‍ಹಾಲ್‍ನಲ್ಲಿ ಮದರ್ ತೆರೆಸಾರ 27ನೇ ಸಂಸ್ಮರಣಾ ದಿನದ ಪ್ರಯುಕ್ತ ‘ಸಂವಿಧಾನದ ಆಶಯಗಳಲ್ಲಿ ಪ್ರೀತಿ ಸಹಬಾಳ್ವೆಯ ಪಯಣ’ ವಿಚಾರ ಸಂಕಿರಣ ಏರ್ಪಡಿಸಿದ್ದು, ಉದ್ಘಾಟಕರಾಗಿ ಸಸಿಕಾಂತ್ ಸೆಂಥಿಲ್ ಭಾಗವಹಿಸುವರು. ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ವಿಷಯ ಮಂಡನೆ ಮಾಡಲಿದ್ದಾರೆ. ಸಾಹಿತಿ ಯು.ಟಿ. ಆಯಿಶಾ ಫರ್ಜಾನಾ ಪ್ರತಿಕ್ರಿಯೆ ನೀಡಲಿದ್ದಾರೆ. ರಾಯ್ ಕಾಸ್ತೆಲಿನೊ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮ ಸಪ್ಟೆಂಬರ್ 3ರ ಮಂಗಳವಾರದಂದು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಲಿದೆ. ಬೆಳಿಗ್ಗೆ 8.15ರಿಂದ ಕಾಲೇಜು ವಿದ್ಯಾರ್ಥಿಗಳಿಂದ ಪ್ರೀತಿಯ ಸಿಂಚನ ಸೌಹಾರ್ದ ಗಾಯನ ಸ್ಪರ್ಧೆ ನೆರವೇರಲಿದೆ. ಕಾರ್ಯಕ್ರಮವನ್ನು ಸಂತ ಮದರ್ ತೆರೆಸಾ ವಿಚಾರ ವೇದಿಕೆ ಹಾಗೂ ಸಾಮರಸ್ಯ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ.
Send your Feedback to: budkuloepaper@gmail.com