ಸತ್ಯಕ್ಕೆ ಜಯ: ‘ದಿರ್ವೆಂ’ ಪತ್ರಿಕೆಯನ್ನು ಕೊಲ್ಲುವ ಷಡ್ಯಂತ್ರಕ್ಕೆ ಸೋಲು
ಅದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿತ್ತು.
ನಂಬಲನರ್ಹ, ಆಘಾತಕರ ಮತ್ತು ಅಸಹ್ಯಕಾರಕವಾದರೂ ಇದು ಸತ್ಯ ಮತ್ತು ವಾಸ್ತವ. ಪ್ರಜಾಪ್ರಭುತ್ವವನ್ನು ಉಸಿರಾಗಿಸಿಕೊಂಡ ದೇಶದಲ್ಲಿ, ಪತ್ರಿಕಾ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಹತ್ತರ ಸ್ಥಾನ, ಗೌರವ, ಹಕ್ಕುಗಳನ್ನು ಕೊಡ ಮಾಡಲ್ಪಟ್ಟ ನಾಡಿನಲ್ಲಿ ಇಂಥಾ ಘಟನೆಗಳು, ಬೆಳವಣಿಗೆಗಳು ನಡೆದಿವೆ ಎಂಬುದೇ ನಾಚಿಕೆಗೇಡಿನ ಸಂಗತಿ. ಆದರೆ ಆಗಬಾರದ್ದು ನಡೆದೇ ಹೋಯಿತು.
ವಿಘ್ನ ಸಂತೋಷಿಗಳಿಂದ ಜನಪ್ರಿಯ ಪತ್ರಿಕೆಯೊಂದನ್ನು ಕೊಲ್ಲುವ ವ್ಯವಸ್ಥಿತ ಯೋಜನೆಯೊಂದು ಕಾರ್ಯಗತವಾಗಿತ್ತು! ಮತ್ತದು ಸ್ವಲ್ಪ ಮಟ್ಟಿಗೆ ಯಶಸ್ವಿಯೂ ಆಗಿತ್ತು.
ಇದು ನಡೆದದ್ದು ಮಂಗಳೂರಿನಲ್ಲಿ. ಕನ್ನಡದ ಮೊತ್ತಮೊದಲ ಪತ್ರಿಕೆ (ಮಂಗಳೂರ ಸಮಾಚಾರ) ಆರಂಭವಾದ ನಗರದಲ್ಲಿ ಕೊಂಕಣಿ ಪತ್ರಿಕೆಯೊಂದನ್ನು ಮಟ್ಟ ಹಾಕಲು ಅಕ್ರಮವಾಗಿ ನಡೆಸಿದ ಷಡ್ಯಂತ್ರದ ಕಥೆಯಿದು, ವ್ಯಥೆಯೂ ಹೌದು.
ಹೌದು. ನಿಮಗೆ ಇದರ ಬಗ್ಗೆ ಈಗಾಗಲೇ ತಿಳಿದಿರಬಹುದು. ಬಹಿರಂಗವಾಗಿ, ಪತ್ರಿಕಾಗೋಷ್ಠಿಯಲ್ಲಿ, ಅದೂ ಮಂಗಳೂರಿನ ಪ್ರೆಸ್‍ಕ್ಲಬ್ಬಿನಲ್ಲೇ ಇದರ ಸಂಭ್ರಮಾಚರಣೆಯನ್ನು ನಡೆಸಲಾಗಿತ್ತು. ಅದು ಪತ್ರಿಕೆ, ಮಾಧ್ಯಮಗಳಲ್ಲಿಯೂ ಪ್ರಸಾರವಾಗಿತ್ತು.
ಈ ಮಾರಕ ದುಷ್ಕøತ್ಯಕ್ಕೆ ಬಲಿಯಾದ ಪತ್ರಿಕೆ ಬೇರ್ಯಾವುದೂ ಅಲ್ಲ, ಕಳೆದ ಹನ್ನೊಂದು ವರ್ಷಗಳಿಂದ ಪ್ರಸಾರದಲ್ಲಿರುವ ‘ದಿರ್ವೆಂ’ ಮಾಸ ಪತ್ರಿಕೆ. ಕೇವಲ ಕರಾವಳಿ ಜಿಲ್ಲೆಗಳಲ್ಲಷ್ಟೇ ಅಲ್ಲದೆ ಮಲೆನಾಡು, ಬಯಲುಸೀಮೆಯ ಹಲವು ಜಿಲ್ಲೆಗಳಲ್ಲಿ ಮತ್ತು ರಾಜಧಾನಿ ಬೆಂಗಳೂರಿನಲ್ಲಿ ಅತ್ಯಧಿಕ ಪ್ರಸಾರದಲ್ಲಿರುವ ಕೊಂಕಣಿ ಪತ್ರಿಕೆ ಇದು. ವಾರಪತ್ರಿಕೆಯಾಗಿ ಆರಂಭವಾಗಿದ್ದ ‘ದಿರ್ವೆಂ’ ಕಳೆದ ಆರು ವರ್ಷಗಳಿಂದ ಮಾಸ ಪತ್ರಿಕೆಯಾಗಿ, 11 ವರ್ಷಗಳಿಂದ ನಿರಂತರವಾಗಿ, ನಿಯಮಿತವಾಗಿ ಪ್ರಸಾರದಲ್ಲಿದೆ, ಜನಪ್ರಿಯವಾಗಿದೆ.
ಇಂತಹ ಪತ್ರಿಕೆ ಇದೇ ಸಪ್ಟೆಂಬರ್ ಮತ್ತು ಅಕ್ಟೋಬರ್‍ನಲ್ಲಿ ಪ್ರಕಟವಾಗಿರಲಿಲ್ಲ.
ವಿಷಯವೇನಪ್ಪಾ ಅಂದ್ರೆ, ಕೆಲ ವ್ಯಕ್ತಿಗಳು ‘ದಿರ್ವೆಂ’ ಪತ್ರಿಕೆ ಮತ್ತು ಅದರ ಸಂಪಾದಕರ ವಿರುದ್ಧ ದ.ಕ. ಜಿಲ್ಲಾಧಿಕಾರಿ (ಡಿಸ್ಟ್ರಿಕ್ಟ್ ಕಮಿಶನರ್) ಮತ್ತು ಸಹಾಯಕ ಕಮಿಶನರ್ ಅವರಿಗೆ ಸಲ್ಲಿಸಿದ ದೂರುಗಳು ಮತ್ತು ಆ ದೂರನ್ನು ಪರಿಗಣಿಸಿ ಅಂದಿನ ಸಹಾಯಕ ಕಮಿಶನರ್ (ಸಬ್ ಡಿವಿಶನಲ್ ಮ್ಯಾಜಿಸ್ಟ್ರೇಟ್) ಡಾ. ಡಿ.ಆರ್. ಅಶೋಕ್ ಅವರು ಹೊರಡಿಸಿದ ಆದೇಶದ ಪರಿಣಾಮವಾಗಿ ‘ದಿರ್ವೆಂ’ ಪತ್ರಿಕೆ ಸ್ಥಗಿತಗೊಂಡಿತ್ತು.
ಆದರೆ ಸತ್ಯ, ನ್ಯಾಯಕ್ಕೆ ತಾತ್ಕಾಲಿಕ ಹಿನ್ನಡೆಯಾಗಬಹುದೇ ಹೊರತು ಅಂತಿಮವಾಗಿ ಗೆಲುವೇ ದೊರಕುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಅದೇ ಇಲ್ಲಿ ನಡೆದಿದೆ. ಸತ್ಯಕ್ಕೆ ಜಯವಾಗಿದೆ.
ಸಹಾಯಕ ಕಮಿಶನರ್ ಅವರು ಹೊರಡಿಸಿದ ಈ ಆದೇಶವನ್ನು ದೆಹಲಿಯ ಪ್ರೆಸ್ & ರೆಜಿಸ್ಟ್ರೇಶನ್ ಎಪಿಲೆಟ್ ಬೋರ್ಡ್ ರದ್ದುಪಡಿಸಿ ‘ದಿರ್ವೆಂ’ ಪತ್ರಿಕೆಯನ್ನು ಪ್ರಕಟಿಸಲು ಅನುಮತಿ ನೀಡಿದೆ. ಸಹಾಯಕ ಕಮಿಶನರ್ ಅವರು ತಮ್ಮ ಅಧಿಕಾರ ಮೀರಿ ಈ ಆದೇಶವನ್ನು ಹೊರಡಿಸಿದ್ದಾರೆನ್ನುವುದು ಬೆಳಕಿನಷ್ಟೇ ಸ್ಪಷ್ಟ.
ತತ್ಪರಿಣಾಮವಾಗಿ ನವೆಂಬರ್ 2016ರ ‘ದಿರ್ವೆಂ’ ಪತ್ರಿಕೆ ಪ್ರಕಟಗೊಂಡಿದ್ದು ಈ ಬಗೆಗಿನ ಮಾಹಿತಿಯನ್ನು ಅದರಲ್ಲಿ ಕೊಡಲಾಗಿದೆ.
ಹಾಗಾದರೆ ಪತ್ರಿಕೆಯ ವಿರುದ್ಧ ದೂರು ನೀಡಿದವರು ಯಾರು ಮತ್ತು ಯಾಕೆ ಎಂಬ ಪ್ರಶ್ನೆ ಮೂಡುವುದು ಸಹಜ. ಹೌದು. ಕೆಲ ಹೊಟ್ಟೆಕಿಚ್ಚಿನ, ಕುತ್ಸಿತ ಮನೋಭಾವದ ದುರುಳರು ಹೇಗಾದರೂ ಮಾಡಿ ‘ದಿರ್ವೆಂ’ ಪತ್ರಿಕೆಯನ್ನು ಕತ್ತು ಹಿಸುಕಿ ಸಾಯಿಸಬೇಕೆಂದು ಹೂಡಿದ ಷಡ್ಯಂತ್ರವಿದಾಗಿತ್ತು. ಅವರ ನೀಚತನ ಯಾವ ಸ್ತರದಲ್ಲಿದೆಯೆಂಬುದಕ್ಕೆ ಅವರ ಈ ಕೈಂಕರ್ಯ ‘ಅಫಿಡವಿಟ್’ನಂತಿದೆ.
ವಿಷಯಕ್ಕೆ ಬರುವುದಾದರೆ, ‘ದಿರ್ವೆಂ’ ಪತ್ರಿಕೆಯನ್ನು ಮುಗಿಸಬೇಕೆಂದು ‘ಅಶ್ವಮೇಧ ಯಾಗ’ವನ್ನು ಕೈಗೊಂಡವರ್ಯಾರೆಂದರೆ ಹೆನ್ರಿ ಮೆಂಡೋನ್ಸಾ, ವಿಲ್ಸನ್ ಸಿಕ್ವೇರಾ, ಮೆಲ್ವಿನ್ ರೊಡ್ರಿಗಸ್ ಹಾಗೂ ರೊನಾಲ್ಡ್ ಸಿಕ್ವೇರಾ ಮತ್ತು ಫ್ಲೋರಿನ್ ರೋಚ್ ಎಂಬವರು.
ಹಾಂ! ಈ ಹೆಸರುಗಳನ್ನು ಎಲ್ಲೋ ಕೇಳಿರಬೇಕಲ್ಲಾ ಎಂದು ನೀವು ತಲೆ ಕೆರೆದುಕೊಳ್ಳಬಹುದು.
ಹೌದು. ಇವರು ಕೊಂಕಣಿ ಕವಿಗಳು, ಬರಹಗಾರರು!
ಅರೆ! ಬರಹಗಾರರಾದವರು ಪತ್ರಿಕೆಯಲ್ಲಿ ಬರೆಯಲು ಹಾತೊರೆಯುವುದು ಸಹಜ, ಅದು ಬಿಟ್ಟು ಪತ್ರಿಕೆಯನ್ನೇ ಮುಗಿಸಲು ಹವಣಿಸುವುದೆಂದರೇನು ಎಂದು ನೀವು ಆಶ್ಚರ್ಯಪಟ್ಟುಕೊಳ್ಳಬಹುದು. ಆಘಾತಕ್ಕೆ ಒಳಗಾಗಲೂಬಹುದು.
ಆದರೆ ಇದು ಕೊಂಕಣಿ ಮಾರಾಯರೆ! ಇಲ್ಲಿ ಏನು ಬೇಕಾದರೂ ನಡೆಯಬಲ್ಲದು ಎಂಬುದಕ್ಕೆ ಇದು ಸುಸ್ಪಷ್ಟ ಉದಾಹರಣೆ.
ಇಲ್ಲಿ ಲುಚ್ಛಾಗಳು, ಲಂಪಟರು ಯಾರ್ಯಾರನ್ನೋ ನಿಂದಿಸಿ ಪುಟಗಟ್ಟಲೆ ಬರೆದರೆ ಅವರನ್ನು ಅಪ್ರತಿಮ ಸಾಹಿತಿ/ಕವಿ ಎನ್ನುವವರೂ ಇದ್ದಾರೆಂದರೆ ಕೊಂಕಣಿಯ ಸಮಗ್ರ ದರ್ಶನವಾಗುತ್ತದೆ! ಗಣ್ಯ ವ್ಯಕ್ತಿಗಳನ್ನು, ಸಾಧಕರನ್ನು ಪ್ರತಿದಿನವೆಂಬಂತೆ ಅವಮಾನಿಸಿ, ಚಾರಿತ್ರ್ಯಹರಣ ಮಾಡುತ್ತಾ ಆಲಾಪಿಸುವವರನ್ನು ವಿಮರ್ಶಕ, ಬುದ್ಧಿವಂತನೆನ್ನುವವರ ವರ್ಗವೂ ಕೊಂಕಣಿಯಲ್ಲಿದೆ. ಅದಕ್ಕಿಂತ ಹೀನ ಪರಿಸ್ಥಿತಿ ಬೇರೇನಿರಬಹುದು?!
ವಾಸ್ತವವೇನೆಂದರೆ, ಈ ಎಚ್ಚೆಮ್ ಪೆರ್ನಾಲ್ ಮತ್ತು ವಿಲ್ಸನ್ ಕಟೀಲ್ ಅವರು ಇದೇ ‘ದಿರ್ವೆಂ’ ಪತ್ರಿಕೆಯಲ್ಲಿ ‘ಮನಃಪೂರ್ವಕ’ವಾಗಿ ಕೆಲಸ ಮಾಡಿದವರು! ನಿರಂತರವಾಗಿ ಪುಟಗಟ್ಟಲೆ ‘ಬರೆದವರು’. ಮತ್ತೊಬ್ಬರು ಮಹಾನ್ ಕವಿವರ್ಯರು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಾದ ಮೆಲ್ವಿನ್ ರೊಡ್ರಿಗಸ್ ಅವರು.
ಅಯ್ಯಯ್ಯೋ! ನಿಮಗೀಗ ಮತ್ತಷ್ಟು ಆಶ್ಚರ್ಯವಾಗಿರಬಹುದು ಅಲ್ಲವೆ?! ಇದೇನಪ್ಪಾ ಹೀಗೂ ಉಂಟೇ, ಈ ರೀತಿಯೂ ‘ಸಾಹಿತ್ಯ’ ಪ್ರಪಂಚದಲ್ಲಿ ನಡೆಯುತ್ತದೆಯೇ ಎಂದು ನೀವು ಕಸಿವಿಸಿ, ಗಲಿಬಿಲಿಗೊಂಡರೆ ಆಶ್ಚರ್ಯವಿಲ್ಲ.
ಹೌದು ಸ್ವಾಮಿ. ಇದು ಕೊಂಕಣಿಯಲ್ಲಿ ನಡೆದಿರುವ ಸತ್ಯ ಘಟನೆ.
ಇವರೆಲ್ಲಾ ಸೇರಿ ಹೇಗಾದರೂ ಮಾಡಿ ಈ ‘ದಿರ್ವೆಂ’ ಪತ್ರಿಕೆಯನ್ನು ಇನ್ನಿಲ್ಲದಂತೆ ಮಾಡಲು ಹರಸಾಹಸಪಟ್ಟಿದ್ದು, ಷಡ್ಯಂತ್ರ ರೂಪಿಸಿದ್ದು ಎಲ್ಲಾ ಬಹಿರಂಗವಾಗಿದೆ. ಸಮಾಜದಲ್ಲಿ ‘ಸಾಹಿತಿ’ಗಳೆಂದು ಹೆಸರು, ಗೌರವ ಮತ್ತು ಇತರೆಲ್ಲಾ ರೀತಿಯಲ್ಲಿ ಫಾಯಿದೆ ಪಡೆದುಕೊಳ್ಳುವುದರ ಜೊತೆಗೆ, ತಾವೇ ಶ್ರೇಶ್ಟರು, ಅತ್ಯುತ್ತಮರು ಮತ್ತು ಸರ್ವೋತ್ತಮರೆಂದು ಹೇಳಿಕೊಳ್ಳುತ್ತಾ, ಇತರರನ್ನು ತುಚ್ಛರು, ನೀಚರೆಂದು ಹೀಯಾಳಿಸುವ ಈ ಮಹಾನ್ ‘ಸಾಹಿತಿ’ಗಳು ನೈಜವಾಗಿ ಏನೆಂಬುದನ್ನು ಅವರೇ ಸಾಬೀತುಪಡಿಸಿದ್ದಾರೆ, ಸಾರ್ವಜನಿಕವಾಗಿ!
‘ದಿರ್ವೆಂ’ ಪತ್ರಿಕೆಯನ್ನು ರದ್ದಿ ಪತ್ರಿಕೆ ಮತ್ತು ಅದರ ಸಂಪಾದಕರನ್ನು ಮೆದುಳಿಲ್ಲದ ವ್ಯಕ್ತಿ, ಬುದ್ಧಿಹೀನ ಮನುಷ್ಯನೆಂದು ಎಲ್ಲೆಂದರಲ್ಲಿ, ಎಲ್ಲರ ಬಳಿ ಹೇಳಿಕೊಳ್ಳುತ್ತಿದ್ದ ಈ ಎಚ್ಚೆಮ್ ಪೆರ್ನಾಲ್ ಮತ್ತು ವಿಲ್ಸನ್ ಕಟೀಲ್ ಅವರು ಒಮ್ಮಿಂದೊಮ್ಮೆಲೆ ಇದೇ ‘ದಿರ್ವೆಂ’ ಪತ್ರಿಕೆ ಮತ್ತು ಅದರ ಸಂಪಾದಕರ ಮೇಲೆ ಏಕಾಏಕಿ ಮೋಹಿತರಾಗಿ, ಆಕರ್ಷಣೆಗೊಳಪಟ್ಟು ಆ ಪತ್ರಿಕೆಯನ್ನು ಸೇರಿದ್ದು ಬಹುತೇಕರನ್ನು ಹುಬ್ಬೇರಿಸಿದ ಬೆಳವಣಿಗೆಯಾಗಿತ್ತು.
ಅಲ್ಲಿಯ ತನಕ ಈ ಬುದ್ಧಿವಂತ ಕವಿ ಮಹೋದಯರಗಳ ‘ಪ್ರಸಿದ್ಧಿ’ಯನ್ನಷ್ಟೇ ಕೇಳಿದ್ದ ‘ದಿರ್ವೆಂ’ ಪತ್ರಿಕೆಯ ಸಂಪಾದಕ ಜೋನ್ ಮೋನಿಸ್ ಅವರು, ಈ ಮಹಾನುಭಾವರು ತಾವಾಗಿಯೇ ತನ್ನ ಪತ್ರಿಕೆಯಲ್ಲಿ ಕೆಲಸ ಮಾಡಲು ಮುಂದೆ ಬಂದಿದ್ದನ್ನು ಕೇಳಿ ಅತೀವ ಸಂತೋಷಪಟ್ಟರು. ಮಹಾನ್ ‘ಸಾಹಿತಿ’ಗಳಲ್ಲವೇ! ಹಾಗಾಗಿ ಅವರಿಗೆ ಎಲ್ಲಾ ರೀತಿಯ ಅನುಕೂಲ ಮಾಡಿಕೊಟ್ಟರು ಹಾಗೂ ಸ್ವಾತಂತ್ರ್ಯ ಕೊಟ್ಟರು.
ಅದೇ ಅವರು ಮಾಡಿದ ಅತಿ ದೊಡ್ಡ ತಪ್ಪು.
ತನ್ನ ಪತ್ರಿಕೆಗೆ ನುಗ್ಗಿದ್ದು ಸಾಹಿತಿಗಳೂ ಅಲ್ಲ, ಹಿತಚಿಂತಕರೂ ಅಲ್ಲವೆಂಬುದನ್ನು ತಿಳಿದುಕೊಳ್ಳುವ ಸರದಿ ಬಂದಾಗ ಜೋನ್ ಮೋನಿಸ್ ಅವರು ಕಂಗಾಲಾಗಿದ್ದರು. ಸರಿಪಡಿಸಿಕೊಳ್ಳಲಾಗದಷ್ಟು ಅನಾಹುತ ನಡೆದು ಹೋಗಿತ್ತು.
ವಿಶ್ವಾಸದ್ರೋಹವೆಂದರೇನು, ಕೃತಘ್ನತೆಯ ಮಟ್ಟ ಎಷ್ಟೆತ್ತರದಲ್ಲಿರುತ್ತದೆ, ಮೋಸದ ಪರಾಕಾಷ್ಠೆ ಮತ್ತು ವಂಚನೆಯ ಪರಮಾವಧಿ ಹೇಗಿರುತ್ತದೆ ಎಂಬುದರ ಪರಿಚಯ, ಅರಿವು ಅವರಿಗಾಗುವಾಗ ನೇತ್ರಾವತಿ ನದಿಯಿಂದ ಸಾಕಷ್ಟು ನೀರು ಸಮುದ್ರ ಸೇರಿಯಾಗಿತ್ತು.
ಚಹಾ ತಯಾರಿಸಲೂ ಬಾರದವರು ಹೋಟೆಲು ನಡೆಸುತ್ತಿದ್ದಾರೆಂದು ‘ದಿರ್ವೆಂ’ ಪತ್ರಿಕೆಯ ಸಂಪಾದಕರನ್ನು ಹೀಗಳೆಯುತ್ತಾ ಮೂದಲಿಸುತ್ತಿದ್ದವರು, ಕ್ರಾಂತಿಕಾರಿಗಳಂತೆ ತಾವು ಶ್ರೇಶ್ಟ, ಅತಿ ಪರಿಣಿತ ಪಾಕ ಪ್ರಾವೀಣ್ಯರೆಂದು ರಣದುಂಧುಬಿ ಬಾರಿಸುತ್ತಾ ಅದೇ ಹೋಟೆಲಿಗೆ ಸೇರಿದ ಈ ಜೋಡಿಯು ಅಲ್ಲಿ ಮಾಡಿದ್ದು ಗಂಡಾಂತರ, ಸ್ವೇಚ್ಛಾಚಾರ ಮತ್ತು ಅನಾಚಾರ ಹೊರತು ಮತ್ತೇನಲ್ಲ. ಸೇರಿದ ಹೋಟೆಲನ್ನೇ ಗುಡಿಸಿ ಗುಂಡಾಂತರ ಮಾಡಲು ಶ್ರಮಿಸಿದ್ದು ಅವರ ವಿನಾಶಕಾರಿ ಪ್ರತಿಭೆಗೆ, ಪಾಶವೀ ಶಕ್ತಿ ಸಾಮಥ್ರ್ಯಕ್ಕೆ ಮತ್ತು ವಿಕೃತ ಮನಸ್ಸಿಗೆ ಸಾಕ್ಷಿ.
ವಿಷಯವೇನಪ್ಪಾ ಅಂದರೆ, ‘ದಿರ್ವೆಂ’ ಪತ್ರಿಕೆ ಸೇರಿದ ಕವಿವರ್ಯರು ನಿರಂತರವಾಗಿ ಇತರ ಕೊಂಕಣಿ ಸಾಹಿತಿ, ಕಲಾವಿದರು, ಪತ್ರಿಕೆಗಳು ಹಾಗೂ ಸಂಘಟನೆಗಳ ಬಗ್ಗೆ ಪ್ರತಿ ಸಂಚಿಕೆಯಲ್ಲಿ ವಿಷಪ್ರಾಶನ ಮಾಡಿದ್ದೇ ಹೊರತು ಸಾಹಿತ್ಯ ಕೃಷಿ ಮಾಡಲೇ ಇಲ್ಲ. ಪತ್ರಿಕೆಯ ಓದುಗರಿಗೆ ಉತ್ತಮ ಸಾಹಿತ್ಯ, ಬರಹಗಳನ್ನು ಕೊಡುವುದನ್ನು ಬಿಟ್ಟು, ತಮ್ಮ ಮೇಲೆ ನಂಬಿಕೆಯಿಟ್ಟ ಸಂಪಾದಕರಿಗೆ ನ್ಯಾಯವೊದಗಿಸುವುದನ್ನು ಬಿಟ್ಟು, ಅವರು ನೀಡಿದ ಸ್ವಾತಂತ್ರ್ಯವನ್ನು ದುರುಪಯೋಗಿಸಿ, ನಂಬಿಕೆ ದ್ರೋಹ ಮಾಡಿ ತಮ್ಮ ಬರಹಗಳನ್ನು, ಪತ್ರಿಕೆಯ ಸ್ಥಳಾವಕಾಶವನ್ನು ಕಂಡ ಕಂಡವರನ್ನು ನಿಂದಿಸಲು, ಅವಮಾನಿಸಲು, ಬ್ಲ್ಯಾಕ್‍ಮೈಲ್ ಮಾಡಲು, ಹೀನಾಯವಾಗಿ ಚಿತ್ರಿಸಲು, ವ್ಯಕ್ತಿತ್ವ ಹರಣ ಮಾಡಲು ಬಳಸಿದರೇ ಹೊರತು, ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಿಸಿ, ಅಲ್ಲಿಯತನಕ ತಾವು ಸಾಹಿತ್ಯದ ‘ಮಟ್ಟ’ದ ಬಗೆಗೆ ಪ್ರತಿಪಾದಿಸುತ್ತಿದ್ದ ‘ಮೌಲ್ಯ’ಗಳನ್ನು ಸಾಕಾರಗೊಳಿಸಲು ಪ್ರಯತ್ನಿಸಲೇ ಇಲ್ಲ.
ಇದೆಲ್ಲಾ, ಸುಮಾರು ಒಂದೂವರೆ ವರ್ಷದ ತನಕ ಈ ಪ್ರತಿಭಾನ್ವಿತ ಸಾಹಿತಿಗಳು ಮಾಡಿದ ಘನಂದಾರಿ ‘ಸಾಹಿತ್ಯಿಕ’ ಸಾಧನೆಗಳು. ಪತ್ರಿಕೆಯಲ್ಲಿದ್ದ ಸಮಯದಲ್ಲಿ ಇವರಿಬ್ಬರು ಹಲವು ಲೇಖನ ಸರಣಿ, ಅಂಕಣಗಳನ್ನು ಬರೆದಿದ್ದಾರೆ. ಅವೆಲ್ಲವೂ ಯಾರ್ಯಾರನ್ನೋ ನಿಂದಿಸಲು, ಹೀಯಾಳಿಸಲು, ಮಾನ ತೆಗೆಯಲು, ಕೀಳಾಗಿ ಬಣ್ಣಿಸಲು, ತೀಟೆ ತೀರಿಸಲು ಬರೆದ ಬರಹಗಳೇ.
ಇವೆಲ್ಲವೂ ಪತ್ರಿಕೆಯಲ್ಲಿ ಅಚ್ಚಾಗಿರುವಂಥವೇ. ಇದನ್ನೆಲ್ಲಾ ಸುಖಾಸುಮ್ಮನೆ, ಆಧಾರರಹಿತವಾಗಿ ಹೇಳಲಾಗುವುದಿಲ್ಲವಲ್ಲ! ಬರೆದವರ ಭಾವಚಿತ್ರ ಸಹಿತವಾಗಿ ನಿರಂತರವಾಗಿ ಪ್ರಕಟವಾದ ಅಂಕಣ, ಬರಹಗಳ ಸಾಕ್ಷ್ಯಾಧಾರಗಳ ಬೃಹತ್ ಸಂಗ್ರಹವೇ ಇವೆಲ್ಲವನ್ನು ರುಜುವಾತುಪಡಿಸುತ್ತದೆ.
ತಾವು ಯಾವ ಪತ್ರಿಕೆಯನ್ನು ಮೊದಲು ಹೀನಾಯವಾಗಿ ತೆಗಳಿ, ನಿಂದಿಸುತ್ತಿದ್ದರೋ, ಅದೇ ಪತ್ರಿಕೆಯನ್ನು ಸೇರಿ ತಾವು ಸಾಹಿತ್ಯ ಸೇವೆ ನಡೆಸುತ್ತೇವೆಂದು ಭೋಂಗು ಬಿಟ್ಟು ಕೇವಲ ಅನಾಚಾರ, ಅಕ್ಷರದ ಹಾದರತನವನ್ನೇ ಮಾಡಿಕೊಂಡಿದ್ದವರು ನಂತರ ಅದೇ ಪತ್ರಿಕೆ ಮತ್ತು ಅದರ ಸಂಪಾದಕರನ್ನು ಹೇಗಾದರೂ ಮಾಡಿ ಇನ್ನಿಲ್ಲವಾಗಿಸಲು ಪ್ರಯತ್ನಿಸಿದ್ದು ಯಾಕೆ? ಎಂದು ಯಾರಾದರೂ ಕೇಳಬಹುದು.
ಉತ್ತರ ಬಹಳ ಸಿಂಪಲ್.
ಯಾವಾಗ ತನ್ನ ಪತ್ರಿಕಾ ಕಚೇರಿಗೆ ಸೇರಿ ಪತ್ರಿಕೆಯನ್ನು ಉದ್ಧಾರಗೊಳಿಸುವುದನ್ನು ಬಿಟ್ಟು ತನಗೇ ಆಪತ್ತನ್ನು ತಂದೊಡ್ಡುವ, ತನ್ನ ಪತ್ರಿಕೆಯನ್ನು ಹನನ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆಂದು ಕಂಡುಕೊಂಡರೋ ಅದೇ ದಿನ ಜೋನ್ ಮೋನಿಸ್ ಅವರು ಈ ಕೃತಘ್ನರನ್ನು ದೂರ ಮಾಡಿದರು. ನಂತರ, ಮತ್ತಷ್ಟು ನೀಚತನವನ್ನು ಮೈಗೂಡಿಸಿಕೊಂಡ ಫಟಿಂಗರು ‘ದಿರ್ವೆಂ’ ಪತ್ರಿಕೆ ಮತ್ತದರ ಸಂಪಾದಕರನ್ನು ಹಣಿಯುವ ಕಾರ್ಯವನ್ನು ತೀವ್ರಗೊಳಿಸಿದರು.
ಕೊಂಕಣಿ ಪ್ರಪಂಚದಲ್ಲಿ ಬರಹಗಾರರಿಗೆ, ಕಲಾವಿದರು, ನಾಯಕರು, ಸಂಘ ಸಂಸ್ಥೆಗಳಿಗೆ ಸತತವಾಗಿ, ನಿರಂತರವಾಗಿ ವಿವಿಧ ರೀತಿಯಲ್ಲಿ ಕಿರುಕುಳ ನೀಡಿ, ದುಸ್ವಪ್ನವಾಗಿ ಕಾಡಿದ್ದ ಇದೇ ಎಚ್ಚೆಮ್ ಪೆರ್ನಾಲ್ ಬಗ್ಗೆ ಸಾರ್ವಜನಿಕ ಹಿತಾಸಕ್ತಿಯಿಂದ ಜೋನ್ ಮೋನಿಸ್ ಅವರು ಆತ ನಡೆಸುತ್ತಿದ್ದ ಹೀನ, ನೀಚ, ಅನೈತಿಕ, ಕೀಳು ಕೃತ್ಯಗಳನ್ನು, ಅಕ್ರಮಗಳನ್ನು ಸವಿಸ್ತಾರವಾಗಿ, ಸೋದಾಹರಣವಾಗಿ ವರದಿ ಮಾಡಿದರು. ಅದು ಅವರಿಗೆ ಅನಿವಾರ್ಯವಾಗಿತ್ತು. ಅದು ಸೂಕ್ತವೂ ಆಗಿತ್ತು. ಕೊಂಕಣಿ ಭಾಷೆ, ಸಾಹಿತ್ಯ, ಸಮಾಜದ ಆರೋಗ್ಯಕ್ಕೆ ಹಾನಿಕಾರಕವಾಗಿದ್ದ ಸಂಗತಿಯ ಬಗ್ಗೆ ಎಚ್ಚರಿಸಿ ಬರೆಯುವುದು ಪತ್ರಿಕೆಯ ಜವಾಬ್ದಾರಿಯೂ ಹೌದು.
ಅಲ್ಲಿಯ ತನಕ ತನ್ನನ್ನು ಯಾರೂ ಕೇಳುವವರಿಲ್ಲವೆಂದು ನಿಶ್ಚಿಂತೆಯಿಂದಿದ್ದ ಎಚ್ಚೆಮನು, ತನ್ನ ಫಟಿಂಗತನದ ವಿರಾಟ್ ದರ್ಶನವಾಗಿದ್ದನ್ನು ಸಹಿಸದೆ, ತನ್ನ ಕುಕೃತ್ಯ, ಹಲ್ಕಾತನದ ಬಗ್ಗೆ ಕಿಂಚಿತ್ತೂ ಪಶ್ಚಾತ್ತಾಪ ಪಡದೆ ತನ್ನೊಳಗಿನ ಘಟಸರ್ಪವನ್ನು ಕೆರಳಿಸಿಕೊಂಡು ತನ್ನ ಎಂದಿನ ಶೈಲಿಯಲ್ಲಿ ತನ್ನ ‘ಸಂಗಾತಿ’ಗಳನ್ನು ಒಟ್ಟುಗೂಡಿಸಿ ‘ದಿರ್ವೆಂ’ ಪತ್ರಿಕೆಯನ್ನು ಸಾಯಿಸಲೇಬೇಕೆಂದು ಪಣತೊಟ್ಟು ಕಾರ್ಯಾಚರಣೆಗಿಳಿದನು.
ಇದಕ್ಕೆ ತುಂಬು ಹೃದಯದಿಂದ ಸಹಕಾರ, ಬೆಂಬಲ ನೀಡಿದ್ದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕವಿ ಮೆಲ್ವಿನ್ ರೊಡ್ರಿಗಸ್ ಅವರು.
ಕವಿ ಮೆಲ್ವಿನ್‍ರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದಾಗ ಇದೇ ‘ದಿರ್ವೆಂ’ ಪತ್ರಿಕೆಯಲ್ಲಿ ಎರಡು ಪುಟಗಳ ವಿಶೇಷ ಪುರವಣಿಯನ್ನು ಪ್ರಕಟಿಸಲಾಗಿತ್ತು. ಅವರ ಬಗ್ಗೆ ವಿಶೇಷ ಸಂಪಾದಕೀಯ ಪ್ರಕಟಿಸಲಾಗಿತ್ತು. ಅಲ್ಲದೆ ಕೊಂಕಣಿಯ ಇಪ್ಪತ್ತು ಸಂಘ-ಸಂಸ್ಥೆಗಳು ಸೇರಿ ಮಿಲಾಗ್ರಿಸ್ ಹಾಲ್‍ನಲ್ಲಿ ಮೆಲ್ವಿನ್‍ರನ್ನು ಸಮುದಾಯದ ಪರವಾಗಿ ಸನ್ಮಾನಿಸಿ ನಗದು ಪುರಸ್ಕಾರವನ್ನೂ ಕೊಡಲಾಗಿತ್ತು. ಇದರಲ್ಲಿ ಇದೇ ‘ದಿರ್ವೆಂ’ ಪತ್ರಿಕೆಯ ವತಿಯಿಂದ ಕೊಡಲಾದ ನಗದು ಮೊತ್ತವೂ ಇತ್ತು! ಅದನ್ನು ಬಹಳ ಖುಷಿಯಿಂದಲೇ ಪಡೆದುಕೊಂಡಿದ್ದ ಮೆಲ್ವಿನ್ ಅವರಿಗೆ ನಂತರ ಅದೇ ಪತ್ರಿಕೆ ಮತ್ತು ಸಂಪಾದಕರ ಮೇಲೆ ಮುನಿಸ್ಯಾಕಾಯಿತು ಎಂಬುದನ್ನು ತಿಳಿದುಕೊಂಡಲ್ಲಿ ಮೆಲ್ವಿನ್ ಅವರ ಸಮಗ್ರ ವ್ಯಕ್ತಿತ್ವದ ದರ್ಶನವಾಗುತ್ತದೆ.
ತನಗೆ ಕೊಟ್ಟ ಹಣ ಮತ್ತು ಹೊಗಳಿಕೆಯನ್ನು ಬೊಗಸೆಯೊಡ್ಡಿ ಸ್ವೀಕರಿಸಿ ಕೃತಾರ್ಥನಾದ ನಂತರ ಇದೇ ಮೆಲ್ವಿನ್ ಅವರು ಹೋದಲ್ಲಿ ಬಂದಲ್ಲಿ ಬಹಿರಂಗವಾಗಿ ಇದೇ ‘ದಿರ್ವೆಂ’ ಪತ್ರಿಕೆ ಮತ್ತದರ ಸಂಪಾದಕರನ್ನು ಕೀಳೆಂಬುದಾಗಿ, ಅಂದರೆ ಸಾಹಿತ್ಯ, ಭಾಷೆ, ವ್ಯಾಕರಣ ಮುಂತಾದ ಸಂಗತಿಗಳನ್ನು ಉದ್ಧರಿಸುತ್ತಾ, ಫರ್ಮಾನು ಹೊರಡಿಸಿದ್ದಾರೆ. ಅಷ್ಟೇ ಅಲ್ಲ ಜೋನ್ ಮೋನಿಸ್ ಬಗ್ಗೆ ಅಷ್ಟೊಂದು ಅಸಹನೆ, ಜಿಗುಪ್ಸೆಯಿಂದ ಅವರ, ಅವರ ಪತ್ರಿಕೆಯ ವಿರುದ್ಧ ಎಲ್ಲಾ ಪತ್ರಿಕೆಗಳಿಗೆ ಪತ್ರವನ್ನು ಬರೆದು ಖಂಡಿಸುವ ಧಾಷ್ಟ್ರ್ಯವನ್ನೂ ಮೆರೆದಿದ್ದಾರೆ. ಸಾಕಾಗಲಿಲ್ಲವೆಂಬಂತೆ, ‘ದಿರ್ವೆಂ’ ಪತ್ರಿಕೆಯನ್ನು ಇನ್ನಿಲ್ಲವಾಗಿಸುವುದಕ್ಕೆ ಸಾಕಷ್ಟು ಶ್ರಮಿಸಿ, ತಂಡವನ್ನೇ ಕಟ್ಟಿ ಜಿಲ್ಲಾಧಿಕಾರಿಗಳಿಗೆ ದೂರನ್ನೂ ನೀಡಿದ್ದಾರೆ.
ಆದರೆ ಅದೇ ಪತ್ರಿಕೆ ಮತ್ತದರ ಸಂಪಾದಕರಿಂದ ಕೈಯೊಡ್ಡಿ ಪಡೆದುಕೊಂಡ ಹಣ, ಸನ್ಮಾನವನ್ನು ತಮ್ಮಲ್ಲೇ ಇಟ್ಟುಕೊಂಡಿದ್ದಾರೆ. ಅಂದರೆ ಈ ವ್ಯಕ್ತಿಗೆ ಹಣ ತೆಗೆದುಕೊಳ್ಳುವಾಗ ಯಾವುದೇ ತಕರಾರಿರುವುದಿಲ್ಲ! ಹಣ ತೆಗೆದುಕೊಂಡ ನಂತರ ಅದರ ನೆನಪೂ ಇರುವುದಿಲ್ಲ! ಏನಿದರ ಅರ್ಥ?
ಇದು ನಮ್ಮ ಮಹಾನ್ ಸಾಹಿತಿಗಳ ತತ್ವ, ಸಿದ್ಧಾಂತ, ನೀತಿ, ಧೋರಣೆ ಮತ್ತು ಜೀವಿಸುವ ವಿಧಾನ!
ಇವರೆಲ್ಲಾ ಹೋದಲ್ಲಿ ಬಂದಲ್ಲಿ ಹೇಳುತ್ತಾ, ಬರೆಯುತ್ತಾ ಇರುವುದೇನೆಂದರೆ, ತಾವು ಸಾಹಿತಿಗಳು, ತಮ್ಮನ್ನು ಬಿಟ್ಟು ಸಾಹಿತ್ಯವಿಲ್ಲ, ಸಮಗ್ರ ಸಾಹಿತ್ಯ ಲೋಕಕ್ಕೆ ತಾವೇ ವಾರಸುದಾರರೆಂದು ಬೊಬ್ಬಿರಿಯುವುದು. ಅದೊಂದು ಕಡೆಯಾದರೆ, ಸಾಹಿತ್ಯದ ಹೆಸರಿನಲ್ಲಿ, ಸಾಹಿತಿಗಳೆಂಬ ಸೋಗಿನಲ್ಲಿ ಮಾಡುವುದು ಬರೀ ಹೀನ ಕೆಲಸ. ಆದರೆ ಅವರನ್ನು ಯಾರೂ ಪ್ರಶ್ನಿಸಬಾರದಂತೆ! ಹೇಗಿದೆ ನೀತಿ?
ಈ ಕೆಲ ಘನಂದಾರಿ ‘ಸಾಹಿತಿ’ ಯಾನೆ ‘ಕವಿ’ಗಳು ನಿರಂತರವಾಗಿ ಮಾಡಿಕೊಂಡು ಬಂದಿದ್ದೇನೆಂದರೆ, ಯಾರೆಲ್ಲಾ ತಮ್ಮಷ್ಟಕ್ಕೆ ಕೊಂಕಣಿ ಭಾಷೆ, ಸಮುದಾಯದ ಬೆಳವಣಿಗೆಗಾಗಿ, ಏಕತೆಗಾಗಿ, ಏಳಿಗೆಗಾಗಿ ದುಡಿಯುತ್ತಿದ್ದಾರೋ ಅವರನ್ನೆಲ್ಲಾ ಠೀಕಿಸಿ, ಸುಳ್ಳು ಆಪಾದನೆಗಳೊಂದಿಗೆ ನಿಂದಿಸಿ, ಸಾಧ್ಯವಾದ ರೀತಿಯಲ್ಲೆಲ್ಲಾ ಅವರನ್ನು ಹಿಂಸಿಸುವುದು, ಅವರ ಆತ್ಮವಿಶ್ವಾಸವನ್ನು ಕುಂದಿಸಿ, ಅವರು ಕೊಂಕಣಿಯ ಕೆಲಸ ಕಾರ್ಯಗಳನ್ನು ಬಿಟ್ಟು ಹೋಗುವಂತೆ ಮಾಡುವುದೇ ಆಗಿದೆ. ಯಾಕೆಂದರೆ ಇವರಿಗೆ ಹುದ್ದೆಯ ಆಸೆ, ಅಧಿಕಾರದ ಮೇಲೆ ಕಣ್ಣು. ಸಮರ್ಥರು, ಯೋಗ್ಯರು ಇದ್ದರೆ ತಮಗೆ ಶಾಶ್ವತವಾಗಿ ಅಧಿಕಾರ, ಹುದ್ದೆಗಳು, ಅನುದಾನಗಳು ಸಿಗಲಾರವೆಂಬ ಹಕೀಕತ್ತು ತಿಳಿದವರು ಇಂತಹ ಅಡ್ಡ ದಾರಿಗಳನ್ನು ಬಳಸದೆ ಇನ್ನೇನು ಮಾಡಿಯಾರು?!
ಇವರ ಇಂತಹ ‘ಸಂಭಾವಿತ’, ‘ಸರ್ವೋತೃಷ್ಟ’ ಸಾಧನೆಗಳ ಕೆಲ ದೃಷ್ಟಾಂತಗಳಿಲ್ಲಿವೆ. 1. ಕೊಂಕಣಿಯ ಏಳಿಗೆಗಾಗಿ ನಿಸ್ವಾರ್ಥವಾಗಿ ದುಡಿದು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಯಾರೂ ಮಾಡಿರದ ಸಾಧನೆ, ಕೆಲಸ ಕಾರ್ಯಗಳನ್ನು ಮಾಡಿಕೊಂಡಿರುವ ರೊಯ್ ಕ್ಯಾಸ್ಟೆಲಿನೊ ಅವರನ್ನು ಅಕಾಡೆಮಿಯ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಲು ಸಂಚು ಹೂಡಿದ್ದು, ಅವರನ್ನು ನಿರಂತರವಾಗಿ ತಮ್ಮ ಮಾಧ್ಯಮಗಳ ಮೂಲಕ ಅವಮಾನಿಸಿ, ನಿಂದಿಸಿ ಕಿರುಕುಳ ನೀಡಿದ್ದು, ಸಾಧ್ಯವಾದ ರೀತಿಯಲ್ಲೆಲ್ಲಾ ಧೃತಿಗೆಡಿಸಲು ಶ್ರಮಿಸಿದ್ದು, 2. ಕೊಂಕಣಿ ಲೇಖಕರ ಒಕ್ಕೂಟವನ್ನು ಸ್ಥಾಪಿಸಿ, ಕೊಂಕಣಿಗಾಗಿ ಅವಿರತವಾಗಿ ಶ್ರಮಿಸಿದ ನೇತಾರ, ಕೊಂಕಣಿಯ ಅತಿ ಜನಪ್ರಿಯ ಸಾಹಿತಿ, ಶ್ರೇಶ್ಟ ಸಾಹಿತ್ಯವನ್ನು ನಿರ್ಮಿಸಿದ ಡಾ. ಎಡ್ವರ್ಡ್ ನಜ್ರೆತ್ ಅವರನ್ನು ಸರ್ವರೀತಿಯಲ್ಲಿ ಹಣಿಯಲು ಪ್ರಯತ್ನಪಟ್ಟಿದ್ದು, 3. ಮೂರು ದಶಕಗಳಿಂದ ಕೊಂಕಣಿಯಲ್ಲಿ ಶ್ಲಾಘನೀಯ ಸಾಧನೆಗಳನ್ನು ನಡೆಸುತ್ತಾ, ಸಾಂಸ್ಕøತಿಕ, ಕಲಾ ಕ್ಷೇತ್ರದಲ್ಲಿ ಅವಿರತ ದುಡಿಮೆ, ದಾಖಲೆಗಳನ್ನು ನಿರ್ಮಿಸಿ ವಿಶ್ವಾದ್ಯಂತ ಪರಿಚಿತವಾಗಿರುವ ‘ಮಾಂಡ್ ಸೊಭಾಣ್’ ಸಂಸ್ಥೆಯನ್ನು ನಾಶ ಮಾಡಲು ಹವಣಿಸಿದ್ದು, ಅದರ ಗುರ್ಕಾರ್ ಎರಿಕ್ ಒಝೆರಿಯೊ ಅವರನ್ನು ವಾಚಾಮಗೋಚರವಾಗಿ ನಿಂದಿಸಿದ್ದು, ಕಲ್ಪಿತ ಆರೋಪಗಳನ್ನು ಹೂಡಿ ಸರಕಾರಕ್ಕೆ ದೂರು ನೀಡಿದ್ದು, ಸತತವಾಗಿ ಅಪಪ್ರಚಾರ ನಡೆಸಿದ್ದು, 4. ‘ದಿರ್ವೆಂ’ ಪತ್ರಿಕೆಯನ್ನು ಹತ್ಯೆಗೈಯಲು ಷಡ್ಯಂತ್ರ ರೂಪಿಸಿದ್ದು ಕೆಲವೇ ಪ್ರಮುಖ ಉದಾಹರಣೆಗಳು.
ಈ ಎಚ್ಚೆಮ್ ಪೆರ್ನಾಲ್ ಎಂತಹ ವಿನಾಶಕಾರಿ ಮನಸ್ಸಿನವನು, ಎಷ್ಟು ವಿಧ್ವಂಸಕ ಪ್ರವೃತ್ತಿಯವನೆಂದರೆ, ಸುಮಾರು 15 ವರ್ಷಗಳ ಕಾಲ ಕೊಂಕಣಿ ಭಾಷೆ, ಸಾಹಿತ್ಯ ಮತ್ತು ಬರಹಗಾರರ ಸಮುದಾಯದ ಸಮಗ್ರ ಏಳಿಗೆ, ಅಭ್ಯುದಯಕ್ಕಾಗಿ ನಿರಂತರ ಶ್ರಮಿಸಿದ್ದ, ಹಿರಿಯ ಸಾಹಿತಿಗಳು ಕಟ್ಟಿ ಬೆಳೆಸಿದ್ದ ‘ಕೊಂಕಣಿ ಲೇಖಕರ ಒಕ್ಕೂಟ, ಕರ್ನಾಟಕ (ರಿ.)’ ಸಂಘಟನೆಯ ಮೇಲೆ ಅತ್ಯಾಚಾರ ನಡೆಸಿ ಅದನ್ನು ಕತ್ತು ಹಿಸುಕಿ ಸಾಯಿಸಿದ್ದನ್ನು ತಿಳಿದುಕೊಂಡರೆ ಗೊತ್ತಾಗುತ್ತದೆ. ಕೊಂಕಣಿ ಕಾರ್ಯಕ್ರಮಗಳ ಬಗ್ಗೆ ಹಿಂದೆ ಬಹಳಷ್ಟು ನಿಂದಿಸಿದ್ದ ಈತ, ಇದೇ ಸಂಘಟನೆಗೆ ಬುದ್ಧಿವಾದ ಹೇಳಿ, ಕೊನೆಗೆ ಅಧಿಕಾರದ ಆಸೆಯಿಂದ ಅದನ್ನು ಸೇರಿ ಕಾರ್ಯದರ್ಶಿಯಾಗಿ ಸಂಘಟನೆಯನ್ನು ಬೀದಿಗೆ ತಳ್ಳಿದ್ದು ಅತಿ ದೊಡ್ಡ ಸಾಧನೆ. ನಂತರ ಅಧ್ಯಕ್ಷನಾಗಿ ಸಂಘಟನೆಯ ಸುಮಾರು ಲಕ್ಷದಷ್ಟು ನಿಧಿಯ ವಿವರಗಳನ್ನು ಸದಸ್ಯರಿಗೆ ನೀಡದೆ ಒಕ್ಕೂಟವನ್ನು ಸಮಾಧಿಗೆ ಸೇರಿಸಿದ ಮಹತ್ಸಾಧನೆ ಈತನದು.
ಇಲ್ಲಿ ಮತ್ತೊಂದು ವಿಚಾರವಿದೆ. ಹೇಳುವುದು ಶಾಸ್ತ್ರ ಇಕ್ಕುವುದು ಗಾಳ ಎಂಬ ಮಾತಿನಂತೆ ಈ ಎಚ್ಚೆಮ್ ಪೆರ್ನಾಲ್ ಯಾನೆ ಹೆನ್ರಿ ಮೆಂಡೊನ್ಸಾನು ಪ್ರಪಂಚದಲ್ಲಿನ ಎಲ್ಲರ ಹುಳುಕು, ತಪ್ಪುಗಳನ್ನು ಬಹಿರಂಗವಾಗಿ ಆಡಿಕೊಳ್ಳುತ್ತಾ, ಕಂಡ ಕಂಡವರ ಮಾನ, ಮರ್ಯಾದೆಗಳನ್ನು ಹರಾಜಿಗಿಡುತ್ತಿರುವವನ್ನು ಕಂಡು ಈತನನ್ನು ಪ್ರಾಮಾಣಿಕನೆಂದು ಕೆಲವರು ತಿಳಿದುಕೊಂಡಿರುವುದು ಇನ್ನೊಂದು ದುರಂತ. ತಾನು ಸ್ವತಃ ವಿಧ್ವಂಸಕ, ಹೀನ ಕೃತ್ಯಗಳ ಸರದಾರನಾದ ಈತನಿಗೆ ಯಾರಾದರೂ ಆತನ ತಪ್ಪನ್ನು ತೋರಿಸಿದಲ್ಲಿ ಲವಲೇಶವೂ ಸಹಿಸುವುದಿಲ್ಲ. ಬದಲಾಗಿ ಅವರ ಮೇಲೆ ಆಕ್ರಮಣ ಮಾಡುವ ಕೀಚಕನೀತ. ಇದಕ್ಕೊಂದು ಅತ್ಯುತ್ತಮ ನಿದರ್ಶನ ಈತ ಕೊಂಕಣಿಯ ಹಿರಿಯ ಮುಂದಾಳು, ರಾಕ್ಣೊ ಪತ್ರಿಕೆಯ ಮಾಜಿ ಸಂಪಾದಕ ಹಾಗೂ ಕೊಂಕಣಿಯ ಎಲ್ಲಾ ಸಮುದಾಯಗಳಿಂದ ಪ್ರೀತಿಸಲ್ಪಡುವ ಹಿರಿಯ ಕಟ್ಟಾಳು, ನಿವೃತ್ತ ಧರ್ಮಗುರು ರೆ.ಫಾ. ಮಾರ್ಕ್ ವಾಲ್ಡರ್ ಅವರನ್ನು ನಿಂದಿಸಿ ಬೆದರಿಕೆಯೊಡ್ಡಿದ್ದು.
ಹೌದು. ಇದು ಸತ್ಯ.
ಅತ್ಯಂತ ಪ್ರಾಮಾಣಿಕ, ಧೈರ್ಯವಂತರೆಂದು ಹೆಸರುವಾಸಿಯಾದ ಕ್ರಿಯಾಶೀಲ ಮತ್ತು ಭಾಷೆ, ಸಾಹಿತ್ಯ, ಸಮಾಜಕ್ಕಾಗಿ ಅವಿರತ ಶ್ರಮಿಸಿದ ಫಾದರ್ ವಾಲ್ಡರ್ ಅವರು ನೇರ ನಡೆ ನುಡಿಗಳಿಗೆ ಹೆಸರಾದವರು. ಅವರು ಈ ಹೆನ್ರಿ ಪೆರ್ನಾಲನ ಹೀನಾತಿಹೀನ ಕೃತ್ಯಗಳನ್ನು ವಿರೋಧಿಸಿ, ಆತನಿಗೆ ಬುದ್ಧಿವಾದ ಹೇಳಿದವರು. ಅಂತಹ ಘನತೆ, ನಾಯಕತ್ವ ಅವರಿಗಿದೆ. ಆದರೆ ಅವರಿಗೇ ಬೆದರಿಕೆ ಹಾಕಿದ್ದು ಈ ಎಚ್ಚೆಮನು ಎಂಥಾ ಹಲ್ಕಾ ವ್ಯಕ್ತಿಯೆಂಬುದನ್ನು ನಿರೂಪಿಸುತ್ತದೆ.
ವಿಷಯವೇನೆಂದರೆ, ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದ, ಕೊಂಕಣಿ ಭಾಷೆ ಮತ್ತು ಸಂಸ್ಕøತಿ ಪ್ರತಿಷ್ಠಾನದವರು ಫಾ. ಮಾರ್ಕ್ ವಾಲ್ಡರ್ ಅವರ ಜೀವಮಾನ ಸಾಧನೆಗಾಗಿ ಪ್ರಶಸ್ತಿಯೊಂದನ್ನು ಕೊಟ್ಟರು. ಶ್ರೀಮತಿ ವಿಮಲಾ ವಿ. ಪೈಯವರ ಹೆಸರಿನ, ರೂ. ಒಂದು ಲಕ್ಷ ನಗದಿನ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಫಾ. ವಾಲ್ಡರ್ ಅವರಿಗೆ ಕೊಡುವ ಮೂಲಕ ವಿಶ್ವ ಕೊಂಕಣಿ ಕೇಂದ್ರದವರು ಕೊಂಕಣಿಯ ಹಿರಿಮೆ ಗರಿಮೆಯನ್ನು ಎತ್ತಿ ಹಿಡಿದರು. ಎಲ್ಲ ಸಮುದಾಯಗಳನ್ನು ಒಂದುಗೂಡಿಸಲು ಪರಿಶ್ರಮ ಪಟ್ಟ ಹಿರಿಯ ನೇತಾರರಿಗೆ ಈ ಮೂಲಕ ಬಹು ದೊಡ್ಡ ಸನ್ಮಾನ ಸಂಭ್ರಮವನ್ನು ಹಿರಿಯರಾದ ಬಸ್ತಿ ವಾಮನ್ ಶೆಣೈ ಅವರ ನೇತೃತ್ವದಲ್ಲಿ ನಡೆಸಿದ್ದು ನಿಜಕ್ಕೂ ಅಭಿಮಾನದ, ಸಂತಸದ ಸಂಗತಿ. ಆ ಪ್ರಶಸ್ತಿ ಸ್ವೀಕರಿಸಿ ಫಾ. ಮಾರ್ಕ್ ಅವರು ಮನದಾಳದ ಮಾತುಗಳನ್ನಾಡಿದರು.
ಅನ್ಯಾಯವನ್ನು ಎಂದಿಗೂ ಸಹಿಸದ ಫಾ. ವಾಲ್ಡರ್ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡುವಾಗ ತನ್ನನ್ನು ಕಾಡುವ ಎರಡು ಪ್ರಶ್ನೆಗಳನ್ನು ಜನರ ಮುಂದಿರಿಸಿದರು. ಅದರಲ್ಲಿ ಎರಡನೆಯದು, “ಕೊಂಕಣಿ ಲೇಖಕರ, ಭಾಷೆ, ಸಾಹಿತ್ಯ ಮತ್ತು ಸಮುದಾಯದ ಏಳಿಗೆಗಾಗಿ, ಒಳಿತಿಗಾಗಿ ಹಲವು ವರ್ಷಗಳಿಂದ ಕಟಿಬದ್ಧವಾಗಿ ದುಡಿಯುತ್ತಿದ್ದ ಕೊಂಕಣಿ ಲೇಖಕರ ಒಕ್ಕೂಟಕ್ಕೇನಾಗಿದೆ?” ಎಂದು ಕೇಳಿಯೇ ಬಿಟ್ಟರು.
ಕೆರಳಿತು ನೋಡಿ ಘಟಸರ್ಪ! ‘ಕುಂಬಳಕಾಯಿ ಕಳ್ಳ…. ಎಂದಾಕ್ಷಣ ಹೆಗಲು ಮುಟ್ಟಿ ನೋಡಿದ’ ಎನ್ನುವ ಗಾದೆಯಂತೆ, ಕೊಂಕಣಿ ಲೇಖಕರ ಒಕ್ಕೂಟವನ್ನು ಹೊಕ್ಕು ಅದನ್ನು ‘ಸಂಸ್ಕಾರ’ ಮಾಡಿದ್ದ ಇದೇ ಹೆನ್ರಿ ಮೆಂಡೋನ್ಸಾನಿಗೆ ತಡೆಯಲಾಗಲಿಲ್ಲ. ಫಾ. ವಾಲ್ಡರ್ ಅವರು ಲೇಖಕರ ಒಕ್ಕೂಟದ ಅಗತ್ಯ, ಮಹತ್ವ, ಅದರಿಂದಾಗುವ ಒಳಿತಿನ ಕಾರಣಕ್ಕಾಗಿ ಅದು ಇರಬೇಕಿತ್ತು, ಬಾಳಬೇಕಿತ್ತು ಎಂಬ ಕಾಳಜಿಯಿಂದ ಮಾತನಾಡಿದ್ದರು. ಆದರೆ ಈ ಕೃತಘ್ನ, ಮತಿವಿಕಲ ಚಿಂತಕನಿಗೆ ಅದನ್ನು ಜೀರ್ಣಿಸಿಕೊಳ್ಳಲಾಗಲಿಲ್ಲ.
ಉತ್ತರವಾಗಿ, ತನ್ನಿಂದಾದ ತಪ್ಪನ್ನು ಒಪ್ಪುವ, ಸರಿಪಡಿಸುವ ಗೋಜಿಗೆ ಹೋಗುವುದನ್ನು ಬಿಟ್ಟು, ಈತ ಫಾ. ವಾಲ್ಡರ್ ಅವರನ್ನೇ ಫೋನಿನಲ್ಲಿ ಸಮಾರು ಅರ್ಧ ಗಂಟೆ ಬೆದರಿಸಿ, ನಿಂದಿಸಿ, ಹೀಯಾಳಿಸಿ ಬೆವರಿಳಿಸಿದ. 78 ವರ್ಷದ ಹಿರಿಯ ವೃದ್ಧರನ್ನು, ಕೊಂಕಣಿಯಷ್ಟೇ ಅಲ್ಲದೆ ಇತರ ಸಮುದಾಯಗಳವರಿಂದಲೂ ಪ್ರೀತಿ ಪಾತ್ರರಾಗಿದ್ದ ಸಾಧಕರನ್ನು, ಅದೂ ಓರ್ವ ಧರ್ಮಗುರುಗಳನ್ನು ಹೀಗೆ ಅವಾಚ್ಯವಾಗಿ, ಅಶ್ಲೀಲವಾಗಿ, ಕೊಳಕಾಗಿ ನಿಂದಿಸುತ್ತಾನೆಂದರೆ ಅಂಥಾ ವ್ಯಕ್ತಿಯ ಮನಸ್ಸು ಎಷ್ಟು ವಿಷಮಯವಾಗಿರಬೇಕು, ಕಠೋರವಾಗಿರಬೇಕು!?
ಈ ಎಲ್ಲಾ ವಿಚಾರಗಳು ಮೆಲ್ವಿನ್ ಅವರಿಗೆ ಗೊತ್ತಿಲ್ಲದವು ಏನಲ್ಲ. ಸದಾ ಕೊಂಕಣಿ ಸಾಹಿತ್ಯ ಮತ್ತು ಜನರ ಬಗ್ಗೆ ಯಾವಾಗಲೂ ಮೊಸಳೆ ಕಣ್ಣೀರು ಸುರಿಸುತ್ತಾ, ಕಪಟ ಮಾತುಗಳನ್ನು ಆಡುತ್ತಿರುವ ಈತನಿಗೆ, ಕೊಂಕಣಿಯ ನಡೆದಾಡುವ ಸಂತನೆಂದು ಖ್ಯಾತಿ ಹೊಂದಿರುವ, ಕೊಂಕಣಿ ಸಾಹಿತ್ಯ, ಭಾಷೆ, ಪತ್ರಿಕೋದ್ಯಮ, ಸಮಾಜಕ್ಕೆ ಅರ್ಧ ಶತಮಾನಕ್ಕಿಂತಲೂ ಹೆಚ್ಚು ಕಾಲ ಹೋರಾಡಿದ, ಅಗಣಿತ ಸೇವೆ ಸಲ್ಲಿಸಿದ ಮಹಾನ್ ಸಾಧಕ, ಗುರುಗಳನ್ನು ಓರ್ವ ದುಷ್ಟ ವ್ಯಕ್ತಿ ನಿಕೃಶ್ಟವಾಗಿ ನಿಂದಿಸಿ ಅವಮಾನಿಸಿದ್ದಕ್ಕೆ ಕಿಂಚಿತ್ತೂ ಪಶ್ಚಾತ್ತಾಪ, ಬೇಸರವಿಲ್ಲವೆಂದರೆ ಏನರ್ಥ?! ಅಷ್ಟು ಸಾಕಾಗದ್ದಕ್ಕೆ, ಹಾಗೆ ಮಾಡಿದ ದುರುಳನನ್ನು ನಾಚಿಕೆಯಿಲ್ಲದೆ, ಅಂಜಿಕೆಯಿಲ್ಲದೆ ಸಮರ್ಥಿಸುತ್ತಾನೆಂದರೆ ಏನರ್ಥ?
ಹಾಂ. ಈ ತ್ರಿಮೂರ್ತಿಗಳಲ್ಲಿ ಮತ್ತೊಬ್ಬನಾದ, ಪರರನ್ನು ಅತ್ಯಂತ ನೀಚ, ಕೊಳಕು ಭಾಷೆಯಲ್ಲಿ ನಿಂದಿಸುವುದರಲ್ಲಿ, ಬೈಯುವುದರಲ್ಲಿ ಚತುರನಾದ, ಪ್ರಾವೀಣ್ಯನಾದ ವಿಲ್ಸನ್ ಕಟೀಲ್ ಸಹ ಹೀಗೆ ಮಧ್ಯರಾತ್ರಿ ಹೊತ್ತು, ಸುರಾಪಾನದಲ್ಲಿ ಸ್ನಾನ ಮಾಡಿ ತಲೆ ಗಿರ್ರೆನ್ನುವ ಹೊತ್ತಿನಲ್ಲಿ ಹಲವು ಹಿರಿಯ ಸಾಹಿತಿ, ಬರಹಗಾರರನ್ನು ಲೇವಡಿ ಮಾಡಿ, ನಿಂದಿಸಿ, ಕೀಳಾಗಿ ಬೈದಿದ್ದೂ ಒಂದು ದಾಖಲೆ. ಈತನ ಇಂತಹ ಕಚ್ಚೆಹರುಕತನವನ್ನು ಕೆಲವರು ರೆಕಾರ್ಡ್ ಮಾಡಿದ್ದರಿಂದ ಈತನ ಈ ‘ಸಾಹಿತ್ಯ ಸಂವಾದ’ದ ಪರಿಣತಿ ಜನರಿಗೆ ಗೊತ್ತಾಯಿತು. ಒಬ್ಬ ಕಾರ್ಯಕರ್ತನಿಗೆ ಫೋನ್ ಮಾಡಿ ಆತನನ್ನು ಅವಾಚ್ಯವಾಗಿ ನಿಂದಿಸಿ, ‘ನಿನ್ನ ಹೆಂಡತಿ ಮಗಳಂದಿರನ್ನು ಭೋಗಿಸುತ್ತೇನೆಂದು’ ರೌದ್ರಾವತಾರ ತಳೆದಾಗ ಆತ ಅದನ್ನು ರೆಕಾರ್ಡ್ ಮಾಡಿ ಕದ್ರಿ ಪೊಲೀಸ್ ಸ್ಟೇಶನ್ನಿಗೆ ಕಂಪ್ಲೇಂಟ್ ಕೊಟ್ಟು ದಿನವಿಡೀ ಕಸ್ಟಡಿಯಲ್ಲಿ ‘ಸಾಹಿತ್ಯ ಮಂಥನ’ ಮಾಡಿದ್ದು ಈತನ ಅಪ್ರತಿಮ ಸಾಧನೆ, ಮುರಿಯಲಾಗದ ದಾಖಲೆ!
ಠೀಕೆ ಮಾಡುವ ಕಸುಬನ್ನು ಬಿಟ್ಟು ಎಚ್ಚೆಮನು ಸ್ವತಃ ಓರ್ವ ಸಾಹಿತಿಯಾಗಿದ್ದು, ಅದಾಗಲೇ ಕ್ರಿಯಾಶೀಲವಾಗಿದ್ದ, ವ್ಯವಸ್ಥಿತವಾಗಿದ್ದ ಒಂದು ಸಾಹಿತ್ಯಿಕ ಸಂಘಟನೆಯನ್ನು ಮತ್ತಷ್ಟು ಬೆಳೆಸುವುದನ್ನು ಬಿಟ್ಟು, ಆ ಮೂಲಕ ಸಾಹಿತ್ಯ, ಭಾಷೆಯ ಸಮಗ್ರ ಬೆಳವಣಿಗೆ, ಅಭಿವೃದ್ಧಿಯನ್ನು ಕೈಗೊಳ್ಳುವುದನ್ನು ಬಿಟ್ಟು ಅದರ ಸದಸ್ಯರಿಗೆ ಚಿತ್ರಹಿಂಸೆ ನೀಡಿ, ಸಾರ್ವಜನಿಕವಾಗಿ ಅವಮಾನಿಸಿ ಕೊನೆಗೆ ಆ ಸಂಘಟನೆಯನ್ನೇ ಬಲಿ ಪಡೆದ ಈ ವಿಧ್ವಂಸಕ ವ್ಯಕ್ತಿ ಎಂತಹ ಧೂರ್ತನೆಂದರೆ, ಕೊಂಕಣಿಯ ಸರ್ವ ವಿಧದ ಏಳಿಗೆಗಾಗಿ ಅವಿರತ ಶ್ರಮಿಸುತ್ತಿರುವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ, ಮಾಂಡ್ ಸೊಭಾಣ್‍ನ ಎರಿಕ್ ಒಝೆರಿಯೊ, ಹಿರಿಯ ಸಾಹಿತಿ ಡೊ. ಎಡ್ವರ್ಡ್ ನಜರೆತ್ ಮತ್ತಿತರರನ್ನು ಅಕ್ರಮವಾಗಿ, ಅನ್ಯಾಯಯುತವಾಗಿ ಸದೆಬಡಿಯಲು ನಿರಂತರವಾಗಿ ಪ್ರಯತ್ನಿಸಿದ್ದೇ ಅಲ್ಲದೆ, ತಾನೇ ಸರಿ, ಸತ್ಯಸಂಧನೆಂದು ಬಿಂಬಿಸಲು ತನ್ನ ಕೆಲ ಸಂಗಾತಿಗಳನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಂಡು ಬಂದಿದ್ದಾನೆ.
ಇಂತಹ, ಇದಕ್ಕಿಂತಲೂ ಮಾರಕವಾದ, ನೂರಾರು ನಿದರ್ಶನಗಳು ಕೊಂಕಣಿಯ ಕಾರ್ಯಕರ್ತರಿಗೆಲ್ಲರಿಗೂ ತಿಳಿದಿವೆ. ಅಷ್ಟಿದ್ದೂ ತಾವೇ ಪ್ರಾಮಾಣಿಕರು, ಸಹೃದಯರು, ಸಂಭಾವಿತರೆಂದು ಈ ದುರುಳರು ಹೇಳಿಕೊಳ್ಳುತ್ತಾರೆಂದರೆ ಅವರ ‘ಇಂಟೆಗ್ರಿಟಿ’ ಎಂತಹದಿರಬಹುದು? ಮತ್ತು ಇಂತಹವರ ನೀಚತನವನ್ನು ತಿಳಿದುಕೊಂಡ ಮೇಲೂ ಅವರೊಡನೆ ಬಹಿರಂಗವಾಗಿ ಗುರುತಿಸಿಕೊಳ್ಳುವವರನ್ನು ಏನೆಂದು ಕರೆಯಬೇಕು?
ಇತ್ತೀಚೆಗೆ ಸಾಹಿತಿ ಮೆಲ್ವಿನ್ ರೊಡ್ರಿಗಸ್ ಅವರು ಸಾರ್ವಜನಿಕವಾಗಿ ಒಂದು ಭಾಷಣದಲ್ಲಿ (ಅದರ ಆಡಿಯೋ ಎಲ್ಲೆಡೆ ಪ್ರಸಾರವಾಗಿದೆ), “ಕೊಂಕಣಿ ಬರಹಗಾರರು ತತ್ತರಿಸಿ ಹೋಗಿದ್ದಾರೆ, ಭೀತಿಗೊಳಪಟ್ಟಿದ್ದಾರೆ. ಕೊಂಕಣಿಯಲ್ಲಿನ ವಾತಾವರಣವನ್ನು ಕುಲಗೆಡಿಸಲಾಗಿದೆ. ಈ ಅನ್ಯಾಯವನ್ನು ವಿರೋಧಿಸಬೇಕಿದೆ, ಅದರ ವಿರುದ್ಧ ಹೋರಾಡಬೇಕಿದೆ” ಎಂದು ಮೊಸಳೆ ಕಣ್ಣೀರು ಸುರಿಸುವ ನಾಟಕವಾಡಿದ್ದಾರೆ.
‘ನಾಟಕ’ ಶಬ್ದವೇಕೆಂದರೆ, ಇದೇ ವ್ಯಕ್ತಿ ಮುಕ್ತವಾಗಿ ಬೆಂಬಲಿಸುತ್ತಿರುವುದು, ಸಹಕರಿಸುತ್ತಿರುವುದು, ಯಾರು ಕೊಂಕಣಿಯ ಟೆರರಿಸ್ಟ್‍ಗಳಾಗಿದ್ದಾರೋ ಅವರನ್ನು! ಹೌದು. ಅತ್ಯಂತ ನೀಚ, ಕೀಳು ಕೃತ್ಯಗಳನ್ನು ವರ್ಷಗಳಿಂದ ನಡೆಸುತ್ತಾ ಬಂದು, ಕೊಂಕಣಿಯ ಸಾಧಕ, ಸಾಹಿತಿ, ಕಲಾವಿದರೆಲ್ಲರಿಗೂ ದುಸ್ವಪ್ನವಾಗಿ ಕಾಡಿದ, ಮಾನಹಾನಿ ಮಾಡಿದ, ಕಷ್ಟ ನಷ್ಟಗಳನ್ನು ತಂದೊಡ್ಡಿದ ವಿಧ್ವಂಸಕರನ್ನೇ ಈ ‘ಕವಿವರ್ಯ’ ಸಾರ್ವಜನಿಕವಾಗಿ ಬೆಂಬಲಿಸುತ್ತಾರೆಂದರೆ ಅವರ ‘ಸ್ತರ’ ಎಂತಹದ್ದಿರಬಹುದೆಂದು ನೀವೇ ಅಂದಾಜಿಸಿ.
ಇನ್ನೊಂದು ವಿಪರ್ಯಾಸವೆಂದರೆ ಕಪಟತನ, ನಯವಂಚಕತನದಲ್ಲಿ ಚಾಂಪಿಯನ್ ಎನ್ನಿಸಿಕೊಂಡಿರುವ ಈ ಎಚ್ಚೆಮ್ ಪೆರ್ನಾಲನು ಕಟ್ಟಿಕೊಂಡಿರುವ ‘ಕೊಂಕಣಿ ಬರಹಗಾರರು ಮತ್ತು ಕಲಾವಿದರ ಸಂಘಟನೆ’. ಇದುವರೆಗೆ ನಿರಂತರವಾಗಿ ಕೊಂಕಣಿ ಬರಹಗಾರರು, ಕಲಾವಿದರು ಮತ್ತಿತರರನ್ನು ನಿಂದಿಸಲು, ಅವಮಾನಿಸಲು, ದಮನ ಮಾಡಲು ಮತ್ತು ಸಂಘಟನೆ, ಸಂಸ್ಥೆಗಳನ್ನು ನಿರ್ಮೂಲನೆ ಮಾಡಲು ಪಣತೊಟ್ಟವನಂತೆ ಕಾರ್ಯತತ್ಪರನಾಗಿದ್ದ ಈ ವ್ಯಕ್ತಿ ತನ್ನ ಮತ್ತಷ್ಟು ದುಷ್ಟ ಯೋಜನೆಗಳನ್ನು ಜಾರಿಗೊಳಿಸಲು ಆರಂಭಿಸಿದ್ದೇ ಈ ಬೇನಾಮಿ, ಕಾಲ್ಪನಿಕ ಸಂಘಟನೆ! ಮತ್ತೊಂದು ಪ್ರಮುಖ ಅಂಶವೆಂದರೆ, ಈತ ಪರಮ ಹೇಡಿಯಾಗಿದ್ದು ಯಾವತ್ತೂ ಮುಂದೆ ಬಂದು ಮಾತನಾಡುವವನಲ್ಲ, ಹೋರಾಡಿದವನಲ್ಲ. ತನ್ನ ಸುಳ್ಳು, ವಿಕೃತ, ವಿಷಮಯ ಹೇಳಿಕೆ, ವಾದಗಳನ್ನು ನಂಬುವ ಅನಾಮಿಕರನ್ನು ದುರ್ಬಳಕೆ ಮಾಡಿ, ಅವರನ್ನು ಗುರಾಣಿಗಳಂತೆ ಬಳಸುವುದರಲ್ಲಿ ಈತ ನಿಸ್ಸೀಮ. ಅದೇ ಕಾರಣಕ್ಕಾಗಿ ಈತ ಕೊಂಕಣಿ ಬರಹಗಾರರ ಮತ್ತು ಕಲಾವಿದರ ಸಂಘಟನೆಯೆಂಬ ಕಾಲ್ಪನಿಕ ಸಂಸ್ಥೆಯನ್ನು ತನ್ನ ಸಂಗಾತಿಗಳೊಂದಿಗೆ ಸ್ಥಾಪಿಸಿ, ಕೇವಲ ಕೊಂಕಣಿ ವ್ಯಕ್ತಿ ಮತ್ತು ಸಂಸ್ಥೆಗಳನ್ನು ನಾಶಗೊಳಿಸುವ ಕಾರ್ಯ ಯೋಜನೆಯನ್ನು ಹಮ್ಮಿಕೊಂಡಿದ್ದಾನೆ.
ಇದಕ್ಕೆಲ್ಲಾ ಮುಕುಟಮಣಿಯಂತೆ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದುಕೊಂಡಿದ್ದೇನೆಂದು ತನ್ನ ಭಟ್ಟಂಗಿಗಳಿಂದ ವಾಚಾಮಗೋಚರವಾಗಿ ಹೊಗಳಿಸಿಕೊಳ್ಳುವ ಕವಿ ಮೆಲ್ವಿನ್ ರೊಡ್ರಿಗಸ್ ಅವರು ಈ ಎಲ್ಲಾ ಕುಕೃತ್ಯಗಳಿಗೆ ಬೆಂಗಾವಲಾಗಿದ್ದಾರೆಂದು ಅವರೇ ಸ್ವತಃ ಘೋಷಿಸಿಕೊಂಡಿರುವುದು ಮತ್ತೊಂದು ವಿಡಂಬನೆ! (ಅದರ ದಾಖಲೆಗಳೆಲ್ಲವೂ ನಮ್ಮ ಬಳಿ ಇವೆ).
ಇಂಥವರಿಂದ ಕೊಂಕಣಿ ಭಾಷೆ, ಸಾಹಿತ್ಯ, ಸಮುದಾಯ ಹೇಗೆ ಉದ್ಧಾರವಾಗುತ್ತದೆಯೋ, ಆರೋಗ್ಯದಿಂದಿರುತ್ತದೆಯೋ ದೇವರೇ ಬಲ್ಲ!
ತನ್ನ ಪತ್ರಿಕೆಗೆ ಒಡ್ಡಿದ್ದ ಅಡೆತಡೆಗಳನ್ನು ಯಶಸ್ವಿಯಾಗಿ ಭೇದಿಸಿ, ನ್ಯಾಯದಿಂದ ಹೋರಾಡಿ, ದೆಹಲಿಯಲ್ಲಿ ಜಯವನ್ನು ಗಳಿಸಿ ಬಂದ ‘ದಿರ್ವೆಂ’ ಪತ್ರಿಕೆಯ ಸಂಪಾದಕ ಜೋನ್ ಮೋನಿಸ್ ಅವರನ್ನು ಸಂಪರ್ಕಿಸಿದಾಗ, “ನಮ್ಮ ಪತ್ರಿಕೆಯನ್ನು ಹಣಿಯಲು ಎಚ್ಚೆಮ್ ಪೆರ್ನಾಲ್ ಮತ್ತವರ ಬಳಗ ಅಕ್ರಮ ಹಾದಿಯನ್ನು ಬಳಸಿ ಅದರಲ್ಲಿ ತಾತ್ಕಾಲಿಕವಾಗಿ ಜಯಶಾಲಿಯಾಗಿತ್ತು. ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ಆಧಾರರಹಿತ ಆರೋಪಗಳನ್ನು ಮುಂದೊಡ್ಡಿ, ‘ಒತ್ತಡ’ವನ್ನು ಬಳಸಿ ತನ್ನ ಪತ್ರಿಕೆಯನ್ನು ನಿಲ್ಲಿಸುವ ಪ್ರಯತ್ನ ಮಾಡಲಾಗಿತ್ತು. ಅದೆಲ್ಲವೂ ಕಾನೂನು ವಿರೋಧಿಯಾಗಿತ್ತು. ಅನ್ಯಾಯ ಮಾಡುವವರ ವಿರುದ್ಧ ಹೋರಾಟ ನಿರಂತರವಾಗಿ ಜಾರಿಯಲ್ಲಿಡುತ್ತೇನೆ, ನಷ್ಟವನ್ನುಂಟು ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸುತ್ತೇನೆ” ಎಂದಿದ್ದಾರೆ.
ವಿಶೇಷವೆಂದರೆ ಇದುವರೆಗೆ ಅನಿಶ್ಚಿತ ಮನಸ್ಸಿನಲ್ಲಿದ್ದ ಕೊಂಕಣಿಯ ಬಹುತೇಕರು ಕೊಂಕಣಿಗೆ ನೈಜವಾಗಿ ಅನ್ಯಾಯ ಮಾಡುತ್ತಿರುವುದು ಯಾರೆಂಬುದನ್ನು ಕಂಡುಕೊಂಡಿದ್ದಾರೆ. ಅವರೆಲ್ಲಾ ಇದೀಗ ಒಂದಾಗಿ ಕೊಂಕಣಿಯನ್ನು ಕಾಡುವ ಪೀಡೆ, ಶತ್ರುಗಳ ವಿರುದ್ಧ ಹೋರಾಡಲು ಒಂದಾಗಿದ್ದಾರೆ. ಕೊಂಕಣಿಯ ಹಿತದೃಷ್ಟಿಯಿಂದ ಈ ಬೆಳವಣಿಗೆ ಶ್ರೇಯಸ್ಕರ.
ಕೊಂಕಣಿ ಭಾಷೆ, ಸಾಹಿತ್ಯ ಮತ್ತು ಪತ್ರಿಕೋದ್ಯಮಕ್ಕೆ ತನ್ನದೇ ವಿಶಿಷ್ಟ ಕೊಡುಗೆ ನೀಡುತ್ತಾ, ಯಾವ ಕೊಂಕಣಿ ಪತ್ರಿಕೆಯೂ ತಲುಪದ ಮನೆಗಳನ್ನು ಹುಡುಕಿ, ತಲುಪಿ ಅವರಲ್ಲಿ ಕೊಂಕಣಿಯ ಪ್ರೀತಿ ಹೆಚ್ಚಿಸಿದ ‘ದಿರ್ವೆಂ’ ಪತ್ರಿಕೆಯನ್ನು ಸಾಯಿಸಲು ಕೆಲ ಕೊಂಕಣಿ ‘ಸಾಹಿತಿ’ಗಳು ಪ್ರಯತ್ನಪಟ್ಟಿದ್ದನ್ನು ತಿಳಿದು ಸಾವಿರಾರು ಓದುಗರು ಮತ್ತು ಬರಹಗಾರರು, ಕಲಾವಿದರು, ಕಾರ್ಯಕರ್ತರೆಲ್ಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸತ್ಯಕ್ಕೆ ಗೆಲುವಾಗಿ, ಮತ್ತೆ ‘ದಿರ್ವೆಂ’ ಪತ್ರಿಕೆ ಸರಾಗವಾಗಿ ಪ್ರಕಟವಾಗುವುದನ್ನು ಕಂಡು ಅವರೆಲ್ಲಾ ಹರ್ಷ ವ್ಯಕ್ತಪಡಿಸಿದ್ದಾರೆ.
ಕೊಂಕಣಿ ಪತ್ರಿಕೋದ್ಯಮದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ, ಭಾಷೆಯ, ಸಮುದಾಯದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವ ‘ದಿರ್ವೆಂ’ ಪತ್ರಿಕೆಗೆ ಒಳಿತಾಗಲಿ ಎಂದು ‘ಬುಡ್ಕುಲೊ’ ಆಶಿಸುತ್ತದೆ. ಅನ್ಯಾಯ, ಅನೀತಿಯ ವಿರುದ್ಧ ಧೃತಿಗೆಡದೆ ನ್ಯಾಯಯುತವಾಗಿ ಹೋರಾಡಿದ ಸಂಪಾದಕ ಜೋನ್ ಮೋನಿಸ್ ಅವರಿಗೆ ಅಭಿನಂದನೆಗಳು. ಅದೇ ರೀತಿ ಭಾಷೆ, ಸಾಹಿತ್ಯದ ಹೆಸರಿನಲ್ಲಿ ಯಾರೂ ಊಹಿಸಲೂ ಸಾಧ್ಯವಿಲ್ಲದ ನೀಚ, ವಿನಾಶಕಾರಿ ಕೃತ್ಯಗಳಲ್ಲಿ ತೊಡಗಿರುವ ಕೆಲ ಕೊಂಕಣಿ ‘ಸಾಹಿತಿ’ಗಳಿಗೆ ದೇವರು ಸದ್ಬುದ್ಧಿಯನ್ನು ಕರುಣಿಸಲಿ ಎಂದು ಬಯಸುತ್ತೇವೆ.
ಸಾರ್ವಜನಿಕರ ಗಮನಕ್ಕೆ: ಈ ವರದಿಯಲ್ಲಿ ಉಲ್ಲೇಖಿಸಲಾದ ಪ್ರತಿಯೊಂದು ದೃಷ್ಟಾಂತ, ಘಟನೆ, ನಿದರ್ಶನಗಳಿಗೆ ಸೂಕ್ತ ದಾಖಲೆಗಳು, ಸಾಕ್ಷ್ಯಾಧಾರಗಳು ನಮ್ಮಲ್ಲಿವೆ. ಇಲ್ಲಿನ ಎಲ್ಲಾ ವಿಷಯ, ಉಲ್ಲೇಖಗಳು ಕೇವಲ ಸಾರ್ವಜನಿಕ ಸಂಗತಿಗಳಿಗೆ ಮಾತ್ರ ಸಂಬಂಧಿಸಿವೆ. ಕೇವಲ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಮಾತ್ರ ಇಲ್ಲಿ ಚರ್ಚಿಸಲಾಗಿದೆ, ಯಾವುದೇ ನಿರ್ದಿಶ್ಟ ವ್ಯಕ್ತಿಗೆ ಸಂಬಂಧಿಸಿದ್ದಲ್ಲವೆಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ.
ಫೇಸ್‍ಬುಕ್ಕಿನ ಸಮರ ಹಾಗೂ ಪತ್ರಿಕೆಯಲ್ಲಿ ಮೂತ್ರವಿಸರ್ಜನೆ!
ಲೇಖಕರ ಒಕ್ಕೂಟದ ಮರಣ ಶಾಸನ?
ಇಗರ್ಜಿಯ ಎದುರುಗಡೆ ಸುಸಂಸ್ಕೃತ ನುಡಿಮುತ್ತುಗಳ ಸುರಿಮಳೆ!
ಕೊನೆಗೊಂದು ಮನರಂಜನೆ! ಇಲ್ಲಿನ ಆಡಿಯೋ ಕೇಳಿ ಆನಂದಿಸಿ. ಇದು ಯಾರು, ಯಾಕಿವರ ಜುಗಲ್ಬಂದಿ ಎಂಬುದು ಮುಖ್ಯವಲ್ಲ. ಆದರೆ ಇದರಲ್ಲಿ ಮಹಾನ್ ‘ಸಾಹಿತಿ’ಯೊಬ್ಬರು ತನ್ನ ಅಸೀಮ ಶಬ್ಬಭಂಡಾರವನ್ನು ಹೇಗೆ ನಿರರ್ಗಳವಾಗಿ ಪ್ರವಹಿಸಿದ್ದಾರೆ ಎಂಬುದನ್ನು ಅದ್ಭುತವಾಗಿ ಆಲಿಸಿಕೊಳ್ಳುವುದೇ ಒಂದು ಅನೂಹ್ಯ ಅನುಭವ! ಈತ ಎಂಥಾ ಪ್ರತಿಭಾವಂತ ಭಾಷಾ ಪಂಡಿತ, ಪ್ರಚಂಡ ವಾಗ್ಮಿ, ನಿಪುಣ ಮಾತುಗಾರ, ಪದಪುಂಜಗಳ ಸೊಗಸುಗಾರ ಎಂಬುದು ನಿಜಕ್ಕೂ ಹಬ್ಬದಂತ ಸುಖ! ಇಂಥ ಹಲವು ಜುಗಲ್ಬಂದಿಗಳೂ ಮತ್ತು ಏಕ ಮುಖ ಪ್ರವರಗಳು ಹೀಗೆ ‘ಬಂಧಿ’ಯಾಗಿ ದಾಖಲೆಗಳ ಸಂಗ್ರಾಹಾಗಾರದಲ್ಲಿ ಅಡಕವಾಗಿವೆಯಂತೆ! ಇಂತಹ ಅತ್ಯದ್ಭುತ ಪ್ರತಿಭೆಗಳು ಭಾಷೆಗೆ, ಸಾಹಿತ್ಯಕ್ಕೆ, ಸಮಾಜಕ್ಕೆ, ದೇಶಕ್ಕೆ ಎಂಥಾ ‘ಬಂಡವಾಳ’ವಲ್ಲವೆ?!
WONDERFUL ARTICLE DEAR MR DONY ITS A WELL WRITTEN I AM SURE IT IS GOING TO BE GREAT HELP
Kaleda kelavu samayadinda Konkaniyalli nadeyuthidda hagga jaggatakke ondu anthima roopa bandidhe yendu nambuthene. Vishavanne thanna udaradalli itta yavude praani kacchidaaga vishave horabaruvudu allade mutthu athava haralugalu alla. Illi nadedaddu ade kathe. Mangaloorina konkani sahithya valayadalli Dirvem pathrike yalli dudidu….anthimavaagi thamma theete theerisikondu ade pathrikeyalli vyakthigala chaaritrya hanana maadi…sansthegala meloo eragi….vyakthilagala virudha bekabitti jaredu thamma visha kakkiddu nimma pathrikeyalli swashvaagi thilisiddeeri. EE idee episodinalli nanage athee besaravadaddu ondu vishya. Ide DIRVEM pathrikeya sampadakaraada Sri. J A Monis avara puthri avaghadakke siluki marana hondidaagalu ee visha janthugalige maanaveeya neleyalli yadaroo kanikara huttade iddudu duraadrashtakara.