Latest News

ಬುದ್ಧಿವಂತರ ರಾಜಧಾನಿ; ಎಡವಟ್ಟು ರಸ್ತೆಗಳ ಪುಣ್ಯಕ್ಷೇತ್ರ

ಡೊನಾಲ್ಡ್ ಪಿರೇರಾ ಬೆಳ್ತಂಗಡಿ

Posted on : August 21, 2015 at 4:12 PM

Dear Readers, we are running a free media with high democratic values. Without subscriptions, advertisements & having no patrons or god fathers, we depend on your support to run this pro people, impartial, unbiased and courageous media. Kindly support us by your generous help.
Our Google Pay Number - 8277362399

Our Bank Details:
Name: Donald Pereira
Bank: Canara Bank
A/C No: 0977101022194
Hampankatta Branch, Mangaluru 575 001
IFSC Code: CNRB0000612
MICR Code: 575015009

Budkulo_Mangaluru_Ground Report_Inner_02ಕರಾವಳಿಯ ಜನ ಮೀನು ತಿಂದು ಬುದ್ಧಿವಂತರಾಗಿದ್ದಾರೆ ಎಂದು ಘಟ್ಟದ ಮೇಲಿನ ಜನ ಆಡಿಕೊಳ್ಳುವುದುಂಟು. ಮೀನು ತಿನ್ನುವವರೂ ತಿನ್ನದವರೂ, ಒಟ್ಟಿನಲ್ಲಿ ದಕ್ಷಿಣ ಕನ್ನಡಿಗರು ಬಹಳ ಚತುರರು ಎಂಬುದಕ್ಕೆ ಇತರರು ಹೇಳಿಕೊಳ್ಳುವ ಮಾತಿದು. ಇಲ್ಲಿನ ಜನರು ಬುದ್ಧಿವಂತರು ಎಂಬುದೇನೋ ಸರಿ. ಆದರೆ ಈ ಬುದ್ಧಿವಂತರನ್ನು ಯಾಮಾರಿಸುವುದು, ವಂಚಿಸುವುದು ಅತ್ಯಂತ ಸುಲಭ. ಬೇಕಾದರೆ ಇಲ್ಲಿನ ಪತ್ರಿಕೆಗಳಲ್ಲಿ ಪ್ರತಿದಿನವೆಂಬಂತೆ ವರದಿಯಾಗುವ ಘಟನಾವಳಿಗಳನ್ನು ನೋಡಿದರೆ ತಿಳಿಯುತ್ತದೆ.

ಅದೇ ರೀತಿ ಇಲ್ಲಿನ ಆಡಳಿತವೂ ಜನರನ್ನು ಯಾಮಾರಿಸುತ್ತದೆ! ಗೊತ್ತುಂಟೋ?

ಮಂಗಳೂರು ನಗರಪಾಲಿಕೆಯ ವ್ಯಾಪ್ತಿಯೆಂಬುದೊಂದಿದೆ. ‘ಅಭಿವೃದ್ಧಿ’ಗೊಳಿಸುವ ನೆಪದಲ್ಲಿ ಇಲ್ಲಿನ ರಸ್ತೆಗಳನ್ನು ಆಡಳಿತ ಹೇಗೆ ನುಂಗಿ ನೀರು ಕುಡಿದಿದೆ ಎಂಬುದನ್ನು ತಿಳಿದರೆ ಯಾರೂ ನಿಬ್ಬೆರಗಾಗುವುದು ಖಚಿತ.

ಹೇಳಿಕೊಳ್ಳಲಿಕ್ಕೆ ಕರಾವಳಿಯಲ್ಲಿ ಹೇರಳ ಮಳೆ ಎಂಬ ನೆಪ ಯಾವತ್ತೂ ಇದ್ದದ್ದೇ. ಮಾಡಿದ ಕಾಮಗಾರಿ ಸಮರ್ಪಕವಾಗಿದ್ದಿದ್ದರೆ ಮಳೆಯಲ್ಲ, ಕುಂಭದ್ರೋಣದ ಪ್ರವಾಹ ಸುರಿದರೂ ಡಾಮಾರಿನ ರಸ್ತೆ ಕೆಟ್ಟು ಹೋಗುವುದಿಲ್ಲ. ಆದರೆ ಒಂದೇ ಒಂದು ಬಾರಿ ಇಲ್ಲಿನ ಅಧಿಕಾರಿಗಳಿಗಾಗಲೀ, ರಾಜಕಾರಣಿಗಳಿಗಾಗಲೀ ಅಥವ ಕಾಮಗಾರಿ ನಿರ್ವಹಿಸುವವರಿಗಾಗಲೀ ರಸ್ತೆ ನಿರ್ಮಾಣ ಮಾಡುವಾಗ ಅಥವಾ ರಿಪೇರಿ ಮಾಡುವಾಗ ರಸ್ತೆಯು ಉತ್ತಮವಾಗಿ ಉಳಿಯಬೇಕೆಂಬ ಇರಾದೆ ಇದ್ದಿದ್ದೇ ಇಲ್ಲ. ಅವರು ನಡೆಸಿದ ಕಾಮಗಾರಿಯೇ ಇದನ್ನು ದೃಢೀಕರಿಸುತ್ತದೆ.

ಹಾಗಾಗಿ ಪ್ರತಿ ಬಾರಿ ರಸ್ತೆ ಹಾಳಾದದಕ್ಕೆಲ್ಲಾ ದೂಷಿಸುವುದು ಮಳೆಯನ್ನು! ಹೌದು. ಇದು ಕೃತಘ್ನತೆ ಮತ್ತು ದುರುಳತನದ ಪರಮಾವಧಿ. ಆದರೆ ಇಲ್ಲಿನ ಬುದ್ಧಿವಂತ ಜನರು ಎಂದೆಂದಿಗೂ ನಿರ್ಲಿಪ್ತರಂತೆ ಮೌನ ವಹಿಸುತ್ತಾರೆ. ಹಾಗಾಗಿ ರಸ್ತೆಗೆಂದು ಬರುವ ಅನುದಾನ, ಮಾಡುವ ವೆಚ್ಚ ಯಾರ ಜೇಬು ಸೇರುತ್ತದೆಂಬುದನ್ನು ಶಾಲಾ ಮಕ್ಕಳೂ ಅಂದಾಜಿಸಬಹುದು.

Budkulo_Mangaluru_Concrete Roads_A (33) Budkulo_Mangaluru_Concrete Roads_A (32) Budkulo_Mangaluru_Concrete Roads_A (31) Budkulo_Mangaluru_Concrete Roads_A (30) Budkulo_Mangaluru_Concrete Roads_A (29) Budkulo_Mangaluru_Concrete Roads_A (28) Budkulo_Mangaluru_Concrete Roads_A (27) Budkulo_Mangaluru_Concrete Roads_A (26) Budkulo_Mangaluru_Concrete Roads_A (25) Budkulo_Mangaluru_Concrete Roads_A (24)

ಹೀಗಿರುವಾಗ ಪರಿಹಾರವೊಂದು ಹೊಳೆಯಿತು ಇಲ್ಲಿನ ಯಾರಿಗೋ. ಹೊಳೆದದ್ದು ಮಿನುಗಿ ಕಣ್ಣು ಕೋರೈಸುವಷ್ಟು ಪ್ರಖರವಾದಾಗ ಸುರುವಾಯಿತಲ್ಲಾ ಮಂಗಳೂರಿನ ರಸ್ತೆಗಳ ಮೇಲೆ ಕಾಂಕ್ರೀಟ್ ಸುರಿಯಲು. ಮಂಗಳೂರಿನ ವಾತಾವರಣಕ್ಕೆ ಕಾಂಕ್ರೀಟ್ ರಸ್ತೆಗಳೇ ಅಂತಿಮ ಮತ್ತು ಏಕೈಕ ಪರಿಹಾರವೆಂದು ಜಾಹೀರುಪಡಿಸಿ ಕಂಡ ಕಂಡ ರಸ್ತೆಗಳನ್ನು ಆಕ್ರಮಿಸಿ ಹಾಕಿದ ಡಾಮರು ಬುಡ ಸಹಿತ ಕಿತ್ತು ಹಾಕಿ ಕಾಂಕ್ರೀಟ್ ಸುರಿದು ಸಿಮೆಂಟ್ ರಸ್ತೆಗಳನ್ನು ನಿರ್ಮಾಣ ಮಾಡಲಾಯಿತು. ಕಳೆದ ಎರಡು ದಶಕಗಳಿಂದ ಮಂಗಳೂರಿನ ರಸ್ತೆಗಳಿಗೆ ಕಾಂಕ್ರೀಟ್ ಸುರಿಯುತ್ತಲೇ ಇದ್ದಾರೆ ನಗರಪಾಲಿಕೆಯವರು.

ನಿಜಕ್ಕೂ ಇಲ್ಲಿ ಕಾಂಕ್ರೀಟ್, ಸಿಮೆಂಟ್ ಸುರಿದದ್ದಕ್ಕಿಂತಲೂ ಹಣದ ಹೊಳೆ ಹರಿದದ್ದೇ ಹೆಚ್ಚು. ಬಹುಶ ಇದುವರೆಗೂ ಮಂಗಳೂರಿನ ರಸ್ತೆಗಳಿಗೆ ಕಾಂಕ್ರಿಟೀಕರಣಕ್ಕೆಂದು ಜನರ ತೆರಿಗೆಯ ಹಣದಿಂದ ಸುಲಿಗೆಗೈದ ಹಣ ನೂರಾರು ಅಥವಾ ಸಾವಿರ ಕೋಟಿ ರೂಪಾಯಿ ಇರಬಹುದು.

ಆಗಲಿ, ಹಾಗಾದರೂ ನಗರದ ರಸ್ತೆಗಳು ಚೆನ್ನಾಗಿರುತ್ತವಲ್ಲಾ, ಸಮಸ್ಯೆ ಪರಿಹಾರವಾಗುತ್ತದಲ್ಲಾ, ಬೀದಿಗಳೆಲ್ಲಾ ಅಂದ ಚಂದವಾಗಿ ಕಂಗೊಳಿಸುತ್ತವಲ್ಲಾ ಎಂದು ಜನರೂ ಕನಸು ಕಟ್ಟಿಕೊಂಡರು. ಸರಕಾರದ ಪರವಾಗಿಯಂತೂ ರಸ್ತೆಗಳು ಅಭಿವೃದ್ಧಿಗೊಂಡು ಮಂಗಳೂರು ನಗರದ ಪ್ರಮುಖ, ಸದಾ ಪೀಡಿಸುತ್ತಿದ್ದ ಸಮಸ್ಯೆಯೊಂದು ಶಾಶ್ವತವಾಗಿ ಪರಿಹಾರ ಕಾಣುತ್ತದೆಯೆಂದು ಡಂಗುರ ಬಾರಿಸಲಾಯಿತು.

ವಾಸ್ತವವಾಗಿ ಆಗಿದ್ದೇನೆಂದರೆ, ಮೊದಲಿದ್ದ ಸದಾ ಹೊಂಡ ಗುಂಡಿಗಳಿಂದ ಆಕ್ರಮಿಸಲ್ಪಟ್ಟ ರಸ್ತೆಗಳ ಜಾಗದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದ್ದು ಮತ್ತು ಕೆಲವು ಅಡಿಗಳಷ್ಟು ಎತ್ತರಕ್ಕೆ ಏರಿದ್ದು ಬಿಟ್ಟರೆ ವಿಶೇಷ ಬದಲಾವಣೆಗಳೇನೂ ಆಗಲೇ ಇಲ್ಲ. ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ರಸ್ತೆಗಳ ಚಂದ ನೋಡುವಾಗಿನ ಸಂತೋಷ ಅದರ ನೈಜ ಚಿತ್ರಣ ಕಂಡಾಗ ದುಸ್ವಪ್ನವಾಗಿ ಬದಲಾಗುತ್ತದೆ.

ಇನ್ನೊಂದು ವಿಚಾರ ಬಹಳ ಜನರಿಗೆ ತಿಳಿದಿಲ್ಲ. ಅದೇನೆಂದರೆ ಈ ಕಾಂಕ್ರೀಟೀಕರಣಕ್ಕಾಗಿ ಬಳಸಿದ ಹಣವಿದೆಯಲ್ಲ ಅದು ಸಾಲದ ಹಣ. ಪರವೂರಿನವರು ಇಲ್ಲಿನ ರಸ್ತೆಗಳನ್ನೆಲ್ಲಾ ಕಾಂಕ್ರಿಟೀಕರಣ ಮಾಡಲು ಬೇಕಾಗುವ ಕೋಟಿಗಟ್ಟಲೆ ಹಣ ಸರಕಾರ ಅಥವಾ ನಗರಪಾಲಿಕೆಯ ಬಳಿ ಇದೆ ಅಂದುಕೊಂಡಿರಬೇಕು. ಹೇಗೂ ಕರಾವಳಿಯ ಜನರು ಶ್ರೀಮಂತರು, ಇಲ್ಲಿನ ಆಡಳಿತದ ಬಳಿಯೂ ಸಾಕಷ್ಟು ದುಡ್ಡಿನ ಸಂಗ್ರಹವಿದೆಯೆಂದು ಯಾರಾದರೂ ಊಹಿಸಲೂಬಹುದು.

ನಿಜಕ್ಕೂ ಸತ್ಯ ಏನು ಗೊತ್ತಾ?

ಹೀಗೆ ವೆಚ್ಚ ಮಾಡಿದ, ಮಾಡುವ ನೂರಾರು ಕೋಟಿ ಹಣವಿದೆಯಲ್ಲಾ, ಅದು ಬರೀ ಸಾಲ. ಹೌದು. ಎಡಿಬಿಯಿಂದ ತಂದ ಸಾವಿರಾರು ಕೋಟಿ ಸಾಲದ ಹಣದಲ್ಲಿ ಮಂಗಳೂರು ನಗರಪಾಲಿಕೆಗೂ ಪಾಲು ಇದೆ. ಈ ದುಡ್ಡಿನಲ್ಲಿ ಮಂಗಳೂರಿನ ಕಂಡ ಕಂಡ ರಸ್ತೆಗಳನ್ನೆಲ್ಲಾ ಅಗೆದು ಕಾಂಕ್ರಿಟೀಕರಣ ಮಾಡಲಾಗುತ್ತಿದೆ.

ಸಾಲ ಮಾಡಿ ತುಪ್ಪ ತಿನ್ನುವುದೆಂದರೆ ಇದೇ!

ಈ ಸಾಲದ ವಿಚಾರ ಬದಿಗಿರಲಿ. ಅಷ್ಟಕ್ಕೂ ಇಷ್ಟೊಂದು ಹಣ ಸುರಿದು ನಿರ್ಮಿಸಿದ ಕಾಂಕ್ರೀಟ್ ರಸ್ತೆಗಳಾದರೂ ಹೇಗಿವೆ ಎಂದು ಪರಿಶೀಲಿಸಿದರೆ ನಿಜಕ್ಕೂ ಆಘಾತವಾಗುತ್ತದೆ. ಮೇಲ್ನೋಟಕ್ಕೆ ಅಂದವಾಗಿ, ರಸ್ತೆ ವಿಭಜಕ ಅಳವಡಿಸಿ ನಗರಕ್ಕೆ ಶೋಭೆ ತರುವಂತೆ ಕಾಣುವುದೇನೋ ನಿಜ. ವಾಹನಗಳಲ್ಲಿ ಕೂತು ಸಂಚರಿಸುವವರಿಗೆ ಇದು ಪುಳಕ ನೀಡಬಹುದು.

ಆದರೆ ವಾಸ್ತವ ಸ್ಥಿತಿ ಏನೆಂಬುದನ್ನು ಕಂಡುಕೊಳ್ಳಬೇಕಾದರೆ ನೀವು ಒಂದೋ ವಾಹನವನ್ನು ಚಲಾಯಿಸಿಕೊಂಡು ಹೋಗಬೇಕು ಇಲ್ಲವೇ ನಡೆದುಕೊಂಡು ಹೋಗಬೇಕು. ದ್ವಿಚಕ್ರ ವಾಹನದಲ್ಲಿ ಹೋಗುತ್ತಾ ಒಂದು ಕ್ಷಣ ಮೈಮರೆತು ಚಲಾಯಿಸಿದರೋ ನಿಮ್ಮ ವಾಹನದ ಜೊತೆಗೆ ನೀವು ಕಾಣೆಯಾಗುವ ಸಾಧ್ಯತೆಗಳೇ ಹೆಚ್ಚು!

ಮಂಗಳೂರಿನ ಈ ಕಾಂಕ್ರೀಟ್ ರಸ್ತೆಗಳ ಪರಿಸ್ಥಿತಿ, ಲಕ್ಷಣ, ಆರೋಗ್ಯ ಮತ್ತು ಅದರ ಸಮಗ್ರ ಕಾಮಗಾರಿಗಳ ಬಗ್ಗೆ ಮತ್ತೆ ಚರ್ಚಿಸೋಣ. ಸದ್ಯ ಪ್ರಮುಖ ಕೆಲವು ರಸ್ತೆಗಳನ್ನೊಮ್ಮೆ ನೋಡಿ ಬರೋಣ.

ಹಾಗಂತ ಈ ರಸ್ತೆಗಳು ಕೇವಲ ಕೆಟ್ಟದಾಗಿಯೇ ಇವೆ ಎಂದೇನೂ ನಾನು ಪ್ರತಿಪಾದಿಸುತ್ತಿಲ್ಲ. ಬಹಳಷ್ಟು ಒಳಿತು ಈ ರಸ್ತೆಗಳಿಂದ ಆಗಿರುವುದು ಒಪ್ಪತಕ್ಕದ್ದೇ. ಆದರೆ ಇಷ್ಟೊಂದು ಕೋಟಿ ಕೋಟಿ ಹಣ ವೆಚ್ಚ ಮಾಡಿ, ತಿಂಗಳುಗಟ್ಟಲೆ, ವರ್ಷಗಟ್ಟಲೆ ರಸ್ತೆ ಬಂದ್ ಮಾಡಿ, ಸಂಚಾರ ಮಾರ್ಪಡಿಸಿ, ಜನರಿಗೆ, ವಾಹನಗಳಿಗೆ ನರಕಯಾತನೆ ಕೊಟ್ಟು ನಿರ್ಮಿಸಿದ ರಸ್ತೆಗಳು ಎಷ್ಟು ಸುರಕ್ಷಿತ ಎಂಬ ವಿಚಾರವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕು, ಪ್ರಶ್ನಿಸಲೇಬೇಕು. ಆ ಹಕ್ಕು ಜನರಿಗಿದೆ. ಹಾಗಾಗಿ, ಈ ದುಬಾರಿ ರಸ್ತೆಗಳ ಫಿನಿಶಿಂಗ್ ಕೆಲಸದ ಪರಿಚಯ ಮಾಡಿಸುವುದಕ್ಕೋಸ್ಕರ ಇಂದಿನ ಕಂತು ಮೀಸಲು.

ಬನ್ನಿ, ಬುದ್ಧಿವಂತರ ನಾಡಿನ ರಾಜಧಾನಿಯಾದ ಮಂಗಳೂರಿನ ಬಹು ವೆಚ್ಚದ ಕಾಂಕ್ರೀಟ್ ರಸ್ತೆಗಳು ಎಷ್ಟು ಸುರಕ್ಷಿತ ಮತ್ತು ಯೋಗ್ಯವಾಗಿವೆ ಎಂಬುದನ್ನು ನೋಡಿ ಬರೋಣ

Budkulo_Mangaluru_Concrete Roads_A (46)Budkulo_Mangaluru_Concrete Roads_A (44)Budkulo_Mangaluru_Concrete Roads_A (43)Budkulo_Mangaluru_Concrete Roads_A (42)Budkulo_Mangaluru_Concrete Roads_A (45) Budkulo_Mangaluru_Concrete Roads_A (41) Budkulo_Mangaluru_Concrete Roads_A (40) Budkulo_Mangaluru_Concrete Roads_A (39) Budkulo_Mangaluru_Concrete Roads_A (38) Budkulo_Mangaluru_Concrete Roads_A (37) Budkulo_Mangaluru_Concrete Roads_A (36) Budkulo_Mangaluru_Concrete Roads_A (35) Budkulo_Mangaluru_Concrete Roads_A (34) Budkulo_Mangaluru_Concrete Roads_A (23) Budkulo_Mangaluru_Concrete Roads_A (22) Budkulo_Mangaluru_Concrete Roads_A (21) Budkulo_Mangaluru_Concrete Roads_A (20) Budkulo_Mangaluru_Concrete Roads_A (19) Budkulo_Mangaluru_Concrete Roads_A (18) Budkulo_Mangaluru_Concrete Roads_A (17) Budkulo_Mangaluru_Concrete Roads_A (16) Budkulo_Mangaluru_Concrete Roads_A (15) Budkulo_Mangaluru_Concrete Roads_A (14) Budkulo_Mangaluru_Concrete Roads_A (13) Budkulo_Mangaluru_Concrete Roads_A (12) Budkulo_Mangaluru_Concrete Roads_A (11) Budkulo_Mangaluru_Concrete Roads_A (10) Budkulo_Mangaluru_Concrete Roads_A (9) Budkulo_Mangaluru_Concrete Roads_A (8) Budkulo_Mangaluru_Concrete Roads_A (7) Budkulo_Mangaluru_Concrete Roads_A (6) Budkulo_Mangaluru_Concrete Roads_A (5) Budkulo_Mangaluru_Concrete Roads_A (4) Budkulo_Mangaluru_Concrete Roads_A (3) Budkulo_Mangaluru_Concrete Roads_A (2) Budkulo_Mangaluru_Concrete Roads_A (1) Budkulo_Mangaluru_Concrete Roads_A Budkulo_Mangaluru_Concrete Roads_A (47)

ಚಿತ್ರಗಳು, ವರದಿ, ವಿಶ್ಲೇಷಣೆ: ಡೊನಾಲ್ಡ್ ಪಿರೇರಾ ಬೆಳ್ತಂಗಡಿ

(ಭಾಗ – 3ರಲ್ಲಿ ಮುಂದುವರಿಯಲಿದೆ)

ಭಾಗ – 1: ಸ್ವಚ್ಛ ಮಂಗಳೂರು ಓಕೆ; ವಿಕೃತ ಮಂಗಳೂರು ಏಕೆ?

Copyright @ www.budkulo.com

Leave a comment

Your email address will not be published. Required fields are marked *

Latest News