ಸ್ವಾತಂತ್ರ್ಯೋತ್ಸವ ಪ್ರಯುಕ್ತ ಬುಡ್ಕುಲೊ ಸಾಹಿತ್ಯ ಸ್ಪರ್ಧೆ
ಭಾರತದ ಸ್ವಾತಂತ್ರ್ಯೋತ್ಸವ ದಿನದ ಪ್ರಯುಕ್ತ ಬುಡ್ಕುಲೊ ಇ-ಪತ್ರಿಕೆ ಕನ್ನಡ ಹಾಗೂ ಕೊಂಕಣಿ ಭಾಷೆಯಲ್ಲಿ ಸಾಹಿತ್ಯ ಸ್ಪರ್ಧೆಯನ್ನು ಆಯೋಜಿಸಿದೆ. ಪ್ರಪಂಚದಾದ್ಯಂತ ವಾಸಿಸುತ್ತಿರುವ ಎಲ್ಲಾ ಭಾರತೀಯರಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ. ಎಲ್ಲಾ ವಯೋಮಾನದವರೂ ಈ ಸ್ಪರ್ಧೆಗೆ ತಮ್ಮ ಬರಹಗಳನ್ನು ಕಳುಹಿಸಬಹುದು.
ಸಣ್ಣ ಕಥೆ ಹಾಗೂ ಲೇಖನ ಬರೆಯುವ ಈ ಸ್ಪರ್ಧೆಗೆ ಬರಹಗಳನ್ನು ಕಳುಹಿಸಲು ಅಂತಿಮ ದಿನಾಂಕ ಆಗಸ್ಟ್ 05, 2016. ವಿಜೇತರಿಗೆ ಆಕರ್ಷಕ ನಗದು ಬಹುಮಾನಗಳಿವೆ. ಫಲಿತಾಂಶವನ್ನು ಸ್ವಾತಂತ್ರ್ಯೋತ್ಸವ ದಿನವಾದ ಆಗಸ್ಟ್ 15, 2016ರಂದು ಬುಡ್ಕುಲೊ ಇ-ಪತ್ರಿಕೆ (www.Budkulo.com) ಯಲ್ಲಿ ಪ್ರಕಟಿಸಲಾಗುವುದು.
ಬುಡ್ಕುಲೊ ಸಾಹಿತ್ಯ ಸ್ಪರ್ಧೆಯ ವಿವರಗಳು:
ಕನ್ನಡ ವಿಭಾಗ:
1. ಕಥಾ ಸ್ಪರ್ಧೆ
ಪ್ರಥಮ ಬಹುಮಾನ: ರೂ. 5,000/- ಮತ್ತು ಪ್ರಶಸ್ತಿ ಪತ್ರ
ದ್ವಿತೀಯ ಬಹುಮಾನ: ರೂ. 4,000/- ಮತ್ತು ಪ್ರಶಸ್ತಿ ಪತ್ರ
ತೃತೀಯ ಬಹುಮಾನ: ರೂ. 3,000/- ಮತ್ತು ಪ್ರಶಸ್ತಿ ಪತ್ರ
ಮೂರು ಸಮಾಧಾನಕರ ಬಹುಮಾನಗಳು (ಪ್ರಶಸ್ತಿ ಪತ್ರದೊಂದಿಗೆ)
2. ಲೇಖನ ಸ್ಪರ್ಧೆ
ವಿಷಯ: 24X7 ಸುದ್ದಿ ಮಾಧ್ಯಮಗಳ ಒಳಿತು ಕೆಡುಕುಗಳು
ಪ್ರಥಮ ಬಹುಮಾನ: ರೂ. 2,500/- ಮತ್ತು ಪ್ರಶಸ್ತಿ ಪತ್ರ
ದ್ವಿತೀಯ ಬಹುಮಾನ: ರೂ. 2,000/- ಮತ್ತು ಪ್ರಶಸ್ತಿ ಪತ್ರ
ತೃತೀಯ ಬಹುಮಾನ: ರೂ. 1,500/- ಮತ್ತು ಪ್ರಶಸ್ತಿ ಪತ್ರ
ಮೂರು ಸಮಾಧಾನಕರ ಬಹುಮಾನಗಳು (ಪ್ರಶಸ್ತಿ ಪತ್ರದೊಂದಿಗೆ)
ಕೊಂಕಣಿ ವಿಭಾಗ:
1. ಕಥಾ ಸ್ಪರ್ಧೆ
ಪ್ರಥಮ ಬಹುಮಾನ: ರೂ. 5,000/- ಮತ್ತು ಪ್ರಶಸ್ತಿ ಪತ್ರ
ದ್ವಿತೀಯ ಬಹುಮಾನ: ರೂ. 4,000/- ಮತ್ತು ಪ್ರಶಸ್ತಿ ಪತ್ರ
ತೃತೀಯ ಬಹುಮಾನ: ರೂ. 3,000/- ಮತ್ತು ಪ್ರಶಸ್ತಿ ಪತ್ರ
ಮೂರು ಸಮಾಧಾನಕರ ಬಹುಮಾನಗಳು (ಪ್ರಶಸ್ತಿ ಪತ್ರದೊಂದಿಗೆ)
2. ಲೇಖನ ಸ್ಪರ್ಧೆ
ವಿಷಯ: ಪ್ರಜಾಪ್ರಭುತ್ವ್ ಬಳ್ವಂತ್ ಕರ್ಚ್ಯಾಂತ್ ಸಾಮಾಜಿಕ್ ಜಾಳಿಜಾಗ್ಯಾಂಚೊ ಪಾತ್ರ್
(ಪ್ರಜಾಪ್ರಭುತ್ವವನ್ನು ಬಲಪಡಿಸುವುದರಲ್ಲಿ ಸಾಮಾಜಿಕ ಜಾಲತಾಣಗಳ ಪಾತ್ರ)
ಪ್ರಥಮ ಬಹುಮಾನ: ರೂ. 2,500/- ಮತ್ತು ಪ್ರಶಸ್ತಿ ಪತ್ರ
ದ್ವಿತೀಯ ಬಹುಮಾನ: ರೂ. 2,000/- ಮತ್ತು ಪ್ರಶಸ್ತಿ ಪತ್ರ
ತೃತೀಯ ಬಹುಮಾನ: ರೂ. 1,500/- ಮತ್ತು ಪ್ರಶಸ್ತಿ ಪತ್ರ
ಮೂರು ಸಮಾಧಾನಕರ ಬಹುಮಾನಗಳು (ಪ್ರಶಸ್ತಿ ಪತ್ರದೊಂದಿಗೆ)
ಸ್ಪರ್ಧೆಯ ನಿಯಮಗಳು ಈ ಕೆಳಗಿನಂತಿವೆ:
1. ಸ್ಪರ್ಧೆಗೆ ಕಳುಹಿಸುವ ಬರಹ ಸ್ವಂತದ್ದಾಗಿರಬೇಕು ಮತ್ತು ಇದುವರೆಗೆ ಎಲ್ಲಿಯೂ ಪ್ರಕಟವಾಗಿರಬಾರದು (ಪತ್ರಿಕೆ/ಮ್ಯಾಗಜಿನ್/ಫೇಸ್‍ಬುಕ್/ಬ್ಲಾಗ್/ವೆಬ್‍ಸೈಟ್ ಇತ್ಯಾದಿ). ಕೃತಿಚೌರ್ಯಕ್ಕೆ ಅವಕಾಶವಿಲ್ಲ. (ಕೃತಿಚೌರ್ಯ ಮಾಡುವುದು ಶಿಕ್ಷಾರ್ಹ ಅಪರಾಧ ಎಂಬುದು ನೆನಪಿನಲ್ಲಿರಲಿ).
2. ಕಥೆಯು 1500ರಿಂದ 2000 ಶಬ್ದಗಳೊಳಗಿರಬೇಕು.
3. ಲೇಖನವು 800ರಿಂದ 1000 ಶಬ್ದಗಳೊಳಗಿರಬೇಕು.
4. ಬರಹಗಳನ್ನು ಇಮೈಲ್ ಮಾಡಬೇಕಾದ ವಿಳಾಸ: budkuloepaper@gmail.com
5. ಎಲ್ಲಾ ಬರಹಗಳನ್ನು ಸಾಫ್ಟ್ ಕಾಪಿಯಲ್ಲಿ ಇ-ಮೈಲ್ ಮುಖಾಂತರ ಮಾತ್ರ ಕಳುಹಿಸಬೇಕು. ಕಂಪ್ಯೂಟರ್ ಟೈಪಿಂಗ್ ಮಾಡಿ ಕಳುಹಿಸುವುದು ಉತ್ತಮ. (ಕಂಪ್ಯೂಟರ್ ಟೈಪಿಂಗ್ ಮಾಡಲು ಸಾಧ್ಯವಾಗದವರು ಹಸ್ತಪ್ರತಿಯನ್ನು ಸ್ಕ್ಯಾನ್ ಮಾಡಿಯೂ ಕಳುಹಿಸಬಹುದು).
6. ಒಬ್ಬರಿಗೆ ಎರಡೂ ವಿಭಾಗಗಳಲ್ಲಿ ಸ್ಪರ್ಧಿಸಲು ಅವಕಾಶವಿದೆ. ಹಾಗೆಯೇ ಎರಡೂ ಭಾಷೆಗಳಲ್ಲೂ ಸ್ಪರ್ಧಿಸಲು ಮುಕ್ತ ಅವಕಾಶವಿದೆ (ಕೊಂಕಣಿ ಹಾಗೂ ಕನ್ನಡ). ಕೊಂಕಣಿ ಬರಹಗಳನ್ನು ಕನ್ನಡ ಲಿಪಿಯಲ್ಲಿಯೇ ಬರೆದು ಕಳುಹಿಸಬೇಕು.
7. ಸ್ಪರ್ಧಿಗಳು ತಮ್ಮ ಹೆಸರು ಮತ್ತು ವಿವರಗಳನ್ನು ಪ್ರತ್ಯೇಕ ಪುಟದಲ್ಲಿ ಬರೆದಿರಬೇಕು. ಮೊಬೈಲ್ ಸಂಖ್ಯೆ ಮತ್ತು ವಿಳಾಸ ಬರೆದು ಕಳುಹಿಸಬೇಕು. ಕಳುಹಿಸಿದ ಬರಹ ಯಾವ ವಿಭಾಗಕ್ಕೆಂಬುದನ್ನು ಸ್ಪಷ್ಟವಾಗಿ ನಮೂದಿಸಿರಬೇಕು. ಸಬ್ಜೆಕ್ಟ್‍ನಲ್ಲಿ Budkulo ID Day Literary Competitions 2016 ಎಂದು ಬರೆಯಬೇಕು.
8. ನಿಮ್ಮ ಬರಹಗಳನ್ನು ಕಳುಹಿಸಲು ಕೊನೆಯ ದಿನಾಂಕ: ಆಗಸ್ಟ್ 05, 2016. ನಂತರ ಬಂದವುಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
9. ಈ ಸ್ಪರ್ಧೆಗೆ ಸಂಬಂಧಿಸಿ ಯಾವುದೇ ಪತ್ರ ವ್ಯವಹಾರಕ್ಕೆ ಆಸ್ಪದವಿಲ್ಲ. ಬಹುಮಾನ ವಿಜೇತ ಮತ್ತು ಇತರ ಉತ್ತಮ ಬರಹಗಳನ್ನು ಬುಡ್ಕುಲೊ ಇ-ಪತ್ರಿಕೆ (www.Budkulo.com) ಯಲ್ಲಿ ಪ್ರಕಟಿಸಲಾಗುವುದು. ಬಹುಮಾನ ಸಿಗದಿರುವ ಪ್ರಕಟಿತ ಬರಹಗಳಿಗೆ ಸಂಭಾವನೆ ಸಿಗಲಿದೆ.
10. ಸ್ವೀಕೃತವಾದ ಬರಹಗಳು ಅಪೇಕ್ಷಿತ ಮಟ್ಟದಲ್ಲಿಲ್ಲದಿದ್ದರೆ ಸ್ಪರ್ಧೆಯನ್ನು ರದ್ದುಪಡಿಸುವ ಹಕ್ಕನ್ನು ಬುಡ್ಕುಲೊ ಇ-ಪತ್ರಿಕೆ ಕಾದಿರಿಸುತ್ತದೆ.
11. ಈ ಸ್ಪರ್ಧೆಗೆ ಸಂಬಂಧಿಸಿದ ಅಂತಿಮ ನಿರ್ಣಯ ಬುಡ್ಕುಲೊ ಸಂಪಾದಕೀಯ ಮಂಡಳಿಯದ್ದು.
12. ಸ್ಪರ್ಧೆಯ ಫಲಿತಾಂಶ ಬರುವ ಸ್ವಾತಂತ್ರ್ಯೋತ್ಸವ ದಿನವಾದ ಆಗಸ್ಟ್ 15, 2016ರಂದು ಬುಡ್ಕುಲೊ ಇ-ಪತ್ರಿಕೆ (www.Budkulo.com) ಯಲ್ಲಿ ಪ್ರಕಟಿಸಲಾಗುವುದು.