ಬುಡ್ಕುಲೊ ಸ್ವಾತಂತ್ರ್ಯೋತ್ಸವ ಸಾಹಿತ್ಯ ಸ್ಪರ್ಧೆಯ ಫಲಿತಾಂಶ

Budkulo Media Network

Posted on : August 15, 2016 at 1:51 PM

ನಿಮಗೆಲ್ಲರಿಗೂ ಸ್ವಾತಂತ್ರ್ಯ ದಿನದ ಹಾರ್ದಿಕ ಶುಭಾಶಯಗಳು.

Budkulo_ID Day LitComp_TKan_Lಬುಡ್ಕುಲೊ ಇ-ಪತ್ರಿಕೆ ಆಯೋಜಿಸಿದ್ದ ದ್ವಿಭಾಷಾ ಸಾಹಿತ್ಯ ಸ್ಪರ್ಧೆಯ ಫಲಿತಾಂಶ ಇಲ್ಲಿದೆ. ಕೊಂಕಣಿ ಹಾಗೂ ಕನ್ನಡದಲ್ಲಿ ಆಯೋಜಿಸಿದ್ದ ಈ ಸಾಹಿತ್ಯ ಸ್ಪರ್ಧೆಗೆ ಸಾಕಷ್ಟು ಸಂಖ್ಯೆಯಲ್ಲಿ ಬರಹಗಾರರು ತಮ್ಮ ಬರಹಗಳನ್ನು ಕಳುಹಿಸಿದ್ದಾರೆ. ಆದರೆ ಹೆಚ್ಚಿನ ಬರಹಗಳು ಅಪೇಕ್ಷಿತ ಮಟ್ಟದಲ್ಲಿಲ್ಲವೆನ್ನುವುದು ನಿರಾಶೆ ಮೂಡಿಸಿದೆ.

ಸ್ಪರ್ಧೆಯ ತೀರ್ಪುದಾರರು:

1. ಡಾ. ಎಡ್ವರ್ಡ್ ಎಲ್. ನಜರೆತ್, ಖ್ಯಾತ ವೈದ್ಯರು, ಹಿರಿಯ ಸಾಹಿತಿ
2. ಟೊನಿ ಫೆರೊಸ್ ಜೆಪ್ಪು, ಪತ್ರಕರ್ತರು, ವಿಮರ್ಶಕರು, ಸಂಪಾದಕರು
3. ವಿಲ್ಫ್ರೆಡ್ ಲೋಬೊ ಪಡೀಲ್, ಸಾಹಿತಿ, ಪತ್ರಕರ್ತ, ಸಂಪಾದಕರು
4. ಅರುಣ್ ಫೆರ್ನಾಂಡಿಸ್ (ಅಣ್ಣು ಸಿದ್ಧಕಟ್ಟೆ), ಲೇಖಕ, ಪತ್ರಕರ್ತರು

Budkulo_ID Day LitComp_Judges

ಕನ್ನಡ ಕಥಾ ವಿಭಾಗ:

ಸ್ಪರ್ಧೆಗೆ ಬಂದ ಕಥೆಗಳಲ್ಲಿ ಆಯ್ದ 12 ಕಥೆಗಳನ್ನು ಪರಿಶೀಲಿಸಿದ ತೀರ್ಪುದಾರರು ಯಾವುದೇ ಕಥೆಯು ಅಪೇಕ್ಷಿತ ಗುಣಮಟ್ಟದಲ್ಲಿಲ್ಲವೆಂದು ತೀರ್ಪು ನೀಡಿರುವುದರಿಂದ ಘೋಷಿತ ಬಹುಮಾನಗಳನ್ನು ರದ್ದುಪಡಿಸಲಾಗಿದೆ. ಆದರೆ, ಈ ಸ್ಪರ್ಧೆಯ ಉದ್ದೇಶವೇ ಹೊಸ ಬರಹಗಾರನ್ನು ಪ್ರೋತ್ಸಾಹಿಸುವುದು. ಆದುದರಿಂದ ಮೂರು ಕಥೆಗಳಿಗೆ ಪ್ರೋತ್ಸಾಹಕರ ಬಹುಮಾನವನ್ನು ನೀಡಲಾಗಿದೆ.

1. ಶಹೀದನ ಪುತ್ಥಳಿ – ಲೇಖಕ: ಮುಸ್ತಾಫ ಕೆ.ಎಚ್., ಮೂಡುಬಿದಿರೆ
ಬಹುಮಾನ: ರೂ. 2,000-00 ಮತ್ತು ಪ್ರಶಸ್ತಿ ಪತ್ರ

2. ಮೆರವಣಿಗೆ – ಲೇಖಕ: ರಿಚರ್ಡ್ ಅಲ್ವಾರಿಸ್, ಕುಲಶೇಖರ
ಬಹುಮಾನ: ರೂ. 2,000-00 ಮತ್ತು ಪ್ರಶಸ್ತಿ ಪತ್ರ

3. ಫಾಸ್ಟ್‍ಫುಡ್ ಕಾರ್ನರ್ ಉದಯ – ಲೇಖಕ: ಮೆಲ್ವಿನ್ ಕೊಳಲಗಿರಿ, ಉಡುಪಿ
ಬಹುಮಾನ: ರೂ. 2,000-00 ಮತ್ತು ಪ್ರಶಸ್ತಿ ಪತ್ರ

ಸಮಾಧಾನಕರ ಬಹುಮಾನಗಳು:

1. ನನ್ನದು ವೇದನೆಯಲ್ಲ, ಸಂವೇದನೆ – ಲೇಖಕ: ಅರ್ಜುನ್ ಶೆಣೈ, ಉಜಿರೆ
ಬಹುಮಾನ: ಕಥಾ ಪುಸ್ತಕ ಮತ್ತು ಪ್ರಶಸ್ತಿ ಪತ್ರ

2. ಮರಳಿನ ಮನೆ – ಲೇಖಕಿ: ಬಿಂದು ಎಂ.ಎನ್., ಮೈಸೂರು
ಬಹುಮಾನ: ಕಥಾ ಪುಸ್ತಕ ಮತ್ತು ಪ್ರಶಸ್ತಿ ಪತ್ರ

3. ಅನುಬಂಧ – ಲೇಖಕಿ: ಸುಕನ್ಯಾ ಕಾಮತ್ ವಿ., ಗುರುವಾಯನಕೆರೆ
ಬಹುಮಾನ: ಕಥಾ ಪುಸ್ತಕ ಮತ್ತು ಪ್ರಶಸ್ತಿ ಪತ್ರ

ಕನ್ನಡ ಲೇಖನ ವಿಭಾಗ:

ಪ್ರಥಮ ಬಹುಮಾನ: ಪ. ರಾಮಕೃಷ್ಣ ಶಾಸ್ತ್ರಿ, ಬೆಳ್ತಂಗಡಿ
ಬಹುಮಾನ: ರೂ. 2,500-00 ಮತ್ತು ಪ್ರಶಸ್ತಿ ಪತ್ರ

ದ್ವಿತೀಯ ಬಹುಮಾನ: ಲೆಸ್ಲಿ ಮೊಗರ್ನಾಡ್, ಬಂಟ್ವಾಳ
ಬಹುಮಾನ: ರೂ. 2,000-00 ಮತ್ತು ಪ್ರಶಸ್ತಿ ಪತ್ರ

ತೃತೀಯ ಬಹುಮಾನ: ಸ್ಟೀವನ್ ರೇಗೊ, ದಾರಂದಕುಕ್ಕು
ಬಹುಮಾನ: ರೂ. 1,500-00 ಮತ್ತು ಪ್ರಶಸ್ತಿ ಪತ್ರ

ಸಮಾಧಾನಕರ ಬಹುಮಾನಗಳು:

1. ಆರತಿ ರಘುವೀರ್, ಮೈಸೂರು
ಬಹುಮಾನ: ಪುಸ್ತಕ ಮತ್ತು ಪ್ರಶಸ್ತಿ ಪತ್ರ

2. ಕೃಷ್ಣಮೂರ್ತಿ ಭಟ್, ಬೆಳ್ಮಣ್ಣು
ಬಹುಮಾನ: ಪುಸ್ತಕ ಮತ್ತು ಪ್ರಶಸ್ತಿ ಪತ್ರ

3. ಸ್ಟೀವನ್ ಕ್ವಾಡ್ರಸ್, ಪೆರ್ಮುದೆ
ಬಹುಮಾನ: ಪುಸ್ತಕ ಮತ್ತು ಪ್ರಶಸ್ತಿ ಪತ್ರ

ಸಾಕಷ್ಟು ಸಂಖ್ಯೆಯಲ್ಲಿ ಯುವಜನರು, ಕಾಲೇಜು ವಿದ್ಯಾರ್ಥಿಗಳು ಈ ಸಾಹಿತ್ಯ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಶ್ಲಾಘನೀಯ. ಬರೆಯುವುದು ಒಂದು ವಿದ್ಯೆ. ಅದಕ್ಕಾಗಿ ಬಹಳಷ್ಟು ಕಲಿಯಲಿಕ್ಕಿದೆ, ಪರಿಶ್ರಮ ಪಡಬೇಕಿದೆ. ಕೇವಲ ಉತ್ಸಾಹವೊಂದೇ ಸಾಕಾಗುವುದಿಲ್ಲ. ಕಥೆಯಿರಲಿ, ಲೇಖನವಿರಲಿ ಬರೆಯುವ ಮುನ್ನ ಸಾಕಷ್ಟು ಅಧ್ಯಯನ, ಮನೆಕೆಲಸ ಮಾಡುವುದು ಅವಶ್ಯಕ. ಆಗ ಮಾತ್ರ ಬರೆದ ಬರಹ ಉತ್ತಮವಾಗಲು ಸಾಧ್ಯ. ಹೊಸ ಬರಹಗಾರರು ಇದನ್ನು ಮನಗಂಡು ಇನ್ನಷ್ಟು ಪರಿಶ್ರಮಪಟ್ಟಲ್ಲಿ ಉತ್ತಮ ಭವಿಷ್ಯವಿದೆ.

ಇದಕ್ಕಾಗಿ ಓದುವುದು ತುಂಬಾ ಅಗತ್ಯ. ಓದದವನು ಬರಹಗಾರನಾಗಲು ಸಾಧ್ಯವಿಲ್ಲ.

ಇದು ನಮ್ಮ ಮೊದಲ ಪ್ರಯತ್ನ. ಅದರಲ್ಲೂ ಎರಡು ಭಾಷೆಗಳಲ್ಲಿ ಸಾಹಿತ್ಯ ಸ್ಪರ್ಧೆ ಆಯೋಜಿಸಿದ್ದು ಬಹಳಷ್ಟು ಜನರಿಗೆ ಸಂತಸ ನೀಡಿದೆ. ಹಾಗೆ ನೋಡಿದರೆ ನಾಡಿನ ಬಹಳಷ್ಟು ಹಿರಿಯ ಪತ್ರಿಕೆ, ಪ್ರಕಾಶನ ಸಂಸ್ಥೆಗಳು ಆಯೋಜಿಸುವ ಸಾಹಿತ್ಯ ಸ್ಪರ್ಧೆಗಳ ಸಂದರ್ಭದಲ್ಲೂ ಕೇಳಿ ಬರುವ ಮಾತೆಂದರೆ, ಬರಹಗಳು ಅಪೇಕ್ಷಿತ ಮಟ್ಟದಲ್ಲಿಲ್ಲವೆನ್ನುವುದೇ. ಜನರಲ್ಲಿ ಓದಿನ ಅಭಿರುಚಿಯೇ ಕ್ಷೀಣಿಸುತ್ತಿರುವಾಗ ಉತ್ತಮ ಬರಹಗಳ ರಚನೆಯಾದರೂ ಎಲ್ಲಿಂದ ಸಾಧ್ಯವಾಗುತ್ತದೆ?

ನಾವೀಗ ಮೊದಲ ಹೆಜ್ಜೆಯನ್ನಿಟ್ಟಿದ್ದೇವೆ. ನಿಮ್ಮೆಲ್ಲರ ಆಶೀರ್ವಾದ, ಪ್ರೋತ್ಸಾಹದಿಂದ ಇನ್ನಷ್ಟು ಸಾಧನೆ ಮಾಡುವುದಕ್ಕೆ ನಮಗೆ ಪ್ರೇರಣೆ ಸಿಗುತ್ತದೆ.

ಈ ಸ್ಪರ್ಧೆಯ ಆಯೋಜನೆಯ ನಿಟ್ಟಿನಲ್ಲಿ ನಮ್ಮನ್ನು ಪ್ರೋತ್ಸಾಹಿಸಿ ಬೆಂಬಲಿಸಿದ, ನೆರವು ನೀಡಿದ ಎಲ್ಲರಿಗೂ ಧನ್ಯವಾದಗಳು. ಸ್ಪರ್ಧೆಯ ಬರಹಗಳನ್ನು ಪರಿಶೀಲಿಸಿದ ತೀರ್ಪುದಾರರಾದ ಡಾ. ಎಡ್ವರ್ಡ್ ನಜರೆತ್, ಟೊನಿ ಫೆರೊಸ್, ವಿಲ್ಫ್ರೆಡ್ ಲೋಬೊ ಮತ್ತು ಅರುಣ್ ಫೆರ್ನಾಂಡಿಸ್ ಅವರಿಗೆ ಕೃತಜ್ಞತೆಗಳು. ಮುಖ್ಯವಾಗಿ, ಈ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು. ಎಲ್ಲರಿಗೂ ಶುಭವಾಗಲಿ.

ಸೂಚನೆ: ಬಹುಮಾನ ವಿಜೇತರನ್ನು ವೈಯಕ್ತಿಕವಾಗಿ ಸಂಪರ್ಕಿಸಲಾಗುವುದು. ಎಲ್ಲರೂ ತಮ್ಮ ಪೂರ್ಣ ಅಂಚೆ ವಿಳಾಸವನ್ನು ಕಳುಹಿಸಬೇಕು. ಹಾಗೆಯೇ ನಿಮ್ಮದೊಂದು ಭಾವಚಿತ್ರವನ್ನೂ ಕಳುಹಿಸಿ.

ಕೊಂಕಣಿ ಸಾಹಿತ್ಯ ಸ್ಪರ್ಧೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Leave a comment

Your email address will not be published. Required fields are marked *