ಇದೀಗ ಚೀನಾ ಪ್ರವಾಸ ಮಂಗಳೂರಿನಿಂದಲೇ ಲಭ್ಯ

Media Release

Posted on : March 28, 2017 at 3:49 PM

ಕರಾವಳಿ ಕರ್ನಾಟಕದ ಜನರಿಗಿದು ಸಿಹಿ ಸುದ್ದಿ. ಚೀನಾ ದೇಶಕ್ಕೆ ಪ್ರವಾಸ ಹೋಗಬೇಕೆಂದಿದ್ದಲ್ಲಿ ಮುಂಬೈ, ಬೆಂಗಳೂರಿಗೆ ಹೋಗಬೇಕೆಂದಿಲ್ಲ. ಮಂಗಳೂರಿನಿಂದಲೇ ನೀವಿನ್ನು ನಿಮ್ಮ ಚೀನಾ ಪ್ರವಾಸವನ್ನು ಆರಂಭಿಸಬಹುದು.

ಪ್ರಖ್ಯಾತ ಪ್ರವಾಸೋದ್ಯಮ ಸಂಸ್ಥೆ ಎಸ್.ಒ.ಟಿ.ಸಿ.ಯ ವತಿಯಿಂದ 9 ದಿನಗಳ ಚೀನಾ ಪ್ರವಾಸವನ್ನು ಆಯೋಜಿಸಲಾಗಿದೆ. ಮಂಗಳೂರಿನವರಿಗೆ ಈ ಪ್ರವಾಸ ಮಂಗಳೂರಿನಿಂದಲೇ ಶುರುವಾಗುತ್ತದೆ. ಬೇರೆ ನಗರಗಳಿಂದ ಚೀನಾ ಪ್ರವಾಸ ಎಂದಿನಂತೆ ಇರಲಿದೆ. ಆದರೆ ಮೊತ್ತ ಮೊದಲ ಬಾರಿಗೆ ಮಂಗಳೂರಿನಿಂದಲೇ ಪ್ರವಾಸದಾರಂಭ ಮಾಡಲಾಗುತ್ತಿದೆ.

China Tour_SOTC_4 China Tour_SOTC_3 China Tour_SOTC_5 China Tour_SOTC_2 China Tour_SOTC_1

ಇದೇ ಮೇ 11ರಂದು ಪ್ರಾರಂಭವಾಗುವ ಈ 9 ದಿನಗಳ ಪ್ರವಾಸದಲ್ಲಿ ಚೀನಾ ರಾಜಧಾನಿ ಬೀಜಿಂಗ್ ಹಾಗೂ ಇತರ ಪ್ರಮುಖ ನಗರಗಳಾದ ಕ್ಷಿಯಾನ್ ಮತ್ತು ಶಾಂಘಾಯ್‍ಗಳಿಗೆ ಭೇಟಿ ಇರಲಿದೆ.

ಚೀನಾದ ಮಹಾ ಪ್ರಸಿದ್ಧ ‘ದಿ ಗ್ರೇಟ್ ವಾಲ್’ (ಮಹಾ ಗೋಡೆ) ಭೇಟಿಯ ಜೊತೆ ಇನ್ನಿತರ ಆಕರ್ಷಕ ಸ್ಥಳಗಳನ್ನು ಈ ಪ್ರವಾಸದಲ್ಲಿ ಆಯೋಜಿಸಲಾಗಿದೆ.

ಮಂಗಳೂರಿನಿಂದಲೇ ಚೀನಾ ಪ್ರವಾಸ ಹೊರಡಲಿಚ್ಛಿಸುವವರಿಗೆ ಇದೊಂದು ಅಪೂರ್ವ ಅವಕಾಶ. ಆಸಕ್ತರು ಎಸ್.ಒ.ಟಿ.ಸಿ.ಯ ಮಂಗಳೂರಿನ ಕಚೇರಿಯನ್ನು ಸಂಪರ್ಕಿಸಬಹುದು. ಫೋನ್: (0824) 4244911, 4244912, 4244913, ವೆಬ್‍ಸೈಟ್: www.sotc.in

Globe Travels_SOTC_China Tour

Send your opinion, views & feedback to: budkuloepaper@gmail.com
Like our Facebook Page: www.facebook.com/budkulo.epaper

Leave a comment

Your email address will not be published. Required fields are marked *