Latest News

ಅದ್ಭುತ ರಸಾನುಭೂತಿಯ ವಿಶಿಷ್ಟ ಕಲೆ ಜಾದೂ

ಕುದ್ರೋಳಿ ಗಣೇಶ್

Posted on : April 12, 2014 at 5:10 AM

Dear Readers, we are running a free media with high democratic values. Without subscriptions, advertisements & having no patrons or god fathers, we depend on your support to run this pro people, impartial, unbiased and courageous media. Kindly support us by your generous help.
Our Google Pay & Paytm Number - 8277362399

Our Bank Details:
Name: Donald Pereira
Bank: Canara Bank
A/C No: 0977101022194
Hampankatta Branch, Mangaluru 575 001
IFSC Code: CNRB0000612
MICR Code: 575015009

ಮನುಷ್ಯನಿಗೆ ಹಸಿವಾದಾಗ ಆಹಾರ, ಉಡಲು ಬಟ್ಟೆ, ವಾಸಕ್ಕೆ ಒಂದು ಮನೆಯಂತಹ ಮೂಲಭೂತ ಅವಶ್ಯಕತೆಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಆತನ ಮನಸ್ಸಿಗೆ ಸಿಗಬೇಕಾದ ರಂಜನೆ. ಅನಾದಿ ಕಾಲದಿಂದ ಸಂಗೀತ, ನಾಟ್ಯ, ನಾಟಕ, ಯಕ್ಷಗಾನದಂತಹ ಕಲಾ ಪ್ರಾಕಾರಗಳು  ಮಾನವನಿಗೆ ಮನರಂಜನೆ ನೀಡುತ್ತಾ ಬಂದಿವೆ.

ಈ ಎಲ್ಲಾ ಕಲೆಗಳಿಗಿಂತ ಭಿನ್ನವಾಗಿ ಇದ್ಯಾವುದೂ ನೀಡದಿರದಂತಹ ಅದ್ಭುತ ರಸಾನುಭೂತಿಯನ್ನು ನೀಡುವಂತಹ ವಿಶಿಷ್ಟ ಕಲೆಯೇ ಜಾದೂ.

Jadoo_Magic

ಅತಿಮಾನುಷ ಶಕ್ತಿಗಳ ಕಲ್ಪನೆಗಳನ್ನು ಮುಂದಿಟ್ಟುಕೊಂಡು ಪವಾಡ ಸದೃಶವೆನಿಸುವ ಘಟನೆಗಳನ್ನು ರಂಗದ ಮೇಲೆ ನೈಜ್ಯವಾಗಿ ನಿರೂಪಿಸುವ ಜಾಣ್ಮೆಯ ಮತ್ತು ವೈಜ್ಞಾನಿಕವಾಗಿರುವ ವಿಶಿಷ್ಟತೆಯನ್ನು ಜಾದೂ ಕಲೆ ಹೊಂದಿದೆ.

ವಿಜ್ಞಾನ ಮತ್ತು ಕೈ ಚಳಕದ ಸಂಗಮವಾಗಿರುವ ಜಾದೂ ಕಲೆ ಮಗುವಿನಿಂದ ವಯೋವೃದ್ಧರ ವರೆಗೆ ಎಲ್ಲಾ ವಯಸ್ಸಿನವರ ಮನಸ್ಸಿಗೆ ಮುಟ್ಟುವಂತಹ, ಪ್ರಾದೇಶಿಕತೆಯ – ಭಾಷೆಯ ಹಂಗಿಲ್ಲದೆ ಜಗತ್ತಿನ ಯಾವುದೇ ದೇಶದ ಜನರ ಮನಸ್ಸನ್ನು ಮುಟ್ಟುವಂತಹ ಜಾಗತಿಕ ಕಲೆಯಾಗಿದೆ.

ಮಕ್ಕಳು ಜಾದೂವನ್ನು ನೋಡುತ್ತಾ ಸಹಜವಾಗಿಯೇ ಮುದಗೊಳ್ಳುತ್ತಾರೆ. ಜೊತೆ ಜೊತೆಗೆ ದೊಡ್ಡವರೊಳಗೆ ಅವಿತು ಕುಳಿತಿರುವ ಮಗುವಿನ ಮನಸ್ಸನ್ನು ಬಡಿದೆಬ್ಬಿಸುವ ಶಕ್ತಿ ಜಾದೂವಿಗೆ ಇದೆ.

ಭಾರತದಲ್ಲಿ ಜಾದೂ ಕಲೆಯನ್ನು ಪ್ರದರ್ಶನ ಮಾಡುತ್ತಿದ್ದವರು ಬೀದಿ ಬದಿಯ ಜಾದೂಗಾರರು. ವೇದಿಕೆಯಂತಹ ಯಾವುದೇ ವ್ಯವಸ್ಥೆಗಳು ಇಲ್ಲದಿದ್ದರೂ, ನಾಲ್ಕು ಸುತ್ತಲೂ ಜನ ಸೇರಿದ್ದರೂ ಅಷ್ಟೂ ಜನರ ಕಣ್ಣುಗಳ ಮುಂದೆ ಕೈಚಳಕದ ಅದ್ಭುತಗಳನ್ನು ಬೀದಿ ಬದಿಯ ಜಾದೂಗಾರರು ಮಾಡುತ್ತಿದ್ದರು.

ಹಗ್ಗವು ಆಕಾಶದೆತ್ತರಕ್ಕೆ ಏರಿ ಕಂಬದಂತೆ ಸೆಟೆದು ನಿಲ್ಲುವ ಇಂಡಿಯನ್ ರೋಪ್ ಟ್ರಿಕ್, ಮಾವಿನ ಗೆರೆಟೆಯಿಂದ ಮಾವಿನ ಗಿಡವು ಸೃಷ್ಟಿಯಾಗುವ ಇಂಡಿಯನ್ ಮ್ಯಾಂಗೋ ಟ್ರಿಕ್, ಬುಟ್ಟಿಯೊಳಗೆ ವ್ಯಕ್ತಿಯೊಬ್ಬನನ್ನು ಹಾಕಿ ಕತ್ತಿಯಿಂದ ತಿವಿದು ಮಾಯ ಮಾಡುವ ಇಂಡಿಯನ್ ಬಾಸ್ಕೆಟ್ ಟ್ರಿಕ್ ಮುಂತಾದ ಜಗತ್ ಪ್ರಸಿದ್ಧ ಜಾದೂಗಳನ್ನು ಭಾರತದ ಬೀದಿ ಬದಿಯ ಜಾದೂಗಾರರು ಮಾಡುತ್ತಿದ್ದರು.

ಭಾರತೀಯ ಜಾದೂ ಎಂದರೆ ಬರಿಯ ಬೀದಿ ಬದಿಯದ್ದು ಅನ್ನುವ ಸಮಯದಲ್ಲಿ ಹೊಸ ಚಿಂತನೆಯೊಂದಿಗೆ ಭಾರತೀಯ ಜಾದೂವಿಗೆ ಮಾನ್ಯತೆ ಸಿಗಲು ಕಾರಣವಾದವರು ದಿವಂಗತ ಶ್ರೀ  ಪಿ.ಸಿ. ಸೊರ್ಕಾರ್ ಸೀನಿಯರ್ ಇವರು. ಕಲ್ಕತ್ತಾದ ಜಾದೂ ಕಲಾವಿದರಾದ ಇವರು ಮಹಾರಾಜನಂತೆ ದಿರಿಸು ಧರಿಸಿ ಜಾದೂ ಮಾಡುವ ಮೂಲಕ ಭಾರತೀಯ ಜಾದೂವನ್ನು ಬೀದಿ ಬದಿಯ ಮಟ್ಟದಿಂದ ಅಂತರ್ರಾಷ್ಟ್ರೀಯ ಎತ್ತರಕ್ಕೆ ಏರಿಸಲು ಕಾರಣರಾದವರು. ‘ಆಧುನಿಕ ಭಾರತೀಯ ಜಾದೂವಿನ ಪಿತಾಮಹ’ ಎಂದೇ ಕರೆಯಲ್ಪಡುವ ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ಶ್ರೀ ಪಿ.ಸಿ. ಸೊರ್ಕಾರ್‍ರವರ ಜನ್ಮದಿನವಾದ ಫೆಬ್ರವರಿ 23ನ್ನು ಭಾರತದಲ್ಲಿ ಜಾದೂಗಾರರ ದಿನಾಚರಣೆಯಾಗಿ ಆಚರಿಸುತ್ತಾರೆ. ಆ ಮೂಲಕ ಈ ಮಹಾನ್ ಜಾದೂ ಕಲಾವಿದನಿಗೆ ಗೌರವ ನೀಡುತ್ತಾರೆ.

ಇಂದಿನ ಸಮಕಾಲೀನ ಜಾದೂ ಕಲೆಯ ಪ್ರಪಂಚ ಸಮೃದ್ಧವಾಗಿ ಬೆಳೆದಿದೆ. ಅಮೆರಿಕಾದಂತಹ ದೇಶದಲ್ಲಿ ಸಾವಿರಾರು ಪ್ರದರ್ಶನಗಳ ಮೂಲಕ, ಟಿ.ವಿ. ಕಾರ್ಯಕ್ರಮಗಳ ಮೂಲಕ ಜಾದೂಗಾರರು ಹೊಸ ಬಗೆಯ ಜಾದೂಗಳನ್ನು ಸಂಶೋಧಿಸುತ್ತಿದ್ದಾರೆ – ಜನರ ಮನಸ್ಸನ್ನು ರಂಜಿಸುತ್ತಿದ್ದಾರೆ. ವಿದೇಶದಲ್ಲಿ ಜಾದೂ ಕಲೆ ಸಾವಿರಾರು ಕೋಟಿ ರೂಪಾಯಿಗಳ ವಹಿವಾಟು ಮಾಡುವ ಶ್ರೀಮಂತ ವ್ಯವಹಾರವಾಗಿ ಬೆಳೆದಿದೆ.

ಆದರೆ ಭಾರತದಲ್ಲಿ ಜಾದೂ ಸೃಜನಾತ್ಮಕವಾಗಿಯೂ ವ್ಯಾವಹಾರಿಕವಾಗಿಯೂ ಬೆಳೆದಿಲ್ಲ. ಜಾದೂವನ್ನು ಪೂರ್ಣ ವೃತ್ತಿಯಾಗಿ ಬೆಳೆಸಲು ಅಗತ್ಯವಿರುವ ಪೂರಕ ವಾತಾವರಣವೂ ಇಲ್ಲಿಲ್ಲ.

ಭಾರತದಲ್ಲಿ ಜಾದೂ ಕಲಾವಿದರಿಂದ ಹೊಸ ಬಗೆಯ ಜಾದೂ ಪ್ರಯೋಗಗಳು ಆಗಬೇಕಾದ ಅನಿವಾರ್ಯತೆ ಇದೆ ಹಾಗೂ ಸಮಾಜದಿಂದ, ಸರಕಾರದಿಂದ ಪೆÇ್ರೀತ್ಸಾಹ ಸಿಗಬೇಕಾದ ಅಗತ್ಯವಿದೆ.

ಭಾರತ ಜಾದೂ ಕಲೆಯ ತವರೂರು ಅನ್ನುವ ಮಾತು ಇತಿಹಾಸದಲ್ಲಿದೆ. ಇದು ಇತಿಹಾಸವಾಗಿರದೆ ಪ್ರಸಕ್ತವಾಗಿರಲಿ ಹಾಗೂ ಮುಂದೆ ಜಾದೂ ರಂಗದ ಮುಂಚೂಣಿಯ ಸ್ಥಾನ ಭಾರತದ್ದಾಗಿರಲಿ.

ಕುದ್ರೋಳಿ ಗಣೇಶ್

Jadoo_Magic 1

ಭಾರತದ ಮೂಲಭೂತ ಜಾದೂ ಪರಂಪರೆಯನ್ನು ಉಳಿಸಿ ಬೆಳೆಸಬೇಕು ಅನ್ನುವ ಕಾಳಜಿಯೊಂದಿಗೆ ಜಾದೂ-ಜಾನಪದ–ರಂಗಭೂಮಿ ಸಂಗೀತಗಳ ವಿನೂತನ ಶೈಲಿಯನ್ನು ಹುಟ್ಟು ಹಾಕುವ ಸಾಧನೆ ಮಾಡಿದವರು ಕುದ್ರೋಳಿ ಗಣೇಶ್. ಈಗಾಗಲೇ ಹತ್ತು ರಾಷ್ಟ್ರೀಯ ಜಾದೂ ಪ್ರಶಸ್ತಿಗಳನ್ನು ಪಡೆದುಕೊಂಡು ದೇಶ, ವಿದೇಶಗಳಲ್ಲಿ 1500ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾರೆ. ಸಚಿವರನ್ನು ಮಾಯ ಮಾಡುವುದು, ಸ್ಫೋಟಿಸುವ ಪೆಟ್ಟಿಗೆಯಿಂದ ಪಾರಾಗಿ ಸಮುದ್ರದ ಮಧ್ಯೆ ಎದ್ದು ಬರುವುದು ಮುಂತಾದ ವಿಶೇಷ ಸಾಹಸಗಳನ್ನು ದಾಖಲಿಸಿದ್ದಾರೆ. ಇತ್ತಿಚೆಗೆ ಕಲರ್ಸ್ ಟಿ.ವಿ. ಚಾನೆಲ್‍ನವರು   ಏರ್ಪಡಿಸಿದ್ದ ‘ಇಂಡಿಯಾಸ್ ಗಾಟ್ ಟ್ಯಾಲೆಂಟ್’ ರಾಷ್ಟ್ರೀಯ ಪ್ರತಿಭಾ ಸ್ಪರ್ಧೆಯಲ್ಲಿ ಫೈನಲ್ ಹಂತವನ್ನು ಮುಟ್ಟುವ ಸಾಧನೆ ಮಾಡಿದ್ದಾರೆ. ಜಾದೂ ಕಲೆಯ ಸಮಗ್ರ ಸಂಶೋಧನೆಗಾಗಿ “ವಿಸ್ಮಯ ಜಾದೂ ಪ್ರತಿಷ್ಠಾನ” ಸ್ಥಾಪಿಸಿದ್ದಾರೆ.

ಮಂಗಳೂರಿನ ಜಾದೂಗಾರ ಕುದ್ರೋಳಿ ಗಣೇಶ್ (9986134542, magiciankuddroli@gmail.com) ಪತ್ರಕರ್ತರಾಗಿದ್ದವರು. ಜಾದೂವನ್ನು ಪೂರ್ಣ ವೃತ್ತಿಯನ್ನಾಗಿಸಿಕೊಂಡ ಅಪರೂಪದ ಸಾಧಕರಲ್ಲಿ ಓರ್ವರು. ಜಾದೂ ಕಲೆಯನ್ನು ಉಳಿಸಿ, ಬೆಳೆಸುವ ಕಾಯಕ ಯೋಗಿ. ಇತ್ತೀಚೆಗೆ ‘ವಿಸ್ಮಯ ಜಾದೂ ಪ್ರತಿಷ್ಠಾನ’ ಆರಂಭಿಸಿರುವ ಅವರ ಆಶಯ ಫಲಪ್ರದವಾಗಲೆಂಬ ಹಾರೈಕೆ ನಮ್ಮದು. ಜಾದೂಗಾರರ ದಿನಾಚರಣೆಯ ಪ್ರಯುಕ್ತ ಅವರು ಈ ಲೇಖನ ಬರೆದಿದ್ದಾರೆ. ಅವರ ಸಾಧನೆ ವಿಶ್ವ ಮಟ್ಟಕ್ಕೇರಲಿ ಎಂದು ಶುಭ ಕೋರುತ್ತೇವೆ.
-ಸಂ

(Originally published on February 19, 2012)

Leave a comment

Your email address will not be published. Required fields are marked *

Latest News